ಪುಷ್ಪ ಸಿನಿಮಾ ಇಂದು ಅಮೆಜಾನ್ ನಲ್ಲಿ ರಿಲೀಸ್ : OTT ಇಂದ ಸಿಕ್ಕ ಒಟ್ಟು ಹಣವೆಷ್ಟು ಗೊತ್ತಾ..??
ಡಿಸೆಂಬರ್ 24 ರಂದು ವಿಶ್ವಾದ್ಯಂತ ರಿಲೀಸ್ ಆಗಿ ಬಾಕ್ಸ್ ಆಫೀಸ್ ನಲ್ಲಿಧೂಳೆಬ್ಬಿಸುತ್ತಾ ಅನೇಕ ಬಿಗ್ ಬಜೆಟ್ ಸಿನಿಮಾಗಳ ಬಾಕ್ಸ್ ಆಫೀಸ್ ಕಲೆಕ್ಷನ್ ರೆಕಾರ್ಡ್ ಮುರಿದಿರುವ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾ ಇಂದು ( ಜನವರಿ 7ಕ್ಕೆ ) ಅಮೆಜಾನ್ ಪ್ರೈಮ್ ನಲ್ಲಿ ಐದೂ ಭಾಷೆಗಳಲ್ಲಿ ರಿಲೀಸ್ ಆಗಲಿದ್ದು , ವೀಕ್ಷಣೆಗೆ ಲಭ್ಯವಾಗಲಿದೆ..
ಹೌದು ಪುಷ್ಪರಾಜ್ ಆಗಿ ಅಅಲ್ಲು ಡಿಫರೆಂಟ್ ಹಾಗೂ ಡಿ ಗ್ಲಾಮ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಸಿನಿಮಾ ಸೂಪರ್ ಹಿಟ್ ಆಗಿದೆ.. ಇನ್ನೂವರೆಗೂ ಸಕ್ಸಸ್ ಫುಲ್ ಪ್ರದರ್ಶನ ಕಾಣ್ತಿದೆ.,. ಈ ‘ಪುಷ್ಪರಾಜ್’ ಅಮೇಜಾನ್ ಪ್ರೈಮ್ ಗೆ ಎಂಟ್ರಿಕೊಡೋಕೆ ಸಜ್ಜಾಗಿದ್ದು , ಈ ಬಗ್ಗೆ ಇತ್ತೀಚೆಗಷ್ಟೇ ಅಮೇಜಾನ್ ಪ್ರೈಮ್ ಟ್ವೀಟ್ ಮಾಡಿ ಮಾಹಿತಿ ನೀಡಿತ್ತು..
ಆದ್ರೆ ಸದ್ಯಕ್ಕೆ ಎಲ್ರಲ್ಲೂ ಕಾಡ್ತಿರುವ ಪ್ರಶ್ನೆ ಸುಮಾರು 300 ಕೋಟಿ ಬಜೆಟ್ ನ ಈ ಸಿನಿಮಾನವನ್ನ ಅಮೇಜಾನ್ ಪ್ರೈಮ್ ಎಷ್ಟು ಮೊತ್ತಕ್ಕೆ ಖರೀದಿಸಿದೆ ಎನ್ನುವುದು.. ಇದಕ್ಕೆ ಕೆಲ ಮೂಲಗಳಿಂದ ಉತ್ತರ ಸಿಕ್ಕಿದ್ದು , ಸಿಸಿಪ್ರೇಕ್ಷಕರು ಹುಬ್ಬೇರಿಸಿದ್ದಾರೆ.. ಈ ಸಿನಿಮಾಗೆ ಅಮೇಜಾನ್ ಪ್ರೈಮ್ 30 ಕೋಟಿ ರೂಗಳನ್ನ ಕೊಟ್ಟು ಖರೀದಿಸಿದೆ ಎನ್ನಲಾಗಿದೆ..
ಅಂದ್ಹಾಗೆ ಈ ಸಿನಿಮಾ ಈವರೆಗೂ ಥಿಯೇಟರ್ ಗಳಲ್ಲಿ ವಿಶ್ವಾದ್ಯಂತ ಸುಮಾರು 307 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರೋದಾಗಿ ತಿಳಿದುಬಂದಿದೆ.. ಇದೀಗ ಅಮೇಜಾನ್ ನಲ್ಲೂ ಅಬ್ಬರಿಸಲು ‘ಪುಷ್ಪರಾಜ್’ ಸಜ್ಜಾಗಿದ್ದು , ಇಂದು ಸಂಜೆ ರಿಲೀಸ್ ಆಗುವ ಸಿನಿಮಾ ವೀಕ್ಷಣೆಗೆ ಅಭಿಮಾನಿಗಳು ಕಾತರದಿಂದಿದ್ಧಾರೆ..








