ರಚಿನ್.. ಎಜಾಜ್ ಪಟೇಲ್ ಗಿದೆ.. ಭಾರತದೊಂದಿಗೆ ಸಂಬಂಧ Rachin Ejaz saaksha tv
ನ್ಯೂಜಿಲೆಂಡ್ ಮತ್ತು ಟೀಂ ಇಂಡಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ.
ಈ ಪಂದ್ಯದಲ್ಲಿ ಕಿವೀಸ್ ತಂಡವನ್ನು ಬೌಲರ್ ಗಳಾದ ರಚಿನ್ ಮತ್ತು ಎಜಾಜ್ ಪಟೇಲ್ ಸೋಲಿನಿಂದ ಪಾರು ಮಾಡಿದರು.
ಈ ಇಬ್ಬರು ಆಟಗಾರರು ನಮ್ಮ ದೇಶದ ಹಿನ್ನೆಲೆಯನ್ನು ಹೊಂದಿದ್ದಾರೆ ಅನ್ನೋ ಸುದ್ದಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಇಂಡೋ-ಕಿವೀಸ್ ಟೆಸ್ಟ್ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ರಚಿನ್ ರವೀಂದ್ರ ವೆಲ್ಲಿಂಗ್ಟನ್ನಲ್ಲಿ ಜನಿಸಿದರು.
ಆದರೆ ಅವರ ತಂದೆ ರವಿ ಕೃಷ್ಣಮೂರ್ತಿ ಭಾರತದವರು. ಮೂಲತಃ ಬೆಂಗಳೂರಿನವರು.
ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ಕೃಷ್ಣಮೂರ್ತಿ ಬೇರೆ ಬೇರೆ ದೇಶಗಳಲ್ಲಿ ಕೆಲಸ ಮಾಡಿ ಕೊನೆಗೆ ನ್ಯೂಜಿಲೆಂಡ್ ನಲ್ಲಿ ನೆಲೆಸಿದ್ದಾರೆ.
ಕ್ಲಬ್ ಮಟ್ಟದ ಕ್ರಿಕೆಟ್ನಲ್ಲಿ ತಮ್ಮೊಂದಿಗೆ ಕ್ರಿಕೆಟ್ ಆಡಿದ ಜಾವಗಲ್ ಶ್ರೀನಾಥ್ ಅವರೊಂದಿಗೆ ಉತ್ತಮ ಸ್ನೇಹ ಹೊಂದಿದ್ದಾರೆ.
ಇನ್ನು 33 ವರ್ಷದ ಎಜಾಜ್ ಪಟೇಲ್ ಜನಿಸಿದ್ದು ಮುಂಬೈನಲ್ಲಿ. ಅವರ ಕುಟುಂಬವು 1996 ರಲ್ಲಿ ನ್ಯೂಜಿಲೆಂಡ್ಗೆ ವಲಸೆ ಹೋಗಿದ್ದಾರೆ.
ಅಂದಹಾಗೇ ಭಾರತದ ವಿರುದ್ಧ ನಾಲ್ಕನೇ ಇನ್ನಿಂಗ್ಸ್ನಲ್ಲಿ ನ್ಯೂಜಿಲೆಂಡ್ 95 ಅಥವಾ ಅದಕ್ಕಿಂತ ಹೆಚ್ಚು ಓವರ್ಗಳನ್ನು ಆಡಿ ಟೆಸ್ಟ್ ಪಂದ್ಯವನ್ನು ಡ್ರಾದಲ್ಲಿ ಕೊನೆಗೊಳಿಸಿದ್ದು ಇದು ಐದನೇ ಬಾರಿ.
ನ್ಯೂಜಿಲೆಂಡ್ ತಂಡ ಈ ಹಿಂದೆ 1976ರಲ್ಲಿ ಕಾನ್ಪುರ ಟೆಸ್ಟ್, 1999ರಲ್ಲಿ ಮೊಹಾಲಿ ಟೆಸ್ಟ್, 1999 ರಲ್ಲಿ ಅಹಮದಾಬಾದ್ ಟೆಸ್ಟ್ ಮತ್ತು 2003ರಲ್ಲಿ ಅಹಮದಾಬಾದ್ ಟೆಸ್ಟ್ಗಳಲ್ಲಿ ಇದೇ ರೀತಿ ಡ್ರಾ ಮಾಡಿಕೊಂಡಿತ್ತು.









