ಬ್ಯಾಕ್ ಟು ಬ್ಯಾಟ್ ಹಿಟ್ ಸಿನಿಮಾಗಳನ್ನು ರಿಲೀಸ್ ಮಾಡುತ್ತಾ ಮುನ್ನುಗ್ಗುತ್ತಿರುವ ವರ್ಮಾ, ತಮ್ಮ ಸಿನಿಮಾಗಳಲ್ಲಿ ಹೊಸ ನಟಿಯನ್ನು ಪರಿಚಯಿಸುತ್ತಿದ್ದಾರೆ. ಅದರಂತೆ ಮೂರು ದಿನಗಳ ಹಿಂದೆ ವರ್ಮಾ ಅಪ್ಸರಾ ರಾಣಿ ಎಂಬ ನಟಿಯನ್ನು ಪರಿಯಿಸಿದ್ದು, ಅವರೊಂದಿಗೆ ಥ್ರಿಲ್ಲರ್ ಎಂಬ ಸಿನಿಮಾ ಮಾಡುತ್ತಿರೋದಾಗಿ ಹೇಳಿದ್ದಾರೆ.
ಈಗಾಗಲೇ ಈ ಸಿನಿಮಾದ ಶೂಟಿಂಗ್ ಶುರುವಾಗಿದ್ದು, ಈ ಮಧ್ಯೆ ನೆಟ್ಟಿಗರು ಯಾರು ಈ ಅಪ್ಸರಾ ರಾಣಿ ಎಂದು ಗೂಗಲ್ ನಲ್ಲಿ ಹುಡುಕಿದ್ದಾರೆ. ಇದಕ್ಕೆ ಕಾರಣ ಅಪ್ಸರಾ ರಾಣಿ ಜೊತೆ ವರ್ಮಾ ಕ್ಲಿಕ್ಕಿಸಿಕೊಂಡಿರುವ ಫೋಟೊಗಳು..
ಹೌದು..! ಅಪ್ಸರಾ ರಾಣಿ ಜೊತೆ ಸಿನಿಮಾ ಮಾಡುತ್ತಿರೋದಾಗಿ ಹೇಳಿಕೊಂಡಿರುವ ವರ್ಮಾ, ಆಕೆಗೆ ಮುತ್ತಿಡುತ್ತಿರುವ, ಊಟ ಮಾಡುತ್ತಿರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿವೆ. ಈ ಕಾರಣಕ್ಕಾಗಿ ನೆಟ್ಟಿಗರು ಯಾರೀ ಅಪ್ಸರಾ ರಾಣಿ ಎಂದು ಹುಡುಕಲು ಶುರು ಹಚ್ಚಿಕೊಂಡಿದ್ದಾರೆ ..
ಅದರಂತೆ ಗೂಗಲ್ ನಲ್ಲಿ ಅಪ್ಸರಾ ರಾಣಿ ಬಗ್ಗೆ ಕೆಲ ಮಾಹಿತಿ ದೊರಕಿದೆ. ಅದೇನಂದರೇ, ಈಕೆಯ ಮೂಲ ಹೆಸರು ಅಂಕಿತ ಮಹಾರಾಣಾ. ಈ ಹಿಂದೆ 4 ಲೆಟರ್ಸ್, ಉಲ್ಲಾಲ, ಉಲ್ಲಾಲ ಎಂಬ ಎರಡು ಸಿನಿಮಾಗಳಲ್ಲಿ ಈಕೆ ಕಾಣಿಸಿಕೊಂಡಿದ್ದಳು. ಈ ಸಿನಿಮಾಗಳನ್ನು ಹಿಟ್ ಆಗದ ಕಾರಣಕ್ಕೆ ಈಕೆಯ ಮುಖ ಪರಿಚಯ ಅಷ್ಟಾಗಿ ಯಾರಿಗೂ ಇಲ್ಲ. ಹೀಗಾಗಿ ಆರ್ ಜಿವಿ ಟ್ವಿಟ್ಟರ್ ನಲ್ಲಿ ಈಕೆಯನ್ನು ಅಪ್ಸರಾ ರಾಣಿಯಾಗಿ ಎಲ್ಲರಿಗೂ ಪರಿಚಯಿಸಿದ್ದಾರೆ.
ಅಂದಹಾಗೆ ಈ ಅಂಕಿತ ಆರ್ ಜಿವಿ ಕಣ್ಣಿಗೆ ಬಿದ್ದಿದ್ದು, ಉಲ್ಲಾಲ ಉಲ್ಲಾಲ ಚಿತ್ರದ ಆಡಿಯೋ ಲಾಂಚ್ ಟೈಮ್ ನಲ್ಲಿ. ಅಂದೇ ವರ್ಮಾ ಈಕೆಗೆ ಸಿನಿಮಾ ಆಫರ್ ನೀಡಿದ್ದು, ಈ ಬಗ್ಗೆ ಅಪ್ಸರಾ, ಆರ್ ಜಿವಿ ಜೊತೆ ಸಿನಿಮಾ ಮಾಡುತ್ತಿರೋದಾಗಿ, ತಾನಿನ್ನೂ ಸೆಕ್ಸಿ ಆಗಬೇಕೆಂದು ವರ್ಮಾ ಹೇಳಿದ್ದಾಗಿ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಳು. 
ಇದೀಗ ಆರ್ ಜಿವಿ ನಿರ್ದೇಶನದಲ್ಲಿ ಅಪ್ಸರಾ ನಟಿಸುತ್ತಿದ್ದಾರೆ. ಆದರೆ ಇದರ ಮಧ್ಯೆ ಇವರ ಕೆಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವರ್ಮಾ ಅಪ್ಸರಾ ಜೊತೆ ಡೇಟ್ ನಲ್ಲಿದ್ದಾರಾ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.








