ಭಾರತದ ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ ಈಗ ಕೋವಿಡ್-19 ಕ್ವಾರಂಟೈನ್ ಕೇಂದ್ರ
ಕೊಲ್ಕತ್ತಾದ ಈಡನ್ ಗಾರ್ಡನ್.. ಅಂದ ತಕ್ಷಣ ನೆನಪಾಗೋದು ಕ್ರಿಕೆಟ್.. ಹೌದು, ಈಡನ್ ಗಾರ್ಡನ್ ಕ್ರೀಡಾಂಗಣವನ್ನು ಭಾರತದ ಕ್ರಿಕೆಟ್ ಕಾಶಿ ಅಂತ ಕರೆಯಲಾಗುತ್ತದೆ. ಹಲವು ರೋಚಕ ಪಂದ್ಯಗಳಿಗೆ ಸಾಕ್ಷಿಯಾಗಿರುವ ಈಡನ್ ಗಾರ್ಡನ್ ಮೈದಾನಕ್ಕೆ ತನ್ನದೇ ಆದ ಇತಿಹಾಸವಿದೆ. ಬಿಸಿಸಿಐ ಮಾಜಿ ಅಧ್ಯಕ್ಷ ದಿ. ಜಗಮೋಹನ್ ದಾಲ್ಮಿಯ, ಬಿಸಿಸಿಐ ಹಾಲಿ ಅಧ್ಯಕ್ಷ ಹಾಗೂ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿಯವರ ತವರೂರು.
ಆದ್ರೆ ಈ ಕ್ರೀಡಾಂಗಣ ಸದ್ಯಕ್ಕೆ ಕ್ರಿಕೆಟ್ ಕ್ರೀಡಾಂಣವಾಗಿಲ್ಲ. ಮೊದಲೇ ಕೋವಿಡ್ ನಿಂದಾಗಿ ಕ್ರಿಕೆಟ್ ಚಟುವಟಿಕೆಗಳು ಕೂಡ ಸ್ತಬ್ದಗೊಂಡಿದೆ. ಇದೀಗ ಈಡನ್ ಗಾರ್ಡನ್ ಕ್ರೀಡಾಂಗಣ ಕೋವಿಡ್ -19 ವಾರಿಯರ್ಸ್ ಪೋಲಿಸರಿಗೆ ಕ್ವಾರಂಟೈನ್ ಕೇಂದ್ರವಾಗಿದೆ.
ಕ್ರೀಡಾಂಗಣದ ಐದು ಗ್ಯಾಲರಿಗಳನ್ನು ಕೋವಿಡ್-19 ವಾರಿಯರ್ಸ್ಗಳಾದ ಕೊಲ್ಕತ್ತಾ ಪೊಲೀಸರ ಕ್ವಾರಂಟೈನ್ ಕೇಂದ್ರವನ್ನಾಗಿ ಮಾಡಲಾಗಿದೆ. ಇ, ಎಫ್, ಜಿ, ಎಚ್ ಗ್ಯಾಲರಿಗಳಲ್ಲಿ ಕ್ವಾರಂಟೈನ್ಗೆ ಸೀಮಿತಗೊಳಿಸಲಾಗಿದೆ. ಮೊದಲ ಹಂತದಲ್ಲಿ ಇ ಮತ್ತು ಎಫ್ ಬ್ಲ್ಯಾಕ್ಗಳಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಎಫ್ ಬ್ಲ್ಯಾಕ್ ಅನ್ನು ಡಾಕ್ಟರ್ ಗಳಿಗೆ ಮೀಸಲಿಡಲಾಗಿದೆ. ಇಲ್ಲಿಂದ ಕ್ವಾರಂಟೈನ್ಗೆ ಒಳಪಟ್ಟವರ ಮೇಲೆ ನಿಗಾ ಇಡಲಾಗುತ್ತದೆ ಎಂದು ಪಶ್ಚಿಮ ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾದ ಅವಿಶೇಕ್ ದಾಲ್ಮಿಯಾ ಹೇಳಿದ್ದಾರೆ.
ಇದೇ ವೇಳೆ ಪಶ್ಚಿಮ ಬಂಗಾಳ ಕ್ರಿಕೆಟ್ ಸಂಸ್ಥೆಯು ಅಂಪೈರ್, ಸ್ಕೋರರ್ಗಳ ವೇತನವನ್ನು ನೀಡಲಾಗಿದೆ ಎಂದು ಇದೇ ವೇಳೆ ಅವಿಶೇಕ್ ದಾಲ್ಮಿಯಾ ತಿಳಿಸಿದ್ದಾರೆ.