ಬಾಗಲಕೋಟೆ , ಮೇ 17 : ಇನ್ಸ್ಟಿಟ್ಯೂಟಲ್ ಕ್ವಾರಂಟೈನ್ ನಲ್ಲಿ ತಮ್ಮ ಜೊತೆಗೆ ಮಹಾರಾಷ್ಟ್ರದಿಂದ ಬಂದವರನ್ನು ಇಟ್ಟಿದ್ದಕ್ಕೆ ಗೋವಾದಿಂದ ಬಂದ ಜನರು ಆಕ್ರೋಶ ಹೊರಹಾಕಿದ ಘಟನೆ ಬಾಗಲಕೋಟೆ ನವನಗರದ ಸೆಕ್ಟರ್ ನಂಬರ್ ೪೬ ರಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ. ಕ್ವಾರಂಟೈನ ನಲ್ಲಿರುವ ಗೋವಾದಿಂದ ಬಂದವರು ಅಧಿಕಾರಿಗಳ ಜೊತೆ ವಾಗ್ವಾದ ನಡಿಸಿ ಮಹಾರಾಷ್ಟ್ರದಲ್ಲಿ ಕರೊನಾ ಸೋಂಕು ಜಾಸ್ತಿ ಇದೆ. ಅಲ್ಲಿಂದ ಬಂದವರ ಜೊತೆ ನಮ್ಮನ್ನ ಸೇರಿಸಬೇಡಿ ಅಂತ ಗೋವಾ ಕನ್ನಡಿಗರ ಅಸಮಧಾನ ಹೊರ ಹಾಕಿದ್ದಾರೆ. ನಮ್ಮನ್ನು ಬೇಕಿದ್ದರೆ ಗುಡ್ಡದಲ್ಲಿ ಇಡಿ. ಅಲ್ಲೇ ಇರ್ತೇವಿ.
ಯಾವುದೇ ಕಾರಣಕ್ಕೂ ಮಹಾರಾಷ್ಟ್ರದವರ ಜೊತೆ ಸೇರಿಸಬೇಡಿ ಅಂತ ವಾಗ್ವಾದ ನಡೆಸಿದ್ರು. 140 ಕ್ಕೂ ಹೆಚ್ಚು ಜನರನ್ನು ಕ್ವಾರಂಟೈನ್ ಗೆ ಇಡಲಾಗಿದೆ. ಉಪಹಾರ ಇಲ್ಲದೆ ಕ್ವಾರಂಟೈನ್ ನಲ್ಲಿ ಇರುವ ಜನರ ಆಕ್ರೋಶ ಹೊರ ಹಾಕಿದ್ದಾರೆ. ಬೆಳಗ್ಗೆ 10.30 ಕ್ಕೆ ಬಂದ ಉಪಹಾರ, ಚಿಕ್ಕಚಿಕ್ಕ ಮಕ್ಕಳು ಇದ್ದಾರೆ. ಬೆಳಗ್ಗೆ 10 ಗಂಟೆಯಾದರೂ ಅವರಿಗೆ ಏನೂ ಕೊಡಲ್ಲ ಅಂದ್ರೆ ಇಲ್ಲಿ ಹೇಗೆ ಇರಬೇಕು ಎಬ್ನುವ ಪ್ರಶ್ನೆಯನ್ನು ಅಧಿಕಾರಿಗಳ ಮುಂದಿಟ್ಟು ಆಕ್ರೋಶ ಹೊರ ಹಾಕಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಬಾಗಲಕೋಟೆ ತಹಶೀಲ್ದಾರ್ ಗುರುಸಿದ್ದಯ್ಯ ಹಿರೇಮಠ ಭೇಟಿ ನೀಡಿದ್ರು. ಈ ವೇಳೆ ತಹಶೀಲ್ದಾರ್ ಎದುರು ಕೂಲಿ ಕಾರ್ಮಿಕರು ಅಳಲು ತೋಡಿಕೊಂಡರು.








