ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ಗೆ ಜನ್ಮದಿನದ ಸಂಭ್ರಮ
ಬೆಂಗಳೂರು : ಚಂದನವನದ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಸ್ಯಾಂಡಲ್ ವುಡ್ ನಲ್ಲಿ ರಚ್ಚು ಎಂದೇ ಖ್ಯಾತಿ ಪಡೆದಿರುವ ರಚಿತಾ ಅವರು ಇಂದು 29ರ ವಸಂತಕ್ಕೆ ಕಾಲಿಟ್ಟಿದ್ದಾರೆ.
ಕಿರುತೆರೆಯ ‘ಅರಸಿ’ ಧಾರವಾಹಿಯ ಮೂಲಕ ಕ್ಯಾಮೆರಾ ಮುಂದೆ ಬಂದ ರಚಿತಾ, ನಂತರ ಚಂದನವನದಲ್ಲಿ ದರ್ಶನ್ ಜೊತೆಗೆ ‘ಬುಲ್ ಬುಲ್’ ಸಿನಿಮಾ ಮೂಲಕ ತಮ್ಮ ಸಿನಿ ಜರ್ನಿ ಆರಂಭಿಸಿದರು.
ಆ ಸಿನಿಮಾದಿಂದ ಬುಲ್ ಬುಲ್ ರಚಿತಾ ಎಂದೇ ಖ್ಯಾತಿ ಪಡೆದರು.
ತದ ನಂತರ ಚಂದನವನದ ಸ್ಟಾರ್ ನಟರ ಜೊತೆ ಸಾಲು ಸಾಲು ಚಿತ್ರಗಳಲ್ಲಿ ನಟಿಸಿದ ರಚ್ಚು, ನೋಡ ನೋಡುತ್ತಲೇ ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟಿಯಾಗಿ ಬೆಳೆದರು.
ಡಿ ಬಾಸ್ ಜೊತೆ ಸಿನಿ ಜರ್ನಿ ಪ್ರಾರಂಭಿಸಿದ ರಚಿತಾ, ನಂತರ ಸುದೀಪ್, ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ಶ್ರೀಮುರಳಿ, ಗಣೇಶ್ ಸ್ಟಾರ್ ನಟರ ಜೊತೆ ನಟಿಸಿದ್ದಾರೆ.
ಇತ್ತ ತಮ್ಮ ನೆಚ್ಚಿನ ನಟಿಗೆ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಾಮನ್ ಡಿಪಿ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.