ಧಾರವಾಡ : ಬೆಂಗಳೂರಿನ ರಾಷ್ಟ್ರೀಯ ಅಹಿಂದ ಸಂಘಟನೆಯ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಪುಟ್ಟರಾಜ ಹೂಗಾರ ನೇಮಕಗೊಂಡಿದ್ದಾರೆ.
ಸಂವಿಧಾನದ ಮೌಲ್ಯಗಳ ಅನುಪಾಲನೆಯೊಂದಿಗೆ ಸಮಾಜದ ಎಲ್ಲ ವರ್ಗ ಮತ್ತು ಸಮುದಾಯಗಳ ಜನತೆಯ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಹಕ್ಕುಗಳ ಪರ ನ್ಯಾಯಯುತ ಸಂಘಟನೆಗೆ ಶ್ರಮಿಸುವಂತೆ ಇವರಿಗೆ ಸೂಚಿಸಲಾಗಿದೆ ಎಂದು ರಾಷ್ಟ್ರೀಯ ಅಹಿಂದ ಸಂಘಟನೆಯ ರಾಜ್ಯಾಧ್ಯಕ್ಷ ಮುತ್ತಣ್ಣ ಶಿವಳ್ಳಿ, ಕಾರ್ಯಾಧ್ಯಕ್ಷ ಗುರುನಗೌಡ ಪಾಟೀಲ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರೊ. ಬೀರಲಿಂಗೇಶ್ವರ ಪೂಜಾರಿ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯ ಹೂಗಾರ ಸಮಾಜದ ಸುರೇಶ ಹೂಗಾರ, ಎ. ಎಚ್. ಹೂಗಾರ, ಎಸ್.ಪಿ. ಹೂಗಾರ, ವಿಶ್ವನಾಥ ಹೂಗಾರ ಅವರು ಈ ನೇಮಕವನ್ನು ಸ್ವಾಗತಿಸಿ ಪುಟ್ಟರಾಜ ಹೂಗಾರ ಅವರನ್ನು ಅಭಿನಂದಿಸಿದ್ದಾರೆ.