ಸೋಮವಾರದಿಂದ ಲಾಕ್ ಡೌನ್ : ಎಣ್ಣೆಗೆ ಮುಗಿಬಿದ್ದ ಮದ್ಯಪ್ರಿಯರು liquor
ಮಂಡ್ಯ : ರಾಜ್ಯದಲ್ಲಿ ಸೋಮವಾರದಿಂದ ಸಂಪೂರ್ಣ ಲಾಕ್ ಡೌನ್ ಜಾರಿಯಾಗಲಿದ್ದು, ಇಂದಿನಿಂದಲೇ ಮದ್ಯದಂಗಡಿಗಳ ಮುಂದೆ ಜನರು ಮದ್ಯ ಖರೀದಿಗೆ ಮುಗಿಬಿದ್ದಿದ್ದಾರೆ.
ಸೋಮವಾರದಿಂದ 14 ದಿನಗಳ ಕಾಲ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ಬಾರ್ ಗಳು ಬಂದ್ ಆಗಲಿವೆ.
ಈ ಹಿನ್ನೆಲೆಯಲ್ಲಿ ಮದ್ಯಪ್ರಿಯರು ಮದ್ಯ ಖರೀದಿಗೆ ಸಾಲುಗಟ್ಟಿದ್ದಾರೆ. ಕಳೆದ ವರ್ಷ ಲಾಕ್ಡೌನ್ ಸಮಯದಲ್ಲೂ ಇದೇ ದೃಶ್ಯಗಳು ಕಂಡುಬಂದಿದ್ದವು.
ಈ ವರ್ಷವೂ ಕೂಡ ಮದ್ಯ ಶೇಖರಣೆಗೆ ಮುಂದಾಗಿದ್ದಾರೆ.
ಇನ್ನು ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಜೋರಾಗಿ ಬೀಸುತ್ತಿದ್ದು, ದಿನಂಪ್ರತಿ 50 ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗುತ್ತಿವೆ. ನಿನ್ನೆ ಒಂದೇ ದಿನ 500ಕ್ಕೂ ಹೆಚ್ಚು ಮಂದಿ ಕೊನೆಯುಸಿರೆಳೆದಿದ್ದಾರೆ.
ಹಿನ್ನೆಲೆ ರಾಜ್ಯಾದ್ಯಂತ ಮೇ10ರಿಂದ 24ರವರೆಗೆ 14 ದಿನಗಳ ಕಾಲ ಲಾಕ್ ಡೌನ್ ವಿಧಿಸಿ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.










