ADVERTISEMENT
Friday, October 30, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

31 ಲಕ್ಷ ಬೋಗಸ್ ಮತದಾರರ ಗುರುತಿನ ಚೀಟಿ ಮುದ್ರಣ; ₹20 ಕೋಟಿ ಹಗರಣದ ಆರೋಪ..!

admin by admin
October 30, 2026
in Newsbeat, State, ರಾಜ್ಯ
r-ashoka-31-lakh-voter-id-cards-printing-20-crore-scam-allegation-gba-election

r-ashoka-31-lakh-voter-id-cards-printing-20-crore-scam-allegation-gba-election

Share on FacebookShare on TwitterShare on WhatsappShare on Telegram

ಎಸ್‌ಐಆರ್ ಬಗ್ಗೆ ಮೊದಲೇ ಮಾಹಿತಿ ಇದ್ದರೂ ಟೆಂಡರ್ ಕರೆದ ರಾಜ್ಯ ಚುನಾವಣಾ ಆಯೋಗ; ಕಾಂಗ್ರೆಸ್ ಸರ್ಕಾರದಿಂದ ವೋಟ್ ಚೋರಿ ಸಂಚು: ಆರ್. ಅಶೋಕ ಆರೋಪ

ಜಿಬಿಎ ಚುನಾವಣೆಯಲ್ಲಿ ಅಕ್ರಮಕ್ಕೆ ಕಾಂಗ್ರೆಸ್ ಸಿದ್ಧತೆ; ತಪ್ಪಿಲ್ಲದಿದ್ದರೆ ಮುದ್ರಿಸಿರುವ ಗುರುತಿನ ಚೀಟಿಗಳನ್ನು ತಕ್ಷಣ ವಿತರಿಸಲಿ ಎಂದು ಸವಾಲು

Related posts

ಬಿಜೆಪಿ–ಜೆಡಿಎಸ್‌ ಒಗ್ಗಟ್ಟು 2028ರ ಚುನಾವಣೆಯಲ್ಲೂ ಮುಂದುವರಿಯಲಿದೆ, 150ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸವಿದೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

October 30, 2026
dk-shivakumar-karnataka-farmers-crop-loss-compensation-delay-fruits-aadhaar-dbt

ಮುಖ್ಯಮಂತ್ರಿ @DKShivakumar ಅವರೇ, ರೈತರಿಗೆ ಪರಿಹಾರ ವಿಳಂಬ ಮಾಡಲು ನಿಮ್ಮ ಸರ್ಕಾರಕ್ಕೆ ಇನ್ನೆಷ್ಟು ಕುಂಟು ನೆಪಗಳು ಬೇಕು?

October 30, 2026

ಬೆಂಗಳೂರು, ಅಕ್ಟೋಬರ್ 28: ರಾಜ್ಯದಲ್ಲಿ ಎಸ್‌ಐಆರ್ (ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ) ಪ್ರಕ್ರಿಯೆ ನಡೆಯಲಿದೆ ಎಂಬ ಮಾಹಿತಿ ಮೊದಲೇ ಇದ್ದರೂ, ರಾಜ್ಯ ಚುನಾವಣಾ ಆಯೋಗದ ಮೂಲಕ 90 ಲಕ್ಷ ಮತದಾರರ ಗುರುತಿನ ಚೀಟಿಗಳನ್ನು ಮುದ್ರಿಸಲು ಟೆಂಡರ್ ಕರೆದು ಬರೋಬ್ಬರಿ ₹20 ಕೋಟಿ ವೆಚ್ಚ ಮಾಡಲಾಗಿದೆ. ಇದರಲ್ಲಿ ಕಾಂಗ್ರೆಸ್ ಸರ್ಕಾರದ ಪಾತ್ರವಿದ್ದು, ಇದು ದೊಡ್ಡ ಮಟ್ಟದ ಹಗರಣವಾಗಿದೆ. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ರಾಜ್ಯ ಚುನಾವಣಾ ಆಯೋಗದ ಮೂಲಕ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದ ಟೆಂಡರ್ ದಾಖಲೆಗಳನ್ನು ಬಿಡುಗಡೆ ಮಾಡಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೂರೂವರೆ ವರ್ಷಗಳಲ್ಲಿ ಒಂದರ ಹಿಂದೆ ಮತ್ತೊಂದರಂತೆ ಹಗರಣಗಳು ಬೆಳಕಿಗೆ ಬರುತ್ತಿವೆ. ವಾಲ್ಮೀಕಿ ಅಭಿವೃದ್ಧಿ ನಿಗಮ, ಅಬಕಾರಿ ಸೇರಿದಂತೆ ಹಲವು ಪ್ರಕರಣಗಳು ಸರ್ಕಾರದ ಆಡಳಿತ ವೈಖರಿಯನ್ನು ಪ್ರಶ್ನಿಸುವಂತಿವೆ. ಇದೀಗ ಮತದಾರರ ಗುರುತಿನ ಚೀಟಿ ಮುದ್ರಣದಲ್ಲೂ ₹20 ಕೋಟಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಎಸ್‌ಐಆರ್ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರು, ಕರ್ನಾಟಕದಲ್ಲಿ ಚುನಾವಣಾ ಆಯೋಗದ ಮೂಲಕ ನಡೆದಿರುವ ಈ ವ್ಯವಹಾರಕ್ಕೆ ಉತ್ತರ ನೀಡಲಿ ಎಂದು ಅಶೋಕ ಸವಾಲು ಹಾಕಿದರು.

