ಬೆಂಗಳೂರು : ಆರ್.ಆರ್. ನಗರದಲ್ಲಿ ಬಂಡೆ ಆಟ, ಕನಕಪುರದ ಆಟ ನಡೆಯಲ್ಲ. ಇಲ್ಲಿ ರಾಜರಾಜೇಶ್ವರಿ ನಗರದ ಆಟನೇ ನಡೆಯೋದು. ಬಂಡೆ ಸಂಸ್ಕೃತಿಗೆ ಈ ಕ್ಷೇತ್ರದ ಜನ ಬೆಲೆ ಕೊಡಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಆರ್.ಆರ್. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್.ಆರ್. ನಗರದ ಜನ ಸುಸಂಸ್ಕೃತರು, ಪ್ರಜ್ಞಾವಂತರು.
ಇಲ್ಲಿನ ಜನ ವಿನಯಕ್ಕೆ, ಸಂಸ್ಕೃತಿಗೆ ಬೆಲೆ ಕೊಡೋರು. ದಾದಾಗಿರಿಗೆ, ಗೂಂಡಾಗಿರಿಗೆ ಇಲ್ಲಿನ ಜನ ಬೆಲೆ ಕೊಡಲ್ಲ ಎಂದು ಡಿ.ಕೆ. ಶಿವಕುಮಾರ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ಆರ್.ಆರ್ ನಗರದಲ್ಲಿ ಜಾತಿ ಆಧಾರಿತ ರಾಜಕಿಯ ಇಲ್ಲ. ನಾನೂ ಒಕ್ಕಲಿಗನೇ. ಕ್ಷೇತ್ರದಲ್ಲಿ ಒಕ್ಕಲಿಗರ ಪಾಳಯಗಾರಿಕೆ ತಗೊಳ್ಳಲು ಯಾರಿಂದಲೂ ಸಾಧ್ಯವಿಲ್ಲ.
ಯಾಕಂದ್ರೆ ಇಲ್ಲಿ ಕಾಂಗ್ರೆಸ್ ಗೆ ತಳವೇ ಇಲ್ಲ. ಇಲ್ಲಿನ ಜನ ಮುನಿರತ್ನ ಮುಖ ನೋಡಿ ಕಾಂಗ್ರೆಸ್ ಗೆಲ್ಲಿಸಿದ್ರು ಅಷ್ಟೇ ಹೊರತು ಡಿಕೆಶಿ, ಸಿದ್ದರಾಮಯ್ಯ ಮುಖ ನೋಡಿ ಅಲ್ಲ. ಬಿಜೆಪಿಗೆ ಜನ ಬೆಂಬಲ ಕೊಟ್ಟಿದ್ದಾರೆ.
ಆರ್.ಆರ್ ನಗರದಲ್ಲಿ ನಾನೇ ಉಸ್ತುವಾರಿ. ಹೀಗಾಗಿ ಮುನಿರತ್ನರನ್ನು ಗೆಲ್ಲಿಸೋ ಜವಾಬ್ದಾರಿ ನನ್ನ ಮೇಲಿದೆ.
ಗೋವಿಂದರಾಜು, ಕಮಕೇಶ್ ರಂಥ ಸ್ಥಳೀಯ ಮುಖಂಡರ ಸೇರ್ಪಡೆಯಿಂದ ನಮಗೆ ದೊಡ್ಡ ಶಕ್ತಿ ಬಂದಿದೆ.
ಇವರ ಸೇರ್ಪಡೆಯಿಂದ ಶೇ.80ರಷ್ಟು ನಾವು ಗೆದ್ದ ಹಾಗೆ. ಕಾಂಗ್ರೆಸ್ ನ ಒಂದೊಂದೇ ಕಂಬಗಳು ಇಲ್ಲಿ ಬೀಳುತ್ತಿವೆ ಎಂದು ಆರ್. ಅಶೋಕ್ ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel