ಇರ್ಫಾನ್ ಪಠಾಣ್ಗೂ ಕೋವಿಡ್ ಸೋಂಕು.. !
Questions over T20 tournament as Irfan tests positive
ಟೀಮ್ ಇಂಡಿಯಾದ ಮಾಜಿ ಆಲ್ ರೌಂಡರ್ ಇರ್ಫಾನ್ ಪಠಾಣ್ಗೆ ಕೋವಿಡ್ ಸೋಂಕುನಿಂದ ಬಳಲುತ್ತಿದ್ದಾರೆ.
ಈಗಾಗಲೇ ಎಸ್. ಬದ್ರಿನಾಥ್, ಸಚಿನ್ ತೆಂಡುಲ್ಕರ್ ಹಾಗೂ ಯುಸೂಫ್ ಪಠಾಣ್ ಕೂಡ ಕೋವಿಡ್ ಸೋಂಕುಗೆ ಒಳಗಾಗಿ ಮನೆಯಲ್ಲೇ ಕ್ವಾರಂಟೈನ್ ನಲ್ಲಿದ್ದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೋವಿಡ್ ಟೆಸ್ಟ್ ನಲ್ಲಿ ಪಾಸಿಟಿವ್ ಆಗಿದೆ, ನಾನು ಮನೆಯಲ್ಲೇ ಕ್ವಾರಂಟೈನ್ ನಲ್ಲಿದ್ದುಕೊಂಡು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ನನಗೆ ಯಾವುದೇ ರೀತಿಯ ಕೋವಿಡ್ ಲಕ್ಷಣಗಳಿಲ್ಲ ಎಂದಿರುವ ಇರ್ಫಾನ್ ಪಠಾಣ್ ಸಾರ್ವಜನಿಕರಲ್ಲಿ ಎಚ್ಚರಿಕೆಯಿಂದ ಇರಿ ಎಂದಿದ್ದಾರೆ. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ, ಮಾಸ್ಕ್ ಹಾಕುವುದನ್ನು ಮರೆಯಬೇಡಿ. ನನ್ನ ಜೊತೆ ಸಂಪರ್ಕ ಹೊಂದಿದವರು ತಕ್ಷಣವೇ ಟೆಸ್ಟ್ ಮಾಡಿಕೊಳ್ಳಿ ಎಂದು ಇರ್ಫಾನ್ ಪಠಾಣ್ ಮನವಿ ಮಾಡಿಕೊಂಡಿದ್ದಾರೆ.
ಇತ್ತೀಚೆಗೆ ನಡೆದ ರೋಡ್ ಸೇಫ್ಟಿ ವಲ್ರ್ಡ್ ಸಿರೀಸ್ ಕ್ರಿಕೆಟ್ ಟೂರ್ನಿಯಲ್ಲಿ ಆಡಿರುವ ಭಾರತದ ನಾಲ್ಕು ಮಂದಿ ಕ್ರಿಕೆಟಿಗರಿಗೆ ಕೋವಿಡ್ ಸೋಂಕು ತಗುಲಿದೆ, ರಾಯ್ ಪುರದ ಶಾಹೀದ್ ವೀರ್ ಸಿಂಗ್ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಟೂರ್ನಿಯಲ್ಲಿ ಪಂದ್ಯವನ್ನು ನೋಡಲು ಪ್ರೇಕ್ಷಕರಿಗೂ ಅವಕಾಶ ನೀಡಲಾಗಿತ್ತು. ಈ ಟೂರ್ನಿಯಲ್ಲಿ ಭಾರತದ ಮಾಜಿ ಆಟಗಾರರ ತಂಡ ಪ್ರಶಸ್ತಿ ಗೆದ್ದುಕೊಂಡಿತ್ತು.