ನೈಟ್ ಕರ್ಫ್ಯೂ ಸಮಯ, ವೀಕೆಂಡ್ ಕರ್ಫ್ಯೂ ಬಗ್ಗೆ ಆಗಸ್ಟ್ 15ರ ನಂತರ ತುರ್ತು ಸಭೆಯಲ್ಲಿ ನಿರ್ಧಾರ – ಆರ್ ಅಶೋಕ್
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಹಾವಳಿ ದಿನೇ ದಿನೇ ಹೆಚ್ಚಾಗ್ತಲೇ ಇದ್ದು, ಕೊರೊನಾ ನಿಯಂತ್ರಣಕ್ಕೆ ಇನ್ನಷ್ಟು ಕಠಿಣ ಕ್ರಮಗಳನ್ನ ಕೈಗೊಳ್ಳುವ ಚಿಂತನೆಯಲ್ಲಿ ಸರ್ಕಾರವಿದೆ.. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿರುವ ಕಂದಾಯ ಸಚಿವ ಆರ್. ಅಶೋಕ್ ಅವರು ಕೊರೊನಾ ಸೋಂಕು ನಿಯಂತ್ರಣಕ್ಕೆ ಕಠಿಣ ನಿಯಮ ಜಾರಿ ನಿಟ್ಟಿನಲ್ಲಿ ಆಗಸ್ಟ್ 15ರ ಬಳಿಕ ತುರ್ತು ಸಭೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಅಲ್ಲದೇ ಕೋವಿಡ್ ನಿಯಂತ್ರಣಕ್ಕೆ ಸ್ಲೋ ಮೆಡಿಸಿನ್ ನೀಡುತ್ತೇವೆ. ನೈಟ್ ಕರ್ಫ್ಯೂ ಸಮಯ, ದೇವಸ್ಥಾನ, ಸಾರ್ವಜನಿಕ ಸಭೆ, ಸಮಾರಂಭಗಳಿಗೆ ನಿಯಂತ್ರಣ ವಿಧಿಸುತ್ತೇವೆ. ಈ ಬಗ್ಗೆ ಆಗಸ್ಟ್ 15ರ ನಂತರ ತುರ್ತು ಸಭೆ ಕರೆದು ನಿರ್ಧರಿಸಲಾಗುವುದು ಎಂದಿದ್ದಾರೆ.
ಮೇಕೆದಾಟು : ಬೊಮ್ಮಾಯಿ ಗಟ್ಟಿ ನಿರ್ಧಾರಕ್ಕೆ ನಮ್ಮ ಬೆಂಬಲ , ಆದ್ರೆ ಒಡಕು ಬಾಯಿಗಳನ್ನ ಮುಚ್ಚಿಸಿ – ಸಿದ್ದರಾಮಯ್ಯ
ಇದೇ ವೇಳೆ ಕರ್ನಾಟಕ ಸ್ಟ್ಯಾಂಪ್ ವಿಧೇಯಕ ತಿದ್ದುಪಡಿ ಮಾಡಿದ್ದೇವೆ. 45 ಲಕ್ಷ ಫ್ಲ್ಯಾಟ್ ಖರೀದಿಸುವವರಿಗೆ ಸ್ಟ್ಯಾಂಪ್ ಡ್ಯೂಟಿಯನ್ನು ಶೇ.5ರಿಂದ 3ಕ್ಕೆ ಇಳಿಸಲಾಗಿದೆ ಎಂದು ತಿಳಿಸಿದ್ದಾರೆ.. ಒಟ್ಟಾರೆ ಆಗಸ್ಟ್ 15 ನಂತರ ತುರ್ತು ಸಭೆ ಬಳಿಕ ವೀಕೆಂಡ್ ಕರ್ಫ್ಯೂ , ನೈಟ್ ಕರ್ಫ್ಯೂ ಭವಿಷ್ಯ ನಿರ್ಧಾರವಾಗಲಿದೆ.
ಕರ್ನಾಟದಲ್ಲಿ ಇಟಾ ಆತಂಕ – ಏನಿದು ಇಟಾ ವೈರಸ್…?