90 ಲಕ್ಷ ಕಾರ್ಡ್‌ಗಳ ಮುದ್ರಣಕ್ಕೆ ತರಾತುರಿ ಏಕೆ?

ಬೆಂಗಳೂರಿನ ಮತದಾರರಿಗೆ ಎಸ್‌ವಿಐಸಿ ಕಾರ್ಡ್‌ಗಳನ್ನು ವಿತರಿಸುವ ಉದ್ದೇಶದಿಂದ ರಾಜ್ಯ ಚುನಾವಣಾ ಆಯೋಗ 90 ಲಕ್ಷ ಗುರುತಿನ ಚೀಟಿಗಳ ಮುದ್ರಣಕ್ಕೆ ಒಂದೇ ಟೆಂಡರ್ ಕರೆದಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ಆರ್ಥಿಕ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬುದು ಅಶೋಕ ಅವರ ಆರೋಪ.

ಮತದಾರರ ಮನೆಗಳಿಗೆ ತೆರಳಿ ಮಾಹಿತಿ ಸಂಗ್ರಹಿಸಿ, ಭಾವಚಿತ್ರಗಳನ್ನು ಸೆರೆಹಿಡಿದು, ಪರಿಶೀಲನೆಯ ಬಳಿಕ ಗುರುತಿನ ಚೀಟಿಗಳನ್ನು ಮುದ್ರಿಸಬೇಕಾಗಿತ್ತು. ಆದರೆ, ಅಂತಹ ಯಾವುದೇ ಪ್ರಕ್ರಿಯೆ ನಡೆಸದೆ ಹಿಂದಿನ ಲೋಕಸಭಾ ಚುನಾವಣೆಯ ಮತದಾರರ ಪಟ್ಟಿಯನ್ನೇ ಆಧಾರವಾಗಿಟ್ಟುಕೊಂಡು ಕಾರ್ಡ್‌ಗಳನ್ನು ಮುದ್ರಿಸಲಾಗಿದೆ ಎಂದು ದೂರಿದರು.

