ಪುತ್ತೂರಲ್ಲಿ ಇಂದು 6 ಮಂದಿಗೆ ಕೊರೊನಾ ದೃಢ
ಪುತ್ತೂರು : ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ 4 ಮತ್ತು ಗ್ರಾಮಾಂತರದಲ್ಲಿ ಇಬ್ಬರಿಗೆ ಹೆಮ್ಮಾರಿ ಕೊರೊನಾ ಸೋಂಕು ದೃಢಪಟ್ಟಿರುವುದಾಗಿ ತಾಲೂಕು ಆರೋಗ್ಯ ಇಲಾಖೆ ತಿಳಿಸಿದೆ.
ಪುತ್ತೂರು ನಗರಸಭೆ ವ್ಯಾಪ್ತಿಯ ಮೊಟ್ಟೆತ್ತಡ್ಕದ 30 ವರ್ಷದ ವ್ಯಕ್ತಿ, ಕತ್ತಾರಿನಿಂದ ಬಂದು ಕ್ವಾರಂಟೈನ್ ನಲ್ಲಿರುವ 37 ವರ್ಷದ ವ್ಯಕ್ತಿ, ನೆಹರುನಗರದ 25 ವ್ಯಕ್ತಿ, ಅಮೆರಿಕಾದಿಂದ ಬಂದು ಪುತ್ತೂರು ಖಾಸಗಿ ಲಾಡ್ಜ್ ನಲ್ಲಿ ಕ್ವಾರಂಟೈನ್ನಲ್ಲಿರುವ 64 ವರ್ಷದ ಮಹಿಳೆಗೆ ಮಹಾಮಾರಿ ಸೋಂಕಿರೋದು ದೃಢಪಟ್ಟಿದೆ.
ಇನ್ನು ಗ್ರಾಮಾಂತರ ವ್ಯಾಪ್ತಿಯ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಶಾಂತಿಗೋಡಿನ 55 ವರ್ಷದ ವ್ಯಕ್ತಿ ಮತ್ತು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಕಡಬ ತಾಲೂಕಿನ ಕೊಣೆಮಜಲು ನಿವಾಸಿ 22 ವರ್ಷದ ಯುವತಿಗೆ ಸೋಂಕು ದೃಢಪಟ್ಟಿದೆ.








