ಪ್ರೇಮಿಗಳ ದಿನದಂದೇ ರಿಲೀಸ್ ಆದ ‘ರಾಧೆ ಶ್ಯಾಮ್’ ಟೀಸರ್ ಗೆ ವಾವ್ಹಾ ಎನ್ನುತ್ತಿದ್ದಾರೆ ನೆಟ್ಟಿಗರು..!
ವಾಲೆಂಟೈನ್ಸ್ ಡೇ ವಿಶೇಷವಾಗಿ ಪ್ರಭಾಸ್ – ಪೂಜಾ ಹೆಗ್ಡೆ ನಟನೆಯ ಬಹುನಿರೀಕ್ಷೆಯ ರಾಧೆ ಶ್ಯಾಮ್ ಟೀಸರ್ ರಿಲೀಸ್ ಆಗಿದೆ. ಪ್ರೇಮಿಗಳ ದಿನದಂದು ರಿಲೀಸ್ ಮಾಡಲಾಗಿರುವ ಪ್ರೇಮಭರಿತವಾದ ಸಿನಿಮಾದ ಟೀಸರ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಕೆಲವೇ ಸೆಂಕೆಂಡುಗಳ ದೃಶ್ಯಗಳನ್ನು ಒಳಗೊಂಡ ಟೀಸರ್ ಇದಾಗಿದೆಯಾದ್ದು, ಸ್ಯಾನಿಷ್ ನಲ್ಲಿ ಪ್ರಭಾಸ್ ಹೇಳೋ ಡೈಲಾಗ್ ಅರ್ಥ ಆಗ್ದೇ ಇದ್ರು ಸಿನಿಮಾ ಮೇಲಿನ ಪ್ರೇಕ್ಷಕರ ನಿರೀಕ್ಷೆಯನ್ನ ಮಾತ್ರ ಮತ್ತಷ್ಟು ಹೆಚ್ಚಿಸಿದೆ. ಸಿನಿಮಾಚದಲ್ಲಿ ಲವರ್ ಬಾಯ್ ಪ್ರಭಾಸ್ ಗೆಟಪ್, ಬ್ಯೂಟಿಫುಲ್ ಪೂಜಾ ಹೆಗ್ಡೆಯ ಕ್ಯೂಟ್ ಲುಕ್ , ಪ್ಯಾರಿಸ್‌ನ ಹಳೆಯ ರೈಲ್ವೆ ಸ್ಟೇಷನ್ ನೆಟ್ಟಗರ ಕಣ್ಮನ ಸೆಳೆಯುತ್ತಿದೆ.
ವ್ಯಾಲೆಂಟೈನ್ಸ್ ಡೇಗೆ ಮತ್ತೊಮ್ಮೆ ರಿಲೀಸ್ ಆಗ್ತಿದೆ ನೋಡಿ ‘ದಿಯಾ’..!
UV Creations Youtube Channelನಲ್ಲಿ ಇಂದು ಟೀಸರ್ ರಿಲೀಸ್ ಆಗಿದ್ದು, ಲಕ್ಷಾನುಗಟ್ಟಲೇ ವೀವ್ಸ್ ಹಾಗೂ ಲೈಕ್ಸ್ ಪಡೆದುಕೊಂಡಿದೆ. ಸಾವಿರಾರು ಮಂದಿ ಕಮೆಂಟ್ ಗಳ ಮೂಲಕ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಗೆ ಚಿತ್ರಕ್ಕೆ ಶುಭಹಾರೈಸ್ತಿದ್ದಾರೆ. ಅಷ್ಟೇ ಅಲ್ಲ ಮತ್ತೊಂದು ವಿಶೇಷ ಅಂದ್ರೆ ಕನ್ನಡದಲ್ಲೂ ಟೀಸರ್ ರಿಲೀಸ್ ಆಗಿರೋದು ಹೌದು ಈ ಟೀಸರ್ ಕನ್ನಡಲ್ಲಿಯೂ ರಿಲೀಸ್ ಆಗಿದ್ದು ಪ್ರಭಾಸ್ ಅವರ ಕನ್ನಡದ ಅಭಿಮಾನಿಗಳ ಮನಗೆದ್ದಿದೆ.
ಬ್ರೆಡ್ ಗುಲಾಬ್ ಜಾಮೂನ್
ರೋಮ್ ನ ಅತ್ಯಂತ ರಮಣೀಯ ಪ್ರದೇಶವೊಂದರ ದೃಶ್ಯಗಳೊಂದಿಗೆ ಆರಂಭವಾಗುವ ಟೀಸರ್ ನಲ್ಲಿ ರೊಮೇನಿಯನ್ ರೈಲ್ವೆ ನಿಲ್ದಾಣದಲ್ಲಿ ಜನಸಮೂಹದ ನಡುವೆ ಪ್ರಭಾಸ್ – ಪೂಜಾ ಹೆಗ್ಡೆಯನ್ನ ಹುಡುಕುತ್ತಾ ಇಟಾಲಿಯನ್ ಭಾಷೆಯಲ್ಲಿ ‘Sei Un Angelo? Devo Morire per incontrarti? ಎಂದು ಕರೆಯುವುದು ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸುತ್ತದೆ. ಆ ನಂತರ ಇಬ್ಬರ ನಡುವಿನ ಪ್ರೀತಿಯ ಸಂಭಾಷಣೆ ಹೈಲೈಟ್.
ಈ ಸಿನಿಮಾ ಜುಲೈ 30 ರಂದು ಬಿಡುಗಡೆ ಆಗಲಿದೆ. ಸಿನಿಮಾದ ಬಹುತೇಕ ಚಿತ್ರೀಕರಣ ಪ್ಯಾರಿಸ್ ನಲ್ಲಿ ನಡೆದಿದೆ. ಕೆಲವು ದಶಕಗಳ ಹಿಂದಿನ ಸ್ಟೋರಿ ಇದಾಗಿದೆ. ಹೇಳಿ ಕೇಳಿ ಪ್ಯಾರಿಸ್ ಲವರ್ಸ್ ಗಳ ಹಾಟ್ ಪೇವರೇಟ್ ದೇಶ. ಸಿನಿಮಾಗೆ ರಾಧಾ ಕೃಷ್ಣ ಕುಮಾರ್ ಆಕ್ಷನ್ ಕಟ್ ಹೇಳಿದ್ದು, ಯುವಿ ಕ್ರಿಯೇಶನ್ಸ್ ನಲ್ಲಿ ಮೂಡಿಬಂದಿರುವ ಸಿನಿಮಾಗೆ ಜಸ್ಟಿನ್ ಪ್ರಭಾಕರ್ ಸಂಗೀತವಿದೆ.
ನಮ್ಮ `ಸಿಂಬಾ’ ಎಂದು ಮಗುವಿನ ವಿಡಿಯೋ ಹಂಚಿಕೊಂಡ ಮೇಘನಾ ರಾಜ್
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








