ಕಾಂಗ್ರೆಸ್ ಸೇರಲು ತುದಿಗಾಲಿನಲ್ಲಿ ನಿಂತಿದ್ದಾರೆ ಆರ್. ವರ್ತೂರ್ ಪ್ರಕಾಶ್…!
ಕೋಲಾರ ; ಮಾಜಿ ಸಚಿವ ಆರ್. ವರ್ತೂರ್ ಪ್ರಕಾಶ್ ಕಾಂಗ್ರೆಸ್ ಪಕ್ಷ ಸೇರಲು ತುದಿಗಾಲಿನಲ್ಲಿ ನಿಂತಿದ್ದಾರೆ. ಕೋಲಾರದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಈ ವಿಷಯವನ್ನ ಅವ್ರೇ ಬಹಿರಂಗವಾಗಿ ಹೇಳಿದ್ದಾರೆ..
ಕೋಲಾರದಲ್ಲಿ ಮಾತನಾಡುತ್ತಾ, ನನಗೆ ಕಾಂಗ್ರೆಸ್ ಸೇರಲು ಆಸೆಯಾಗಿದೆ. ಈಗಾಗಲೇ ಕಾಂಗ್ರೆಸ್ ಮುಖಂಡರ ಜೊತೆ ಮಾತುಕತೆ ನಡೆಯುತ್ತಿದೆ. ಸಿದ್ದರಾಮಯ್ಯ ಅವರು ಏನೂ ಮಾಡು ಅಂದರೂ ಮಾಡುವುದಕ್ಕೆ ಸಿದ್ಧ.ಬೇಕಾದರೆ ಕೋಲಾರದಿಂದಲೇ ಅಹಿಂದ ಸಮಾವೇಶ ಪ್ರಾರಂಭಿಸಲಿ. ನಾನೇ ಮುಂದೆ ನಿಂತು ಒಂದರಿಂದ ಎರಡು ಲಕ್ಷ ಜನ ಸೇರಿಸುತ್ತೇನೆ. ನಾನು ಸ್ಥಾಪನೆ ಮಾಡಿದ ನಮ್ಮ ಕಾಂಗ್ರೆಸ್ ಈಗ ಇಲ್ಲ. ನನ್ನದೇನಿದ್ದರೂ ನಡೆ ಇನ್ನು ಮುಂದೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕಡೆ ಎಂದು ವರ್ತೂರು ಪ್ರಕಾಶ್ ತಿಳಿಸಿದ್ದಾರೆ.
ಕೋಲಾರ ಕ್ಷೇತ್ರಕ್ಕೆ ಭಾರಿ ಡಿಮ್ಯಾಂಡು..!
ಹೌದು…! ಚಿನ್ನದನಾಡು ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಕಳೆದ ಚುನಾವಣೆಯಿಂದ ಭಾರಿ ಡಿಮ್ಯಾಂಡ್ ಬಂದಿದೆ. ಕಳೆದ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರೆ ಅಂತ ಹೇಳಲಾಗುತ್ತಿತ್ತು, ಆದ್ರೆ ಅದು ಆಗಲಿಲ್ಲ. ಈ ಮಧ್ಯೆ ದಿವಂಗತ ಬೈರೇಗೌಡ ಅವ್ರ ಪುತ್ರ, ಮಾಜಿ ಸಚಿವ ಕೃಷ್ಣಭೈರಗೌಡ ಮತ್ತೆ ಕೂಲಾರದತ್ತ ಮುಖ ಮಾಡಲಿದ್ದಾರೆ.. ಅವ್ರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ ಅನ್ನೋ ಮಾತುಗಳು ಜೋರಾಗಿ ನಡೆಯುತ್ತಿವೆ. ಇದಲ್ಲದೆ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಕೂಡ ಕೋಲಾರ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ ಅಂತ ಹೇಳಲಾಗುತ್ತಿದೆ.
ಯಾಕಿಷ್ಟು ಡಿಮ್ಯಾಂಡು…?
ಕೋಲಾರ ಜಿಲ್ಲೆ ಹೇಳಿಕೇಳಿ ಕಾಂಗ್ರೆಸ್ ನ ಭದ್ರ ಕೋಟೆ.. ಇಲ್ಲಿ ಬಿಜೆಪಿಗೆ ಹೇಳಿಕೊಳ್ಳುವಂಥ ಬಲ ಇಲ್ಲ… ಇನ್ನು ಕಾಂಗ್ರೆಸ್ ಗೆ ಪೈಪೋಟಿ ಕೊಡುವ ಪಕ್ಷ ಅಂದ್ರೆ ಅದು ಜೆಡಿಎಸ್ ಮಾತ್ರ.. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿ ಜೆಡಿಎಸ್ ಗೆಲುವಿನ ಕೇಕೆ ಹಾಕಿತ್ತು. ಆದ್ರೆ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ನ ಸಿಟ್ಟಿಂಗ್ ಶಾಸಕರಾದ ಶ್ರೀನಿವಾಸ್ ಗೌಡ ಸ್ಪರ್ಧೆ ಮಾಡುವುದು ಅನುಮಾನ.. ಹೀಗಾಗಿ ಜೆಡಿಎಸ್ ಅನಿವಾರ್ಯವಾಗಿ ಹೊಸಮುಖಗಳಿಗೆ ಮಣೆ ಹಾಕಲೇಬೇಕು. ಹೊಸ ಮುಖಗಳು ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದು ಕಷ್ಟ. ಹೀಗಾಗಿ ಕಾಂಗ್ರೆಸ್ ಸುಲಭವಾಗಿ ಚುನಾವಣೆಯಲ್ಲಿ ಗೆಲ್ಲಬಹುದು ಅನ್ನೋದು ಲೆಕ್ಕಾಚಾರ.
ವರ್ತೂರ್ ಪ್ರಕಾಶ್ ಕಾಂಗ್ರೆಸ್ ಸೇರ್ಪಡೆಗೆ ವಿರೋಧ
ಹೌದು ಪಕ್ಷೇತರ ಅಭ್ಯರ್ಥಿಯಾಗಿ ನಿಂತು ವರ್ತೂರ್ ಪ್ರಕಾಶ್ ಎರಡು ಬಾರಿ ಗೆಲುವಿನ ಕೇಕೆ ಹಾಕಿದ್ದಾರೆ.. ಇಂದು ಬಾರಿ ಬಿಜೆಪಿ ಸರ್ಕಾರದಲ್ಲಿ ಮಂತ್ರಿ ಕೂಡ ಆಗಿದ್ದರು.. ಕೋಲಾರದಲ್ಲಿ ವರ್ತೂರ್ ಪ್ರಕಾಶ್ ಗೆ ತನ್ನದೇಯಾದ ಬೆಂಬಲಿಗರ ಬಲ ಇದೆ. ಆದ್ರೆ ಕಾಂಗ್ರೆಸ್ ನಾಯಕರು ಮಾತ್ರ ಪಕ್ಷಕ್ಕೆ ವರ್ತೂರ್ ಪ್ರಕಾಶ್ ಅವರನ್ನ ಸೇರಿಸಿಕೊಳ್ಳಲು ಸಿದ್ಧರಿಲ್ಲ.. ಅದರಲ್ಲೂ ಸಿದ್ದರಾಮಯ್ಯ ವರ್ತೂರ್ ಪ್ರಕಾಶ್ ವಿರುದ್ಧ ನಿಂತಿರೋದು ಅವ್ರಿಗೆ ಕಬ್ಬಿಣದ ಕಡಲೆ ಆಗಿದೆ.. ಇದಲ್ಲದೆ ವರ್ತೂರ್ ಪ್ರಕಾಶ್ ಬಗ್ಗೆ ಕೋಲಾರ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಿಗೆ ಒಳ್ಳೆ ಅಭಿಪ್ರಾಯ ಇಲ್ಲ.
ಇಷ್ಟು ವಿರೋಧ ಇದ್ದರೂ ಈಗ ವರ್ತೂರ್ ಪ್ರಕಾಶ್ ಕಾಂಗ್ರೆಸ್ ಕದ ತಟ್ಟುತ್ತಿದ್ದಾರೆ… ಇದಕ್ಕೆ ಕಾಂಗ್ರೆಸ್ ಯಾವ ರೀತಿ ಸ್ಪಂದನೆ ನೀಡುತದ್ದೋ ಅಂತ ಕಾದು ನೋಡಬೇಕಾಗುತ್ತದೆ..
ಶ್ರೀ ಕಟೀಲು ದುರ್ಗಾಪರಮೇಶ್ವರೀ ಕ್ಷೇತ್ರ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564