ADVERTISEMENT
Friday, July 24, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಮೊಟ್ಟೆ ಸಂಸ್ಕೃತಿ ಬಿಜೆಪಿಯದ್ದು- ಬ್ಲಾಕ್ ಟಿಕೆಟ್ ಮಾರುತಿದ್ದವರು ಈಗ ಬಿಜೆಪಿಯಲ್ಲಿ ನಾಯಕರು: ಅಶೋಕ ಅವರಿಗೆ ಬುದ್ಧಿ ಭ್ರಮಣೆಯಾಗಿದೆ- ಬಿ ಕೆ ಹರಿಪ್ರಸಾದ್ ಕಿಡಿ

Shwetha by Shwetha
July 24, 2026
in ರಾಜ್ಯ, Newsbeat, Politics, State, ರಾಜಕೀಯ
Karnataka Legislative Council Opposition Leader B K Hariprasad during the "Meet the Press" program at the Press Club, Bengaluru on Friday.  DH Photo/Mariya S Mattathil

Karnataka Legislative Council Opposition Leader B K Hariprasad during the "Meet the Press" program at the Press Club, Bengaluru on Friday. DH Photo/Mariya S Mattathil

Share on FacebookShare on TwitterShare on WhatsappShare on Telegram

ಬೆಂಗಳೂರು: ಬಿಜೆಪಿ ಶಾಸಕ ಬಿಪಿ ಹರೀಶ್ ಅವರ ಮೇಲೆ ನಡೆದ ಮೊಟ್ಟೆ ಎಸೆತ ಪ್ರಕರಣ ಈಗ ರಾಜ್ಯ ರಾಜಕೀಯದಲ್ಲಿ ಹೊಸ ಕಿಚ್ಚು ಹಚ್ಚಿದೆ. ಈ ಘಟನೆಯನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಹಿರಿಯ ನಾಯಕ ಬಿ ಕೆ ಹರಿಪ್ರಸಾದ್ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ. ಈ ವೇಳೆ ಅವರು ನೀಡಿರುವ ಹೇಳಿಕೆಗಳು ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿವೆ.

ಮೊಟ್ಟೆ ಸಂಸ್ಕೃತಿಯ ಹರಿಕಾರರು ಯಾರು?

Related posts

ಯುವಕರಿಗೂ ಮಂತ್ರಿ ಭಾಗ್ಯ ಸಿಗಲಿ- ಸಚಿವನಾಗುವ ಆಸೆ ಬಿಚ್ಚಿಟ್ಟ ಪ್ರದೀಪ್ ಈಶ್ವರ್: ಮಂತ್ರಿ ಪದವಿ ಸಿಗದಿದ್ರೆ ಕಸ ಗೂಡಿಸಲೂ ಸಿದ್ಧ -ಪಕ್ಷನಿಷ್ಠೆ ಅಂದ್ರೆ ಇದೆ ಅಲ್ವಾ!?

ಯುವಕರಿಗೂ ಮಂತ್ರಿ ಭಾಗ್ಯ ಸಿಗಲಿ- ಸಚಿವನಾಗುವ ಆಸೆ ಬಿಚ್ಚಿಟ್ಟ ಪ್ರದೀಪ್ ಈಶ್ವರ್: ಮಂತ್ರಿ ಪದವಿ ಸಿಗದಿದ್ರೆ ಕಸ ಗೂಡಿಸಲೂ ಸಿದ್ಧ -ಪಕ್ಷನಿಷ್ಠೆ ಅಂದ್ರೆ ಇದೆ ಅಲ್ವಾ!?