2026ರ ಮೇ 14ರಂದು ಕೇಂದ್ರ ಚುನಾವಣಾ ಆಯೋಗದಿಂದ ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದ ಆದೇಶ ಹೊರಬಿದ್ದಿತ್ತು. ಆದರೆ, ಅದರ ಮರುದಿನವೇ ಅಂದರೆ ಮೇ 15ರಂದು ರಾಜ್ಯ ಚುನಾವಣಾ ಆಯೋಗದಿಂದ ಗುರುತಿನ ಚೀಟಿ ಮುದ್ರಣಕ್ಕೆ ಟೆಂಡರ್ ಕರೆಯಲಾಗಿದೆ. ಮೇ 29ರಂದು ಕಾರ್ಯಾದೇಶವನ್ನೂ ನೀಡಲಾಗಿದೆ. ಮತ್ತೊಂದೆಡೆ, ಎಸ್‌ಐಆರ್ ಬಳಿಕ ಹೊಸ ಮತದಾರರ ಪಟ್ಟಿ ಪ್ರಕಟವಾದ ನಂತರವೇ ಸ್ಥಳೀಯ ಚುನಾವಣೆ ನಡೆಸುವುದಾಗಿ ರಾಜ್ಯ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ. ಹೀಗಿರುವಾಗ ಹಳೆಯ ಪಟ್ಟಿಯ ಆಧಾರದಲ್ಲಿ ತರಾತುರಿಯಲ್ಲಿ 90 ಲಕ್ಷ ಕಾರ್ಡ್‌ಗಳನ್ನು ಮುದ್ರಿಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು.

59 ಲಕ್ಷ ಮತದಾರರಿಗೆ 90 ಲಕ್ಷ ಕಾರ್ಡ್‌ಗಳು!

ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಬೆಂಗಳೂರಿನಲ್ಲಿ ಒಟ್ಟು 59,09,775 ಮತದಾರರು ಮಾತ್ರ ಉಳಿದಿದ್ದಾರೆ. ವಿಳಾಸ ಬದಲಿಸಿಕೊಂಡವರು ಹಾಗೂ ಸ್ಥಳಾಂತರಗೊಂಡವರ ಹೆಸರುಗಳನ್ನು ಪರಿಷ್ಕರಣೆ ವೇಳೆ ತೆಗೆದುಹಾಕಲಾಗಿದೆ. ಹೀಗಿರುವಾಗ 90 ಲಕ್ಷ ಗುರುತಿನ ಚೀಟಿಗಳನ್ನು ಮುದ್ರಿಸಿರುವುದರ ಹಿಂದಿನ ಉದ್ದೇಶವೇನು? ಹೆಚ್ಚುವರಿಯಾಗಿ ಮುದ್ರಿಸಿರುವ ಸುಮಾರು 31 ಲಕ್ಷ ಕಾರ್ಡ್‌ಗಳನ್ನು ಯಾರಿಗೆ ವಿತರಣೆ ಮಾಡಲಾಗುತ್ತದೆ? ಮುದ್ರಣವಾಗಿ ಇಷ್ಟು ದಿನ ಕಳೆದರೂ ಅವುಗಳನ್ನು ವಿತರಿಸದಿರುವುದೇಕೆ? ಎಂದು ಅಶೋಕ ಪ್ರಶ್ನಿಸಿದರು.

ಕೇಂದ್ರ ಚುನಾವಣಾ ಆಯೋಗದ ಮತದಾರರ ಪಟ್ಟಿಯ ಆಧಾರದಲ್ಲಿಯೇ ಚುನಾವಣೆ ನಡೆಯುವಾಗ ರಾಜ್ಯ ಚುನಾವಣಾ ಆಯೋಗ ಪ್ರತ್ಯೇಕವಾಗಿ ಇಷ್ಟೊಂದು ಪ್ರಮಾಣದಲ್ಲಿ ಗುರುತಿನ ಚೀಟಿಗಳನ್ನು ಮುದ್ರಿಸಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದಕ್ಕಾಗಿ ಸಾರ್ವಜನಿಕರ ತೆರಿಗೆ ಹಣದಿಂದ ₹20 ಕೋಟಿ ವೆಚ್ಚ ಮಾಡಲಾಗಿದೆ. ಎಸ್‌ಐಆರ್ ಬಳಿಕ ಹೊಸ ಕಾರ್ಡ್‌ಗಳೇ ಬರಲಿರುವಾಗ ಹಳೆಯ ಪಟ್ಟಿಯ ಆಧಾರದಲ್ಲಿ ಮುದ್ರಿಸಿರುವ ಕಾರ್ಡ್‌ಗಳಿಗಾಗಿ ಖರ್ಚು ಮಾಡಿದ ಹಣ ವ್ಯರ್ಥವಾಗಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

