ದೊಡ್ಡಬಳ್ಳಾಪುರಕ್ಕೆ ತೆರಳಿ ದಲಿತ ಕೇರಿಯ ಸಮಸ್ಯೆಗಳನ್ನ ಆಲಿಸುತ್ತೇನೆ : ಆರ್ ಅಶೋಕ್
ಬೆಂಗಳೂರು : ಕಂದಾಯ ಇಲಾಖೆ ಮಾತೃ ಇಲಾಖೆ. ಜನರ ಬಳಿಗೆ ಈ ಇಲಾಖೆ ಕೊಂಡೊಯ್ಯುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಡಿಸಿಗಳ ಜೊತೆ ಸಭೆ ನಡೆಸಿದ್ದೇವೆ 3ನೇ ಶನಿವಾರ ಅಧಿಕಾರಿಗಳು ಹಳ್ಳಿಗಳಲ್ಲಿ ಇರಬೇಕು. ವಿಸಿಂಟಿಂಗ್ ಅಧಿಕಾರಿಗಳಾಗಿ ಹೋಗಬಾರದು. ಅಲ್ಲಿನ ಸಮಸ್ಯೆಗಳನ್ನ ಅರಿಯಬೇಕು.
ಜನರ ಸಮಸ್ಯೆಗಳನ್ನ ಅರಿತು ಪರಿಹರಿಸಬೇಕು. ಹಳ್ಳಿಗರಿಗೆ ಕಚೇರಿ ಅಲೆಯುವುದಕ್ಕೆ ಸಾದಸ್ಯವಿಲ್ಲ. ಅದಕ್ಕೆ 2೦ ರಂದು 227 ಕಡೆ ಅಧಿಕಾರಿಗಳು ಹೋಗ್ತಾರೆ. ಪ್ರತಿ ತಾಲೂಕಿಗೆ ತಹಸೀಲ್ದಾರ್,ಎಸಿ ಭೇಟಿ ನೀಡ್ತಾರೆ. ಬೆಳಗ್ಗೆ ೧೦ ರಿಂದಲೇ ಅವರ ಕಾರ್ಯಕ್ರಮ ಸ್ಟಾರ್ಟ್ ಆಗುತ್ತೆ.
ಟೋಲ್ ಗಳಲ್ಲಿ ಚಾಲಕರು – ಟೋಲ್ ಸಿಬ್ಬಂದಿ ನಡುವೆ ವಾಗ್ವಾದ..!
ಅಂಗವಿಕಲರನ್ನ ಗುರ್ತಿಸಬೇಕು. ಕಣ್ಣಿಲ್ಲದವರು,ಪಿಂಚಣಿಯವರನ್ನ ಭೇಟಿ ಮಾಡಬೇಕು
ಅವರ ಸಮಸ್ಯೆಗಳನ್ನ ಪರಿಹರಿಸಬೇಕು. ಸರ್ಕಾರಿ ಭೂಮಿ ಗುರ್ತಿಸಿ ಅಲ್ಲಿ ಗಿಡನೆಡಬೇಕು. ಯಾವ ಗ್ರಾಮಕ್ಕೆ ಹೋಗ್ತಾರೆ ಅಲ್ಲಿ ಸ್ಕೂಲಲ್ಲೇ ಮಲಗಬೇಕು. ಹಾಸ್ಟೆಲ್ ಗಳಲ್ಲೇ ಪುರುಷ ಡಿಸಿ,ಎಸಿಗಳು ಮಲಗಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಇದೇ ವೇಳೆ ಮಹಿಳಾ ಡಿಸಿಗಳು ಗ್ರಾಮವಾಸ್ತ್ಯವಕ್ಕೆ ಒಪ್ಪಿದ್ದಾರೆ. ಪ್ರವಾಹ ಸಂತ್ರಸ್ಥರ ಸಮಸ್ಯೆಯನ್ನೂ ಬಗೆಹರಿಸ್ತಾರೆ. ಕೆಲವು ಕಡೆ ಕಾಲು ದಾರಿಗಳಿಲ್ಲ. ಅಂತಹ ಕಡೆ ಕಾಲು ದಾರಿಗಳನ್ನ ಮಾಡಬೇಕು. ಡಿಸಿಗಳು ಅಲ್ಲಿ ತೆರಳಿ ಸಮಸ್ಯೆ ಬಗೆಹರಿಸಬೇಕು. ಜನಪ್ರತಿನಿಧಿಗಳು ಕೂಡ 1 ಗಂಟೆ ಭಾಗಿಯಾಗಬೇಕು. ನಂತರ ಅಲ್ಲೇ ಅವರ ಸಮಸ್ಯೆ ಬಗೆಹರಿಸಬೇಕು. ಅಧಿಕಾರಿಗಳನ್ನ ಹಳ್ಳಿಗೆ ಕೊಂಡೊಯ್ಯಬೇಕು. ಈ ನಿಟ್ಟಿನಲ್ಲಿ ಕಂದಾಯ ಇಲಾಖೆ ಗಮನಹರಿಸಿದೆ ಎಂದಿದ್ದಾರೆ.
ಆಸ್ತಿಗಾಗಿ ತಂದೆಯನ್ನೇ ಕೊಂದಿದ್ದ ಮಗ – ಚಿಕ್ಕಪ್ಪ 1 ವರ್ಷದ ಬಳಿಕ ಅರೆಸ್ಟ್..!
ಮುಂದುವರೆದು ಮಾತನಾಡಿದ ಅವರು ನಾನು ಹೊಸಹಳ್ಳಿ ಗ್ರಾಮದಲ್ಲಿ ವಾಸ್ತವ್ಯ ಮಾಡ್ತೇನೆ. ದೊಡ್ಡಬಳ್ಳಾಪುರ ತಾಲೂಕಿನ ಹಳ್ಳಿ ಚಕ್ಕಡಿಯಲ್ಲಿ ಹೋಗಿ ದೇವರ ದರ್ಶನ ಮಾಡ್ತೇನೆ. ದಲಿತ ಕೇರಿಯ ಸಮಸ್ಯೆಗಳನ್ನ ಆಲಿಸುತ್ತೇನೆ. ನಂತರ ಹಳ್ಳಿಯ ಎಲ್ಲಾ ಮನೆಗಳಿಗೆ ಭೇಟಿ ನೀಡ್ತೇನೆ. ಅದೇ ಹಳ್ಳಿಯಲ್ಲಿ ಆರೋಗ್ಯ ಶಿಬಿರ ನಡೆಯುತ್ತೆ. ಅಲ್ಲಿನ ಸ್ಥಳೀಯ ಶಾಸಕರ ಜೊತೆ ಚರ್ಚಿಸುತ್ತೇನೆ. ಸಮಸ್ಯೆಗಳನ್ನ ಸರಿಪಡಿಸುತ್ತೇನೆ. ರಾತ್ರಿ ಸ್ಥಳೀಯ ಕಲಾವಿದರ ಜೊತೆ ಕೂರುತ್ತೇನೆ. ರಾತ್ರಿ ಒಬಿಸಿ ಹಾಸ್ಟೆಲ್ ನಲ್ಲೇ ವಾಸ್ತವ್ಯ ಹೂಡ್ತೇನೆ ಎಂದು ತಿಳಿಸಿದ್ದಾರೆ.