ಶತಾಬ್ದಿ ಮತ್ತು ವಂದೇ ಭಾರತ್ ರೈಲುಗಳಲ್ಲಿ ಶುರುವಾಗಲಿದೆ ರೇಡಿಯೋ ಮನೋರಂಜನೆ…
ಇದೆ ಮೊದಲ ಬಾರಿಗೆ ಉತ್ತರ ರೈಲ್ವೆಯ ದೆಹಲಿ ವಿಭಾಗವು (NR) ಶತಾಬಾದಿ ಮತ್ತು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಲ್ಲಿ ರೇಡಿಯೋ ಮನೋರಂಜನೆಯನ್ನ ಒದಗಿಸಲಿದೆ. ಭಾರತದ ಬಹುತೇಕ ಎಲ್ಲಾ ಶಾಸ್ತ್ರೀಯ ಮತ್ತು ಇತರ ಸುಮಧುರ ಸಂಗೀತದ ರೇಡಿಯೊ ಸೇವೆಯನ್ನು ಪರಿಚಯಿಸಲಿದೆ.
10 ಶತಾಬ್ದಿ ಮತ್ತು 2 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಈ ರೇಡಿಯೋ ಮನರಂಜನಾ ಸೇವೆಯು ಪ್ರಯಾಣಿಕರಿಗೆ ಒದಗಿಸಲಿದೆ.
ಪತ್ರಿಕೆಗೆ ದೃಢಪಡಿಸಿದ ಉತ್ತರ ರೈಲ್ವೆಯ ಮುಖ್ಯ ವಕ್ತಾರ ದೀಪಕ್ ಕುಮಾರ್, ದೆಹಲಿ, ಲಕ್ನೋ, ಭೋಪಾಲ್, ಚಂಡೀಗಢ, ಅಮೃತಸರ, ಚಂಡೀಗಢ, ಅಜ್ಮೀರ್, ಡೆಹರಾಡೂನ್, ಕಾನ್ಪುರ್, ವಾರಣಾಸಿಗೆ ಪ್ರಯಾಣ ಬೆಳಸುವ ಶತಾಬ್ದಿ ಮತ್ತು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಲ್ಲಿ , ತಮ್ಮ ಪ್ರಯಾಣದ ಉದ್ದಕ್ಕೂ ಈ ಸಂಗೀತ ಮನರಂಜನಾ ಸೇವೆಗಳನ್ನು ಆನಂದಿಸುತ್ತಾರೆ ಎಂದಿದ್ದಾರೆ.
ದೆಹಲಿ ವಿಭಾಗದ ಎಲ್ಲಾ ಶತಾಬ್ದಿ ಮತ್ತು ವಂದೇ ಭಾರತ್ ರೈಲುಗಳಲ್ಲಿ ರೇಡಿಯೊ ಸೇವೆಯನ್ನು ಒದಗಿಸಲು ಎನ್ಆರ್ ಒಪ್ಪಂದವನ್ನು ಮಾಡಿಕೊಂಡಿದೆ ಎಂದು ಕುಮಾರ್ ಹೇಳಿದರು. “ಸಂಗೀತ ಪ್ರಯಾಣ ಸಮಯದಲ್ಲಿ ಅತ್ಯುತ್ತಮ ಜೊತೆಗಾರನಾಗಿದೆ. ಪ್ರಯಾಣದಲ್ಲಿ ಉತ್ತಮ ಮನಸ್ಥಿತಿಯ ಸಾಧ್ಯತೆಯನ್ನ ಹೆಚ್ಚಿಸುತ್ತದೆ. ಈಗಾಗಲೇ ಸ್ಥಾಪಿಸಲಾದ ಪ್ರಯಾಣಿಕರ ಪ್ರಕಟಣೆ ವ್ಯವಸ್ಥೆ (PAS) ಮೂಲಕ ಉತ್ತರ ರೈಲ್ವೇ ಹೊಸ ರೀತಿಯ ಮನರಂಜನೆ ಮತ್ತು ಆನಂದವನ್ನು ನೀಡುತ್ತದೆ” ಎಂದು ಅವರು ಹೇಳಿದರು.
ವಂದೇ ಭಾರತ್ ಮತ್ತು ಶತಾಬ್ದಿ ರೈಲುಗಳಲ್ಲಿ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕರಿಗೆ ಹಿತವಾದ ಮತ್ತು ಆಹ್ಲಾದಕರ ಪ್ರಯಾಣದ ಅನುಭವವನ್ನು ಖಚಿತಪಡಿಸಿಕೊಳ್ಳಲು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.