31 ಲಕ್ಷ ಬೋಗಸ್ ಕಾರ್ಡ್‌ಗಳ ಆರೋಪ; ಸಿಬಿಐ ತನಿಖೆಗೆ ಆಗ್ರಹ

ವೋಟ್ ಚೋರಿ ಎಂದು ಆರೋಪಿಸುತ್ತಿರುವ ರಾಹುಲ್ ಗಾಂಧಿ ಅವರೇ ಇದೀಗ ಬೆಂಗಳೂರಿಗೆ ಬಂದು ಮುದ್ರಣವಾಗಿರುವ 90 ಲಕ್ಷ ಗುರುತಿನ ಚೀಟಿಗಳನ್ನು ವಿತರಿಸಲಿ. ಬೆಂಗಳೂರಿನಲ್ಲಿ ವಾಸ್ತವಿಕವಾಗಿ 59 ಲಕ್ಷ ಮತದಾರರಿದ್ದರೆ ಉಳಿದ 31 ಲಕ್ಷ ಕಾರ್ಡ್‌ಗಳು ಯಾರಿಗಾಗಿ ಮುದ್ರಣವಾಗಿವೆ ಎಂಬುದನ್ನು ಕಾಂಗ್ರೆಸ್ ಸರ್ಕಾರ ಸ್ಪಷ್ಟಪಡಿಸಬೇಕು. ಈ ಹೆಚ್ಚುವರಿ ಕಾರ್ಡ್‌ಗಳ ಹಿಂದೆ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆಸುವ ಉದ್ದೇಶವಿದೆಯೇ ಎಂಬ ಅನುಮಾನ ಮೂಡಿದೆ ಎಂದು ಅಶೋಕ ಆರೋಪಿಸಿದರು.

ಇದು ಕೇವಲ ಮುದ್ರಣದ ಲೋಪವಲ್ಲ; ಜಿಬಿಎ ಚುನಾವಣೆಯಲ್ಲಿ ಅಕ್ರಮ ಎಸಗಲು ರೂಪಿಸಿರುವ ಸಂಚು ಎಂಬ ಗಂಭೀರ ಅನುಮಾನವಿದೆ. ಸರ್ಕಾರದ ಬಳಿ ಯಾವುದೇ ತಪ್ಪಿಲ್ಲದಿದ್ದರೆ ಮುದ್ರಿಸಿರುವ ಎಲ್ಲ ಗುರುತಿನ ಚೀಟಿಗಳನ್ನು ತಕ್ಷಣವೇ ವಿತರಿಸಲಿ. ಈ ಪ್ರಕರಣದ ಸಂಪೂರ್ಣ ಸತ್ಯ ಹೊರಬರಲು ಸಿಬಿಐ ತನಿಖೆಗೆ ವಹಿಸಬೇಕು. 31 ಲಕ್ಷ ಹೆಚ್ಚುವರಿ ಕಾರ್ಡ್‌ಗಳ ಮುದ್ರಣದ ಹಿಂದಿನ ಉದ್ದೇಶ ಏನು ಎಂಬುದು ರಾಜ್ಯದ ಜನತೆಗೆ ತಿಳಿಯಬೇಕು ಎಂದು ಆಗ್ರಹಿಸಿದರು.

ಆರ್ಥಿಕ ಇಲಾಖೆ ದಿವಾಳಿಯಾಗಿದೆ

ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆಯೂ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅಶೋಕ, ಸಾಲದ ಮಿತಿ ಶೇ.3ರಷ್ಟಿದ್ದರೆ ಸರ್ಕಾರ ಈಗಾಗಲೇ ಶೇ.2.95ರ ಹಂತ ತಲುಪಿರುವುದನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದೆ. ಆಗ ಖಜಾನೆ ತುಂಬಿದೆ ಎಂದು ಮುಖ್ಯಮಂತ್ರಿ ಹೇಳಿದ್ದರು. ಆದರೆ, ಕಬ್ಬು ಬೆಳೆಗಾರರೊಂದಿಗಿನ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಖಜಾನೆಯಲ್ಲಿ ಹಣವಿಲ್ಲ ಎಂಬ ಮಾತು ಹೇಳಿದ್ದಾರೆ. ರೈತರಿಗೆ ಪರಿಹಾರ ನೀಡಲೂ ಸರ್ಕಾರದ ಬಳಿ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಕಡೆ ಖಜಾನೆ ತುಂಬಿದೆ ಎನ್ನುತ್ತಾರೆ, ಮತ್ತೊಂದು ಕಡೆ ಹಣವಿಲ್ಲ ಎನ್ನುತ್ತಾರೆ. ಸರ್ಕಾರದ ಆರ್ಥಿಕ ನಿರ್ವಹಣೆ ಯಾವ ಹಂತದಲ್ಲಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಟೀಕಿಸಿದರು.

