ಕೊರೊನಾ ಹರಡುವಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ದೇಶ 21 ದಿನಗಳ ಕಾಲ ಲಾಕ್ ಡೌನ್ ಆಗಿದೆ. ಹಾಗಾಗಿ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. ಅಲ್ಲದೆ ಅಗತ್ಯ ವಸ್ತುಗಳನ್ನು ಪಡೆಯಲು ಮುಗಿ ಬೀಳುತ್ತಿದ್ದಾರೆ. ಜೊತೆಗೆ ವಸ್ತುಗಳು ಪಡೆಯಲು ಕೈಯಲ್ಲಿ ಹಣ ಇಲ್ಲ ಎಂದು ಚಿಂತಿಸುವ ಪರಿಸ್ಥಿತಿ ಬಂದಿದೆ. ಆದ್ದರಿಂದ ಎಟಿಎಂ ಮುಂದೆ ಕ್ಯೂ ನಿಲ್ಲುವ ಕೆಲಸಕ್ಕೆ ಮುಂದಾಗಿದ್ದಾರೆ. ಆದರೆ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಮನೆಯಲ್ಲಿ ಕುಳಿತು ಹಣ ಪಡೆಯುವ ವ್ಯವಸ್ಥೆ ಬ್ಯಾಂಕ್ ಗಳು ಕಲ್ಪಿಸುತ್ತಿವೆ. ಎಸ್.ಬಿ.ಐ, ಆಕ್ಸಿಸ್, ಕೊಟಾಕ್ ನಂತಹ ಬ್ಯಾಂಕ್ ಗಳನ್ನು ಗ್ರಾಹಕರ ಮನೆಗೆ ಹಣ ತಲುಪಿಸುವ ಕೆಲಸ ಮಾಡುತ್ತಿವೆ.
ಹಣ ಹೇಗೆ ಪಡೆಯುವುದು
ಐಸಿಐಸಿಐ ಬ್ಯಾಂಕಿನ ವೆಬ್ ಸೈಟ್ ಪ್ರಕಾರ, ಬ್ಯಾಂಕ್ ವೆಬ್ ಸೈಟ್ [email protected] ಗೆ ಲಾಗಿನ್ ಆಗಬೇಕು. ಕಸ್ಟಮ್ರ್ ಕೇರ್ ಗೆ ಕಾಲ್ ಮಾಡುವ ಮೂಲಕ ಈ ಹಣವನ್ನು ಪಡೆಯಬಹುದು. ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆವರೆಗೂ ಹಣಕ್ಕಾಗಿ ವಿನಂತಿಸಬಹುದು. ಎರಡು ಸಾವಿರದಿಂದ ಎರಡು ಲಕ್ಷ ರೂಪಾಯಿ ಹಣ ಪಡೆಯಬಹುದು. ವಿನಂತಿ ಸಲ್ಲಿಸಿದ ಎರಡು ಗಂಟೆಗಳಲ್ಲಿ ಹಣ ನಿಮ್ಮ ಮನೆ ತಲಪುತ್ತದೆ.








