ಫಸ್ಟ್ ನೈಟ್ ಪಾಠ ಮಾಡಿದ ಡಿಂಪಲ್ ಕ್ವೀನ್ ರಚ್ಚು..! Rachitha Ram saaksha tv
ರಚಿತಾ ರಾಮ್… ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟಿ. ಡಿಂಪಲ್ ಕ್ವೀನ್ ಖ್ಯಾತಿಯ ರಚಿತಾ ರಾಮ್ ತುಂಬಾನೇ ಬಿಝಿಯಾಗಿದ್ದಾರೆ.
ಹಲವು ಸಿನಿಮಾ, ರಿಯಾಲಿಟಿ ಶೋಗಳಲ್ಲಿ ಭಾಗವಹಿಸುತ್ತಿರುವ ರಚಿತಾ ರಾಮ್ ಇದೀಗ ಭಾರೀ ಸುದ್ದಿಯಲ್ಲಿದ್ದಾರೆ.
ಹೌದು, ಲವ್ ಯೂ ರಚ್ಚು ಚಿತ್ರದ ಪ್ರೆಸ್ ಮೀಟ್ ನಲ್ಲಿ ರಚಿತಾ ರಾಮ್ ರಾಂಗ್ ಆಗಿದ್ದಾರೆ.
ಅಷ್ಟಕ್ಕೂ ಅವರು ರಾಂಗ್ ಆಗಿರೋದಕ್ಕೆ ಕಾರಣ ತುಂಬಾನೇ ಸಿಂಪಲ್ ಆಗಿದೆ.
ನೆನಪಿರಬಹುದು… ಉಪೇಂದ್ರ ಜೊತೆ ನಟಿಸಿದ್ದ ಲವ್ ಯೂ ಚಿತ್ರದಲ್ಲಿ ರಚ್ಚು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು.
ಅಲ್ಲದೆ ಚಿತ್ರವನ್ನು ನೋಡಿದ ನಂತರ ಕಣ್ಣೀರು ಹಾಕೊಂಡು ಈ ರೀತಿಯ ಪಾತ್ರದಲ್ಲಿ ನಟಿಸಬಾರದಿತ್ತು ಎಂದು ಕೂಡ ಹೇಳಿದ್ದರು.
ಆದಾಗಿ ಎರಡು ಮೂರು ವರ್ಷಗಳೇ ಕಳೆದಿವೆ. ಇದೀಗ ಅಂತಹುದ್ದೇ ದೃಶ್ಯದಲ್ಲಿ ಮತ್ತೆ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ.
ಅಜೇಯ್ ರಾವ್ ಜೊತೆ ಲವ್ ಯೂ ರಚ್ಚು ಚಿತ್ರದಲ್ಲಿ ಡಿಂಪಲ್ ಕ್ವೀನ್ ನಟಿಸುತ್ತಿದ್ದಾರೆ.
ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ ಮಾಡಿರುವ ಈ ಚಿತ್ರದ ಒಂದು ರೊಮ್ಯಾಂಟಿಕ್ ಹಾಡಿನಲ್ಲಿ ರಚ್ಚು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
ಆಗ ಪ್ರತಕರ್ತರು ಈ ದೃಶ್ಯದ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಆಗ ರಾಂಗ್ ಆದ ರಚ್ಚು ಪತ್ರಕರ್ತರಿಗೆ ಮರು ಪ್ರಶ್ನೆ ಹಾಕಿದ್ದಾರೆ.
ಹೌದು, ನಾನು ಬೋಲ್ಡ್ ದೃಶ್ಯಗಳಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದೆ. ಇದೀಗ ಬೋಲ್ಡ್ ಆಗಿರುವ ದೃಶ್ಯದಲ್ಲಿ ಕಾಣಿಸಿಕೊಂಡಿದ್ದೇನೆ.
ಅದಕ್ಕೂ ಒಂದು ಕಾರಣವಿರುತ್ತೆ. ಸಾಮಾನ್ಯವಾಗಿ ಮದುವೆಯಾದ ಮೇಲೆ ಫಸ್ಟ್ ನೈಟ್ ನಲ್ಲಿ ಏನು ಮಾಡ್ತೀರಾ ?
ರೋಮ್ಯಾನ್ಸ್ ಮಾಡ್ತಾರೆ ಅಲ್ವಾ.. ಅದನ್ನೆ ನಾನು ಇಲ್ಲಿ ಮಾಡಿದ್ದೇನೆ. ಹಾಗಂತ ಡಿಟೈಲ್ ಆಗಿ ಹೋಗಿಲ್ಲ.
ಬೇಸಿಕ್ ಏನಿದೆಯೋ ಅದನ್ನೇ ಮಾಡಿದ್ದೇನೆ ಎಂದು ರಚಿತಾ ರಾಮ್ ಅವರು ಪತ್ರಕರ್ತರಿಗೆ ಫಸ್ಟ್ ನೈಟ್ ಪಾಠ ಮಾಡಿದ್ದಾರೆ.