ಬ್ಯಾಲೆಟ್ ಚುನಾವಣೆಯಲ್ಲೂ ಎನ್‌ಡಿಎಗೆ ಗೆಲುವು

ವಿಧಾನಪರಿಷತ್ ಚುನಾವಣೆಯಲ್ಲಿ ರಾಜ್ಯದ ನಾಲ್ಕು ಸ್ಥಾನಗಳು ಸೇರಿದಂತೆ ದೇಶಾದ್ಯಂತ 28 ಸ್ಥಾನಗಳನ್ನು ಎನ್‌ಡಿಎ ಗೆದ್ದಿದೆ. ಬ್ಯಾಲೆಟ್ ಪೇಪರ್ ಮೂಲಕ ನಡೆದ ಚುನಾವಣೆಯಲ್ಲೂ ಬಿಜೆಪಿ ಗೆಲುವು ಸಾಧಿಸಿರುವುದು ಕಾಂಗ್ರೆಸ್‌ನ ವೋಟ್ ಚೋರಿ ಆರೋಪಗಳಿಗೆ ತಕ್ಕ ಉತ್ತರ ನೀಡಿದೆ. ಎಲ್ಲೆಡೆ ಕಾಂಗ್ರೆಸ್ ಸೋಲು ಅನುಭವಿಸುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಸಾಧನೆ ಶೂನ್ಯ ಎಂಬುದು ಚುನಾವಣಾ ಫಲಿತಾಂಶಗಳಿಂದ ಸಾಬೀತಾಗಿದೆ ಎಂದು ಅಶೋಕ ವ್ಯಂಗ್ಯವಾಡಿದರು.

ಈ ಬಾರಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಸಮನ್ವಯ ಸಭೆಗಳು ನಡೆದಿದ್ದು, ಜೆಡಿಎಸ್‌ನ ಎಲ್ಲ ಮುಖಂಡರು ಸಂಪೂರ್ಣ ಸಹಕಾರ ನೀಡಿ ಎನ್‌ಡಿಎ ಗೆಲುವಿಗೆ ಶ್ರಮಿಸಿದ್ದಾರೆ. ಇದಕ್ಕಾಗಿ ಎರಡೂ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಇದೇ ವೇಳೆ, ಮಾಜಿ ಮುಖ್ಯಮಂತ್ರಿ ಅವರಿಗೆ ಸಂಬಂಧಿಸಿದ ಸ್ಟಿಂಗ್ ಆಪರೇಷನ್ ವಿಚಾರದ ಬಗ್ಗೆಯೂ ಮಾತನಾಡಿದ ಅಶೋಕ, ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ರಾಜ್ಯದ ರಾಜಕೀಯ ಬೆಳವಣಿಗೆಗಳ ಕುರಿತು ಮಾಹಿತಿ ನೀಡಲಾಗಿದೆ. ಈ ಪ್ರಕರಣದಲ್ಲಿ ಕೇವಲ ವಿಡಿಯೋ ಹಂಚಿದವರನ್ನಷ್ಟೇ ಅಲ್ಲ, ವಿಡಿಯೋ ಮಾಡಿಸಿದವರನ್ನೂ ಪತ್ತೆಹಚ್ಚಿ ಸಮಗ್ರ ತನಿಖೆ ನಡೆಸಬೇಕು. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.

