ಕತಾರ್ ನಲ್ಲಿ ಶ್ವಾನಗಳ ಮಾರಣ ಹೋಮ : 29 ನಾಯಿಗಳಿಗೆ ಗುಂಡು ಹಾರಿಸಿ ಕೊಲೆ
29 ನಾಯಿಗಳನ್ನ ಕಾಂಪೌಂಡ್ ಒಂದರೊಳಗೆ ಕೂಡಿ ಹಾಕಿ ರೈಫಲ್ ನಿಂದ ಗುಂಡುಹಾರಿಸಿ ಕೊಂದು ಪೈಶಾಚಿಕತೆ ಮೆರೆದಿರುವ ಹೇಯ ಕೃತ್ಯ ಕತಾರ್ ನಲ್ಲಿ ನಡೆದಿದೆ..
ಗಲ್ಫ್ ಒಕ್ಕೂಟದ ರಾಷ್ಟ್ರ ಕತಾರ್ ನ ದೋಹಾದಲ್ಲಿ ಈ ಘಟನೆುಯು ಜುಲೈ 10ರಂದು ನಡೆದಿದ್ದು , ತಡವಾಗಿ ಬೆಳಕಿಗೆ ಬಂದಿದೆ..
ದೋಹಾದಲ್ಲಿನ ಫ್ಯಾಕ್ಟರಿ ಒಂದರ ಗೇಟ್ ನೊಳಗೆ ನಾಯಿಗಳನ್ನು ಮೊದಲು ಕೂಡಿಹಾಕಲಾಗಿದೆ. ಬಳಿಕ ಅವುಗಳಿಗೆ ಆಹಾರ ನೀಡುವ ನೆಪದಲ್ಲಿ ಹತ್ಯೆ ಮಾಡಲಾಗಿದೆ ಎಂದು ಪ್ರಾಣಿದಯಾ ಸಂಘಟನೆ ಹೋರಾಟಗಾರರು ಹೇಳಿದ್ದಾರೆ.
ಈ ಘಟನೆಯಲ್ಲಿ ಪುಟ್ಟ ಪುಟ್ಟ ನಾಯಿ ಮರಿಗಳೂ ಮೃತಪಟ್ಟಿವೆ.. ಸಾವನಪ್ಪಿದ ನಾಯಿಗಳ ಪೈಕಿ ಎರೆಡು ನಾಯಿಗಳು ಗರ್ಭ ಧರಿಸಿದ್ದವು ಎನ್ನಲಾಗಿದೆ..
ಗೇಟ್ ಹಾಕಿದ ಬಳಿಕ ರೈಫಲ್ ಹೊಂದಿದ್ದ ಇಬ್ಬರು ವ್ಯಕ್ತಿಗಳು ನಾಯಿಗಳತ್ತ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ನಾಯಿಗಳ ಕೆಲೆಗೆ ನಿಖರ ಕಾರಣ ಈವರೆಗೂ ತಿಳಿದುಬಂದಿಲ್ಲ..
ಇಸ್ಲಾಂನಲ್ಲಿ ನಾಯಿಗಳನ್ನು ಅಶುದ್ಧ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಹತ್ಯೆ ಮಾಡಿರುವ ಸಾಧ್ಯತೆಯಿದೆ ಎಂದು ಆರೋಪಿಸಲಾಗ್ತಿದೆ..
ನಾಯಿಗಳ ಸಾಮೂಹಿಕ ಹತ್ಯೆ ಬಗ್ಗೆ ಕತಾರ್ ಆಡಳಿತ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಕತಾರ್ ಆಡಳಿತಗಾರರ ಸಹೋದರಿ ಶೇಖಾ ಅಲ್ ಮಯಾಸ ಬಿಂಟ್ ಹಮಾದ್ ಅಲ್ ಥಾನಿ ಈ ಕೃತ್ಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಖಂಡಿಸಿದ್ದಾರೆ.








