ಬಾಲಿವುಡ್ ನ ಯಾವೊಂದು ಸಿನಿಮಾ ಬರಲಿ ಬಾಯ್ಕಾಟ್ ಟ್ರೆಂಡ್ ಆಗ್ತಿದೆ.. ಇದರ ವಿರುದ್ಧ ಅನೇಕ ಬಾಲಿವುಡ್ ನಟ ನಟಿಯರು ಸಿಟ್ಟಾಗಿದ್ದಾರೆ.. ಇದೀಗ ಸೌತ್ ಸ್ಟಾರ್ ಆಗಿ ಬಾಲಿವುಡ್ ನಲ್ಲೂ ಮಿಂಚಿರುವ ನಟ ಮಾಧವನ್ ಶಾಕಿಂಗ್ ಸ್ಟೇಟ್ ಮೆಂಟ್ ನೀಡಿದ್ದಾರೆ…
ದೋಖ ಸಿನಿಮಾದ ಟ್ರೈಲರ್ ರಿಲೀಸ್ಗೆ ಆಗಮಿಸಿ ಬಾಲಿವುಡ್ ಸಿನಿಮಾಗಳ ಸೋಲಿನ ಬಗ್ಗೆ ಮಾತನಾಡಿರುವ ಮಾಧವನ್ , ದಕ್ಷಿಣ ಭಾರತದ ಸಿನಿಮಾಗಳು ಬಾಲಿವುಡ್ ಸಿನಿಮಾಗಳನ್ನು ಮೀರಿಸುತ್ತವೆ ಎನ್ನುವ ಗ್ರಹಿಕೆ ತಪ್ಪು. ದಕ್ಷಿಣದಿಂದ ಬಂದ ಬಾಹುಬಲಿ 1, ಬಾಹುಬಲಿ 2, RRR, ಪುಷ್ಪ , ಕೆಜಿಎಫ್ , ಕೆಜಿಎಫ್ 2 ಮಾತ್ರ ಹಿಂದಿ ಚಲನಚಿತ್ರ ನಟರ ಚಲನಚಿತ್ರಗಳಿಗಿಂತ ಉತ್ತಮವಾಗಿದ್ದು, ಸೂಪರ್ ಹಿಟ್ ಆಗಿವೆ. ಕೇವಲ ಐದಾರು ಚಿತ್ರಗಳು ಹಿಟ್ ಆಗಿದ್ದಕ್ಕೆ ಸೌತ್ ಸಿನಿರಂಗ ಬಾಲಿವುಡ್ ಗೆ ಮಾದರಿ ಅಂತ ಹೇಳಲು ಸಾಧ್ಯವಿಲ್ಲ. ಒಳ್ಳೆಯ ಚಿತ್ರಗಳು ಬಂದರೆ ಬಾಲಿವುಡ್ ಸಿನಿಮಾಗಳು ಹಿಟ್ ಆಗುತ್ತವೆ ಎಂದಿದ್ದಾರೆ..
ಲಾಲ್ ಸಿಂಗ್ ಚಡ್ಡ ಸೋಲಿನ ಬಗ್ಗೆ ಮಾತನಾಡಿರುವ ನಟ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ವರ್ಕೌಟ್ ಆಗಿಲ್ಲ ಎಂದರೆ, ನಾವೆಲ್ಲರೂ ಹಿಟ್ ಚಿತ್ರಗಳನ್ನು ಮಾತ್ರ ಮಾಡುತ್ತಿದ್ವಿ, ನಾವು ಫ್ಲಾಪ್ ಚಿತ್ರ ಮಾಡುತ್ತಿದ್ದೇವೆ ಎಂದು ಯಾರಿಗೂ ಗೊತ್ತಿರಲ್ಲ. ಎಲ್ಲಾ ಸಿನಿಮಾಗಳನ್ನು ಒಳ್ಳೆಯ ಸಿನಿಮಾ ಎಂದುಕೊಂಡೇ ಕೆಲಸ ಮಾಡುತ್ತೇವೆ.
ಪ್ರೇಕ್ಷಕರಿಗೆ ಉತ್ತಮ ಕಂಟೆಂಟ್ ಇರುವ ಸಿನಿಮಾ ನೀಡಿದರೆ, ಭಾಷೆಯ ಹೊರತಾಗಿಯೂ ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ವೀಕ್ಷಿಸುತ್ತಾರೆ. ಕೊರೊನಾ ಬಳಿಕ ಪ್ರೇಕ್ಷಕರ ಆಧ್ಯತೆ ಬದಲಾಗಿದೆ. ಹಿಂದಿ ಸಿನಿಮಾಗಳ ಸೋಲಿಗೆ ಇದೇ ಕಾರಣ ಎಂದಿದ್ದಾರೆ.. ಆದ್ರೆ ಮಾಧವನ್ ಹೇಳಿಕೆಗೆ ಪರ ವಿರೋಧ ವ್ಯಕ್ತವಾಗ್ತಿದೆ..








