ಬಾಕ್ಸ್ ಆಫೀಸ್ ನಲ್ಲಿ ವರ್ಕೌಟ್ ಆಗದ ಪ್ರಭಾಸ್ ಕ್ರೇಜ್ – ರಾಧೇಶ್ಯಾಮ್ ಗೆ ಮುಖಭಂಗ
ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದ್ದ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಮತ್ತು ನಟಿ ಪೂಜಾ ಹೆಗ್ಡೆ ಅಭಿನಯದ ‘ರಾಧೆ ಶ್ಯಾಮ್’ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಮುಖಭಂಗ ಅನುಭವಿಸಿದೆ. 350 ಕೋಟಿ ಬಜೆಟ್‌ನಲ್ಲಿ ರೆಡಿಯಾದ ಚಿತ್ರ ಇದುವರೆಗೆ 200 ಕೋಟಿ ಕ್ಲಬ್‌ನ ಸಮೀಪಕ್ಕೆ ಬಂದು ನಿಂತಿದೆ. ಇದೇ ಕಾರಣಕ್ಕೆ ರಾಧೇಶ್ಯಾಮ್ ಚಿತ್ರ ಫ್ಲಾಪ್ ಎಂದು ಸಿನಿಮಾ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಿನಿಮಾ ಟ್ರೇಡ್ ವರದಿಗಳ ಪ್ರಕಾರ, ರಾಧೆ ಶ್ಯಾಮ್ ಆರು ದಿನಗಳಲ್ಲಿ ಕೇವಲ 184 ಕೋಟಿ ರೂ. ಗಳಿಸಿದೆ.
‘ರಾಧೆ ಶ್ಯಾಮ್’ ಸಿನಿಮಾ ಇಲ್ಲಿಯವೆರೆಗೆ ಹಾಕಿದ ಬಂಡವಾಳ ವಾಪಸ್ ತೆಗೆಯುವಲ್ಲಿ ವಿಫಲವಾಗಿದೆ. ಕಷ್ಟಪಟ್ಟು 200 ಕೋಟಿ ಕ್ಲಬ್ ಸೇರುತ್ತಿದೆ. ರಾಧೆ ಶ್ಯಾಮ್ ವರ್ಲ್ಡ್ ವೈಲ್ಡ್ ಆರು ದಿನಗಳಲ್ಲಿ 184.82 ಕೋಟಿ ಗಳಿಸಿದೆ. ‘ಆರ್‌ಆರ್‌ಆರ್’ ಬಿಡುಗಡೆಯಾಗುವವರೆಗೂ ಚಿತ್ರದ ಗಳಿಕೆ ಮುಂದುವರಿಯಬಹುದು ಎಂದು ಅಂದಾಜಿಸಲಾಗಿದೆ.
ಮೊದಲ ದಿನ 72.41 ಕೋಟಿ ರೂ
2ನೇ ದಿನ 39.65 ಕೋಟಿ
3ನೇ ದಿನ 38.29 ಕೋಟಿ ರೂ
4ನೇ ದಿನ 14.83 ಕೋಟಿ
5ನೇ ದಿನ 10.58 ಕೋಟಿ
6ನೇ ದಿನ 9.06 ಕೋಟಿ
ಒಟ್ಟು ಗಳಿಕೆ 184.82 ಕೋಟಿ
ದಕ್ಷಿಣ ಚಿತ್ರರಂಗದ ಮಟ್ಟಿಗೆ ಪ್ರಭಾಸ್ ಗೆ ದೊಡ್ಡ ಮಟ್ಟದ ಹೆಸರಿದೆ. ಅಭಿಮಾನಿಗಳಲ್ಲಿ ಪ್ರಭಾಸ್ ಕ್ರೇಜ್ ಉತ್ತುಂಗದಲ್ಲಿದೆ. ಆದರೆ ಇಲ್ಲಿಯೂ ಚಿತ್ರ ಹಣ ಕಮಾಯಿಸುವಲ್ಲಿ ಎಡವಿದೆ. ಆಂಧ್ರ ಮತ್ತು ತೆಲಂಗಾಣದಲ್ಲಿ 37.85 ಕೋಟಿ ರೂಪಾಯಿಗಳಿಂದ ಆರಂಭವಾದ ಚಿತ್ರ ಈಗ 3.52 ಕೋಟಿ ರೂಪಾಯಿಗಳಿಗೆ ತಲುಪಿದೆ. ಇದಕ್ಕೆ ವ್ಯತಿರಿಕ್ತವಾಗಿ, ಕಾಶ್ಮೀರ ಫೈಲ್ ಸಿನಿಮಾದ ಗಳಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.