July 24, 2026
ಪತಿ ಹತ್ಯೆ ಪ್ರಕರಣ: ಸೋನಂ ರಘುವಂಶಿ ಜಾಮೀನು ರದ್ದು ಮಾಡಿದ ಸುಪ್ರೀಂ ಕೋರ್ಟ್

ಪತಿ ಹತ್ಯೆ ಪ್ರಕರಣ: ಸೋನಂ ರಘುವಂಶಿ ಜಾಮೀನು ರದ್ದು ಮಾಡಿದ ಸುಪ್ರೀಂ ಕೋರ್ಟ್

July 24, 2026

ಮೊಟ್ಟೆ ಎಸೆಯುವ ಸಂಸ್ಕೃತಿಯ ಬಗ್ಗೆ ಮಾತನಾಡಿರುವ ಹರಿಪ್ರಸಾದ್, ಮೊಟ್ಟೆ ಮತ್ತು ಚಪ್ಪಲಿ ಎಸೆಯುವ ಸಂಸ್ಕೃತಿಯನ್ನು ರಾಜ್ಯಕ್ಕೆ ಪರಿಚಯಿಸಿದ್ದೇ ಬಿಜೆಪಿ ಎಂದು ಕಿಡಿಕಾರಿದ್ದಾರೆ. ಹಿಂದೆ ಮಡಿಕೇರಿಯಲ್ಲಿ ನಾಡಿನ ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಎಸೆದವರು ಯಾರು? ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆದವರು ಯಾರು? ಈ ಪಟ್ಟಿಯನ್ನು ಬಿಡುಗಡೆ ಮಾಡಿದರೆ ಬಿಜೆಪಿಯ ಅಸಲಿ ಮುಖ ಬಯಲಾಗುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ.

ಬ್ಲಾಕ್ ಟಿಕೆಟ್ ಹಿಸ್ಟರಿ ಮತ್ತು ಬಿರಿಯಾನಿ ಹೋಟೆಲ್

ಬಿಜೆಪಿ ನಾಯಕರ ಭೂತಕಾಲವನ್ನು ಕೆದಕಿದ ಹರಿಪ್ರಸಾದ್, ಹಿಂದೆ ಎಚ್‌ಎಂಟಿ ಕಾರ್ಖಾನೆ ಬಳಿಯ ಚಿತ್ರಮಂದಿರಗಳಲ್ಲಿ ಬ್ಲಾಕ್ ಟಿಕೆಟ್ ಮಾರಿ ಜೀವನ ಸಾಗಿಸುತ್ತಿದ್ದವರೆಲ್ಲಾ ಇಂದು ಬಿಜೆಪಿ ನಾಯಕರಾಗಿದ್ದಾರೆ ಎಂದು ಲೇವಡಿ ಮಾಡಿದರು. ಅಲ್ಲದೆ, ವಿದ್ಯಾಸಂಸ್ಥೆ ಕಟ್ಟುತ್ತೇವೆ ಎಂದು ಸರ್ಕಾರದಿಂದ ಜಾಗ ಪಡೆದು ಅಲ್ಲಿ ದಮ್ ಬಿರಿಯಾನಿ ಹೋಟೆಲ್ ತೆರೆದ ಸಂಸ್ಕೃತಿ ಬಿಜೆಪಿಯದ್ದು. ಆದರೆ ಕಾಂಗ್ರೆಸ್ ತನ್ನ ಸ್ವಂತ ಜಾಗದಲ್ಲಿ ಕಚೇರಿಗಳನ್ನು ನಿರ್ಮಿಸುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು.

ರಾಹುಲ್ ಗಾಂಧಿ ಅವರು ವಿದೇಶಕ್ಕೆ ಹೋದರೆ ಅಲ್ಲಿನ ದೊಡ್ಡ ದೊಡ್ಡ ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿ ಭಾಷಣ ಮಾಡುತ್ತಾರೆ. ಆದರೆ ಪ್ರಧಾನಿ ಮೋದಿ ಅವರು ವಿದೇಶಕ್ಕೆ ಹೋದಾಗ ಯಾವ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದಾರೆ ಎಂದು ಹರಿಪ್ರಸಾದ್ ಪ್ರಶ್ನಿಸಿದರು. ಬಿಜೆಪಿಯವರಿಗೆ ತುಕಡೆ ಗ್ಯಾಂಗ್ ಎನ್ನುವ ನೈತಿಕತೆ ಇಲ್ಲ ಎಂದು ಅವರು ಗುಡುಗಿದ್ದಾರೆ.

