ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಪರಿಷತ್ ಅಧಿವೇಶನದಲ್ಲಿ DCM ಡಿಕೆ ಶಿವಕುಮಾರ್ ಸಭೆಯ ಮಧ್ಯೆ ನಿದ್ರೆಗೆ ಜಾರಿರುವ ಫೋಟೋ ಸದ್ದು ಮಾಡುತ್ತಿದೆ. ಈ ಚಿತ್ರವನ್ನು ಹಂಚಿಕೊಂಡಿರುವ ವಿಪಕ್ಷ ನಾಯಕ ಆರ್. ಅಶೋಕ್, ಟೀಕೆ ಮಾಡಿದ್ದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ.
ಅಶೋಕ್ ಅವರು ವ್ಯಂಗ್ಯವಾಗಿ, ಮಲಗಿ, ಮಲಗಿರಿ, ಜನ ಒದ್ದೋಡಿಸುವವರೆಗೂ ಏಳಬೇಡಿ ಎಂದು ಡಿಕೆಶಿಗೆ ಟಾಂಗ್ ನೀಡಿದ್ದು, ಉತ್ತರ ಕರ್ನಾಟಕದ ಗಂಭೀರ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರವೇ ಉತ್ತರಿಸಬೇಕು ಎಂದು ಹೇಳಿದ ನಂತರ ಸಭೆಯಲ್ಲೇ ಗಾಢ ನಿದ್ರೆಗೆ ಜಾರಿರುವುದು ಆಶ್ಚರ್ಯಕರ ಎಂದು ಹೇಳಿದ್ದಾರೆ.
ಇದೇ ವೇಳೆ, CM ಕುರ್ಚಿ ಸಿಗದ ನಿರಾಸೆಯಿಂದ ರಾತ್ರಿ ನಿದ್ದೆ ಬರುತ್ತಿಲ್ಲ ಅನ್ನಿಸುತ್ತೆ. ಹಾಗಾಗಿ ಸದನದಲ್ಲೇ ವಿಶ್ರಾಂತಿ ಪಡೆಯುತ್ತಿರಬೇಕು ಎಂಬ ಮತ್ತೊಂದು ವ್ಯಂಗ್ಯ ಬಾಣವನ್ನೂ ಹಾರಿಸಿದ್ದಾರೆ.
ಡಿಕೆಶಿ ವಿರುದ್ಧದ ಈ ಟೀಕೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸದನದ ಶಿಸ್ತಿನ ಮೇಲೆ ಮತ್ತು ರಾಜಕೀಯ ನಾಯಕರ ನಡವಳಿಕೆಯ ಮೇಲೆ ಹೊಸ ಚರ್ಚೆಗೆ ಕಾರಣವಾಗಿದೆ.








