ಲವ್ ಮಾಕ್ಟೇಲ್ ಚಿತ್ರದ ಮೂಲಕ ಟ್ರ್ಯಾಕ್ ಗೆ ಬಂದಿರುವ ನಟ ಡಾರ್ಲಿಂಗ್ ಕೃಷ್ಣ ಮತ್ತೆ ಪ್ರೇಮಕಥೆಯ ರಸಧಾರೆ ಹರಿಸಿಲು ಸಜ್ಜಾಗುತ್ತಿದ್ದಾರೆ. ಈ ಸಿನಿಮಾಗೆ ಸಂಜು ವೆಡ್ಸ್ ಗೀತಾ, ಮೈನಾದಂತಹ ರೊಮ್ಯಾಂಟಿಕ್ ಸಿನಿಮಾಗಳನ್ನು ನಿರ್ದೇಶಿಸಿದ್ದ ನಾಗಶೇಖರ್ ಅವರು ಆಕ್ಷನ್ ಕಟ್ ಹೇಳಲಿದ್ದಾರೆ. ಸಂದೇಶ್ ಬ್ಯಾನರ್ ನಡಿ ಈ ಸಿನಿಮಾ ನಿರ್ಮಾಣ ಆಗಲಿದೆ.
ಮೂಲಗಳ ಪ್ರಕಾರ ಇದೊಂದು ಲವ್ ಕಾಮಿಡಿ ಸ್ಟೋರಿ ಆಗಿದ್ದು, ಲಾಕ್ ಡೌನ್ ಅವಧಿಯಲ್ಲಿ ಸ್ಕ್ರಿಪ್ಟ್ ರೆಡಿಯಾಗಿದ್ದು ಸದ್ಯ ಮ್ಯೂಸಿಕ್ ಕೆಲಸಗಳು ನಡೆಯುತ್ತಿವೆ. ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ದತ್ತಣ್ಣ ನಟಿಸಿದ್ರೆ ನಟಿ ಸುಹಾಸಿನಿ, ಅರುಣ್ ಸಾಗರ್, ರಂಗಾಯಣ ರಘು ತಾರಾಗಣದಲ್ಲಿ ಇರಲಿದ್ದಾರೆ. ಕವಿರಾತ್ ಸಾಹಿತ್ಯ, ಪ್ರೀತಮ್ ಗುಬ್ಬಿ ಸಂಭಾಷಣೆ, ಸತ್ಯ ಹೆಗಡೆ ಸಿನಿಮಾಟೋಗ್ರಫಿ ಚಿತ್ರಕ್ಕಿರಲಿದೆ. ಸಂಜು ವೆಡ್ಸ್ ಗೀತ್, ಮೈನಾ ಚಿತ್ರಗಳಲ್ಲಿ ಹಿಟ್ ಹಾಡುಗಳನ್ನ ನೀಡಿದ್ದ ಜೆಸ್ಸಿ ಗಿಫ್ಟ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.
ಚಿತ್ರಕ್ಕೆ ರಾಧಿಕಾ ಕುಮಾರಸ್ವಾಮಿ ಹೀರೋಯಿನ್
ನಿರ್ದೇಶಕ ನಾಗಶೇಖರ್ ಹಾಗೂ ಮದರಂಗಿ ಕೃಷ್ಣ ಅವರ ಸಿನಿಮಾ email protected ಅನ್ನೋ ಹೆಸರಿನಲ್ಲಿ ಸೆಟ್ಟೇರಲಿದ್ದು, ನಾಗಶೇಖರ್ ಅವರು, ಸ್ಯಾಂಡಲ್ವುಡ್ ಸ್ವೀಟ್ ಬ್ಯೂಟಿ ರಾಧಿಕಾ ಕುಮಾರಸ್ವಾಮಿಯವರನ್ನ ಹೀರೋಯಿನ್ ಆಗಿ ಕರೆತರೋಕೆ ಉತ್ಸುಕರಾಗಿದ್ದಾರಂತೆ. ಈಗಾಗ್ಲೇ ರಾಧಿಕಾ ಅವರ ಜೊತೆ ಮೊದಲ ಸುತ್ತಿನ ಮಾತುಕತೆಯಾಗಿದ್ದು ಕೆಲ ದಿನಗಳಲ್ಲೇ ಕಥೆ ಹೇಳಲಿದ್ದಾರಂತೆ. ರಾಧಿಕಾ ಅವರು ಓಕೆ ಅಂದ್ರೆ ಕೃಷ್ಣ, ರಾಧಿಕಾ ಕುಮಾರಸ್ವಾಮಿ ಕಾಂಬಿನೇಶನ್ನ ಕಾಮಿಡಿ ಲವ್ ಸ್ಟೋರಿಯನ್ನ ತೆರೆಮೇಲೆ ಕಣ್ತುಂಬಿಕೊಳ್ಳಬಹುದು.