ವಿರೋಧ ಪಕ್ಷದ ನಾಯಕ ಆರ್ ಅಶೋಕ ಅವರ ಬಗ್ಗೆ ಅತ್ಯಂತ ಕಟುವಾಗಿ ಮಾತನಾಡಿದ ಹರಿಪ್ರಸಾದ್, ಅಶೋಕ ಅವರಿಗೆ ಏನಾಗಿದೆ ಎಂದು ಗೊತ್ತಿಲ್ಲ. ಹಿಂದೆ ಕೊತ್ವಾಲ್ ರಾಮಚಂದ್ರನ ಶಿಷ್ಯನೊಬ್ಬ ಅಶೋಕ ಅವರಿಗೆ ಏಡ್ಸ್ ಇಂಜೆಕ್ಷನ್ ಚುಚ್ಚಿದ್ದ ಎನ್ನಲಾಗಿದೆ, ಆ ಕಾರಣಕ್ಕಾಗಿಯೇ ಅವರಿಗೆ ಬುದ್ಧಿ ಭ್ರಮಣೆಯಾಗಿ ಈ ರೀತಿ ಮಾತನಾಡುತ್ತಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಆರ್‌ಎಸ್‌ಎಸ್ ಮತ್ತು ಬಿಜೆಪಿ ಕಚೇರಿಗಳ ಬಗ್ಗೆಯೂ ಗಂಭೀರ ಆರೋಪ ಮಾಡಿರುವ ಬಿ ಕೆ ಹರಿಪ್ರಸಾದ್, ಕೇರಳದ ಕಣ್ಣೂರಿನಲ್ಲಿ ಬಿಜೆಪಿ ಮತ್ತು ಸಂಘದ ಕಚೇರಿಗಳಲ್ಲಿ ಬಾಂಬ್ ತಯಾರಿಕಾ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ನಾನು ನೀಡಲು ಸಿದ್ಧನಿದ್ದೇನೆ. ಕಾಂಗ್ರೆಸ್ ಕಚೇರಿಯಲ್ಲಿ ಗಾಂಧಿ ಟೋಪಿ ಮತ್ತು ಬಾವುಟಗಳು ಮಾತ್ರ ಸಿಗುತ್ತವೆ, ಆದರೆ ಬಿಜೆಪಿ ಕಚೇರಿಗಳಲ್ಲಿ ಸಿಗುವುದೇ ಬೇರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಒಟ್ಟಿನಲ್ಲಿ ಬಿ ಕೆ ಹರಿಪ್ರಸಾದ್ ಅವರ ಈ ಸರಣಿ ವಾಗ್ದಾಳಿಗಳು ಈಗ ರಾಜ್ಯ ರಾಜಕೀಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿವೆ.

ShareTweetSendShare
Join us on:

Related Posts

ಯುವಕರಿಗೂ ಮಂತ್ರಿ ಭಾಗ್ಯ ಸಿಗಲಿ- ಸಚಿವನಾಗುವ ಆಸೆ ಬಿಚ್ಚಿಟ್ಟ ಪ್ರದೀಪ್ ಈಶ್ವರ್: ಮಂತ್ರಿ ಪದವಿ ಸಿಗದಿದ್ರೆ ಕಸ ಗೂಡಿಸಲೂ ಸಿದ್ಧ -ಪಕ್ಷನಿಷ್ಠೆ ಅಂದ್ರೆ ಇದೆ ಅಲ್ವಾ!?

ಯುವಕರಿಗೂ ಮಂತ್ರಿ ಭಾಗ್ಯ ಸಿಗಲಿ- ಸಚಿವನಾಗುವ ಆಸೆ ಬಿಚ್ಚಿಟ್ಟ ಪ್ರದೀಪ್ ಈಶ್ವರ್: ಮಂತ್ರಿ ಪದವಿ ಸಿಗದಿದ್ರೆ ಕಸ ಗೂಡಿಸಲೂ ಸಿದ್ಧ -ಪಕ್ಷನಿಷ್ಠೆ ಅಂದ್ರೆ ಇದೆ ಅಲ್ವಾ!?

by Shwetha
July 24, 2026
0

ಚಿಕ್ಕಬಳ್ಳಾಪುರ: ರಾಜ್ಯ ರಾಜಕೀಯದಲ್ಲಿ ಸಚಿವ ಸಂಪುಟ ಪುನಾರಚನೆಯ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಸದಾ ತಮ್ಮ ವಾಕ್ಚಾತುರ್ಯದಿಂದಲೇ ಸುದ್ದಿಯಲ್ಲಿರುವ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಇದೀಗ ಹೊಸ ಬಾಂಬ್...

ಪತಿ ಹತ್ಯೆ ಪ್ರಕರಣ: ಸೋನಂ ರಘುವಂಶಿ ಜಾಮೀನು ರದ್ದು ಮಾಡಿದ ಸುಪ್ರೀಂ ಕೋರ್ಟ್

ಪತಿ ಹತ್ಯೆ ಪ್ರಕರಣ: ಸೋನಂ ರಘುವಂಶಿ ಜಾಮೀನು ರದ್ದು ಮಾಡಿದ ಸುಪ್ರೀಂ ಕೋರ್ಟ್

by Shwetha
July 24, 2026
0

ಮೇಘಾಲಯದಲ್ಲಿ ಹನಿಮೂನ್‌ ವೇಳೆ ಪತಿ ರಾಜಾ ರಘುವಂಶಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸೋನಂ ರಘುವಂಶಿಗೆ ನೀಡಲಾಗಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ನ್ಯಾಯಮೂರ್ತಿಗಳಾದ ಎಂ.ಎಂ. ಸುಂದ್ರೇಶ್...

ಪೇಪರ್ ಲೀಕ್ ಅಸಲಿ ಹರಿಕಾರರೇ ಕಾಂಗ್ರೆಸ್ಸಿಗರು: ಇಂಡಿಯಾ ಕೂಟದ ಹಗರಣಗಳ ಪಟ್ಟಿ ಬಿಡುಗಡೆ ಮಾಡಿ ಅಮಿತ್ ಮಾಳವೀಯ ಮಾಸ್ಟರ್ ಅಟ್ಯಾಕ್

ರಾಹುಲ್ ಗಾಂಧಿ ಬಂಧನ ಕೇವಲ ಗಿಮಿಕ್, ರಾಹುಲ್ ಗಾಂಧಿ ನಾಟಕ ನಿಲ್ಲಿಸಿ, ಜನರನ್ನು ಮೂರ್ಖರನ್ನಾಗಿಸಬೇಡಿ: ಪ್ರತಿಭಟನೆಯಲ್ಲಿ ಪ್ರಾಮಾಣಿಕತೆ ಇಲ್ಲ ಎಂದು ಗುಡುಗಿದ ಸೋನಂ ವಾಂಗ್ಚುಕ್ ಪತ್ನಿ

by Shwetha
July 24, 2026
0

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಮುಂದೆ ಕಾಂಗ್ರೆಸ್ ನಡೆಸಿದ ಹಠಾತ್ ಪ್ರತಿಭಟನೆ ಮತ್ತು ರಾಹುಲ್ ಗಾಂಧಿ ಅವರ ಬಂಧನದ ನಾಟಕೀಯ ವಿದ್ಯಮಾನಗಳ ಬೆನ್ನಲ್ಲೇ, ಖ್ಯಾತ...

‘ಹಣ ಪಡೆದು ಮತ ಹಾಕುವುದನ್ನು ಜನರು ಮೊದಲು ನಿಲ್ಲಿಸಬೇಕು’: ಉಪಲೋಕಾಯುಕ್ತ ವೀರಪ್ಪ

‘ಹಣ ಪಡೆದು ಮತ ಹಾಕುವುದನ್ನು ಜನರು ಮೊದಲು ನಿಲ್ಲಿಸಬೇಕು’: ಉಪಲೋಕಾಯುಕ್ತ ವೀರಪ್ಪ

by Shwetha
July 24, 2026
0

ಚುನಾವಣೆಗಳಲ್ಲಿ ಹಣ ಪಡೆದು ಮತ ಚಲಾಯಿಸುವ ಪ್ರವೃತ್ತಿಯನ್ನು ಜನರು ಮೊದಲು ನಿಲ್ಲಿಸಬೇಕು ಎಂದು ಉಪಲೋಕಾಯುಕ್ತ ಬಿ. ವೀರಪ್ಪ ಕರೆ ನೀಡಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯದ ಆರಂಭದಲ್ಲಿ...

ದಿನ ಭವಿಷ್ಯ (07-07-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (24-07-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
July 24, 2026
0

ದಿನ ಭವಿಷ್ಯ 24-07-2026 ಮೇಷ ರಾಶಿ ಸಾಮಾನ್ಯ ಫಲ: ಇಂದು ನಿಮ್ಮಲ್ಲಿ ಹೊಸ ಹುರುಪು ಮತ್ತು ಉತ್ಸಾಹ ಕಂಡುಬರುತ್ತದೆ. ಅಂದುಕೊಂಡ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಿರಿ. ವೃತ್ತಿ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram