Ra-Ra-Rakkamma | ರಾರಾ ರಕ್ಕಮ್ಮ ಹಾಡಿಗೆ ರೇಣುಕಾಚಾರ್ಯ ಹೆಜ್ಜೆ..
ದಾವಣಗೆರೆ : ಒಂದಿಲ್ಲೊಂದು ವಿಚಾರದಲ್ಲಿ ಸದಾ ಸುದ್ದಿಯಲ್ಲಿರುವ ಶಾಸಕ ಎಂ.ಪಿ.ರೇಣುಕಾಚಾರ್ಯ ಇದೀಗ ರಾರಾ ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕಿ ಸದ್ದು ಮಾಡಿದ್ದಾರೆ.
ಹೊನ್ನಾಳಿಯ ಗೋವಿನಕೋವಿ ಗ್ರಾಮದಲ್ಲಿ ಆರ್ಕೇಸ್ಟ್ರಾ ಆಯೋಜನೆ ಮಾಡಲಾಗಿತ್ತು.
ಈ ವೇಳೆ ಶಾಸಕ ಎಂ.ಪಿ.ರೇಣುಕಾಚಾರ್ಯ ರಾರಾ ರಕ್ಕಮ್ಮ ಹಾಗೂ ನಾಟಿ ಪೋರಿಯೋ ಹಾಡಿಗೆ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.
ಇತ್ತ ವೇದಿಕೆ ಮೇಲೆ ರೇಣುಕಾಚಾರ್ಯ ಬರುತ್ತಿದ್ದಂತೆ ಮಕ್ಕಳು ಕುಣಿದಾಡಿದ್ದಾರೆ.
ಅಂತೆಯೇ ರೇಣುಕಾಚಾರ್ಯ ಅವರು ಕೆಲ ಕಾಲ ಮಕ್ಕಳ ಜೊತೆ ಹೆಜ್ಜೆ ಹಾಕಿದ್ದಾರೆ.
ಈ ಹಿಂದೆ ಕೂಡ ರೇಣುಕಾಚಾರ್ಯ ಅವರು ಡ್ಯಾನ್ಸ್ ಮಾಡಿದ್ದರು.