ShareTweetSendShare
Join us on:

Related Posts

ಬಿಜೆಪಿ–ಜೆಡಿಎಸ್‌ ಒಗ್ಗಟ್ಟು 2028ರ ಚುನಾವಣೆಯಲ್ಲೂ ಮುಂದುವರಿಯಲಿದೆ, 150ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸವಿದೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

by admin
October 30, 2026
0

  ವಿಧಾನಪರಿಷತ್‌ ನ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎನ್‌ಡಿಎ ಸಾಧಿಸಿರುವ ಗೆಲುವು 2028 ರ ವಿಧಾನಸಭಾ ಚುನಾವಣೆಗೆ ಸ್ಪಷ್ಟ ಸಂದೇಶ ನೀಡಿದೆ. ಎರಡೂ ಪಕ್ಷಗಳು ಒಗ್ಗಟ್ಟಿನಿಂದ...

dk-shivakumar-karnataka-farmers-crop-loss-compensation-delay-fruits-aadhaar-dbt

ಮುಖ್ಯಮಂತ್ರಿ @DKShivakumar ಅವರೇ, ರೈತರಿಗೆ ಪರಿಹಾರ ವಿಳಂಬ ಮಾಡಲು ನಿಮ್ಮ ಸರ್ಕಾರಕ್ಕೆ ಇನ್ನೆಷ್ಟು ಕುಂಟು ನೆಪಗಳು ಬೇಕು?

by admin
October 30, 2026
0

ಮುಂಗಾರು ಕೈಕೊಟ್ಟು ನಾಲ್ಕು ತಿಂಗಳು ಕಳೆದಿವೆ. ಇಷ್ಟು ದಿನ ರೈತರ ಬೆಳೆಹಾನಿಯ ಮಾಹಿತಿ ಸಂಗ್ರಹಿಸದೆ, ಪರಿಹಾರದ ಪಟ್ಟಿ ಸಿದ್ಧಪಡಿಸದೆ ನಿಮ್ಮ ಸರ್ಕಾರ ಏನು ಕತ್ತೆ ಕಾಯುತ್ತಿತ್ತಾ? ಈಗ...

r-ashoka-slams-karnataka-government-milk-price-hike-8-rupees-sir-congress-siddaramaiah

ಹಾಲಿನ ದರ ₹8 ಏರಿಕೆ, ಜನಸಾಮಾನ್ಯರಿಗೆ ಹೊರೆ – ಆರ್‌.ಅಶೋಕ

by admin
October 30, 2026
0

ರಾಜ್ಯ ಸರ್ಕಾರ ಏಕಾಏಕಿ ಪ್ರತಿ ಲೀಟರ್‌ ಹಾಲಿನ ದರವನ್ನು ₹8 ಹೆಚ್ಚಿಸಿದೆ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಹಿಂದೆ ಮೂರ ಸಲ ಹಾಲಿನ ದರ...

dk-shivakumar-karnataka-farmers-crop-loss-compensation-delay-fruits-aadhaar-dbt

ರೈತರಿಗೆ ₹2,500 ಪರಿಹಾರ ನೀಡಲು 17 ಕಠಿಣ ಷರತ್ತುಗಳು, ರೈತರನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸುವ ಕಾಂಗ್ರೆಸ್‌ ಸರ್ಕಾರ: ಪ್ರತಿಪಕ್ಷ ನಾಯಕ ಆರ್‌.ಅಶೋಕ

by admin
October 30, 2026
0

"ರೈತರಿಗೆ ನೆರವು ನೀಡುವ ವಿಷಯದಲ್ಲಿ ಹೊಣೆಗೇಡಿತನ ಪ್ರದರ್ಶಿಸಿರುವ ಕಾಂಗ್ರೆಸ್‌ಗೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ" ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ...

darshan-puttannaiah-delhi-meeting-sugarcane-farmers-price-weightage-fraud-frp-sap-msp

 ದೆಹಲಿಯಲ್ಲಿ ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಧ್ವನಿ ಎತ್ತಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ

by admin
October 30, 2026
0

ದೆಹಲಿ: ದೇಶದ ಬೆನ್ನೆಲುಬಾಗಿರುವ ಕಬ್ಬು ಬೆಳೆಗಾರರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯದ ಜನಪ್ರತಿನಿಧಿಗಳು ಹಾಗೂ ರೈತ ಮುಖಂಡರ ನಿಯೋಗವು ದೇಶದ ರಾಜಧಾನಿ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram