ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲ ಒಂದು ಚಾಲೆಂಜ್ ಟ್ರೆಂಡ್ ಆಗುತ್ತಲೇ ಇರುತ್ತದೆ. ಅದರಲ್ಲೂ ಲಾಕ್ ಡೌನ್ ಘೋಷಣೆ ಬಳಿಕವಂತೂ ವಿಚಿತ್ರ ವಿಚಿತ್ರ ಚಾಲೆಂಜ್ ಗಳು ಹುಟ್ಟಿಕೊಳ್ಳುತ್ತಿದೆ. ಅದರಂತೆ ಈಗೊಂದು ಹೊಸ ಚಾಲೆಂಜ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದೆ.
https://www.instagram.com/p/B-wYnp-D0IP/?utm_source=ig_web_button_share_sheet
ಕ್ವಾರಂಟೈನ್ ಪಿಲ್ಲೋ ಚಾಲೆಂಜ್ ಹೆಸರಲ್ಲಿ ಶುರುವಾಗಿರುವ ಈ ಗೇಮ್ ವಿಭಿನ್ನವಾಗಿದೆ. ಮೊದಲು ನಿಮ್ಮನ್ನ ನಾಮಿನೇಟ್ ಮಾಡಿ, ಟ್ಯಾಗ್ ಮಾಡಿ ಆ ಚಾಲೆಂಜ್ ನೀವು ಸ್ವೀಕರಿಸಲು ಕೇಳಲಾಗುತ್ತೆ. ಇದರಲ್ಲಿ ಕೇವಲ ತಲೆದಿಂಬನ್ನು ಬಟ್ಟೆಯಂತೆ ಧರಿಸಬೇಕು. ತಲೆದಿಂಬಿನಿಂದ ಮೈಮುಚ್ಚಿಕೊಂಡು ಅದಕ್ಕೆ ಬೆಲ್ಟ್ ಹಾಕಿ ಪೋಸ್ ಕೊಟ್ಟು ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಅಪ್ ಲೋಡ್ ಮಾಡಬೇಕು.
ಸದ್ಯ ಈ ಚಾಲೆಂಜ್ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ಸಾಕಷ್ಟು ಮಂದಿ ದಿಂಬನ್ನೇ ಡ್ರೆಸ್ ಮಾಡ್ಕೊಂಡು ಸಖತ್ ಪೋಸ್ ಕೊಟ್ಟು ಫೋಟೋ ಅಪ್ ಲೋಡ್ ಮಾಡುತ್ತಿದ್ದಾರೆ.






