Rafael Nadal | ನಡಾಲ್ ಖಾತೆಗೆ 91ನೇ ಸಿಂಗಲ್ಸ್ ಟೈಟಲ್..!
ಈ ವರ್ಷ ಸತತ 15ನೇ ಬಾರಿ ಗೆದ್ದಿರುವ ಸ್ಪೇನ್ ಟೆನಿಸ್ ತಾರೆ ರಾಫೆಲ್ ನಡಾಲ್, ಮೆಕ್ಸಿಕೋ ಓಪನ್ ನಲ್ಲಿ ನಾಲ್ಕನೇ ಬಾರಿ ಪ್ರಶಸ್ತಿ ಜಯಿಸಿದ್ದಾರೆ.
ಭಾನುವಾರ ನಡೆದ ಫೈನಲ್‌ನಲ್ಲಿ ನಡಾಲ್ 6–4, 6–4ರಲ್ಲಿ ಕ್ಯಾಮರೂನ್ ನೋರಿ (ಬ್ರಿಟನ್) ಅವರನ್ನು ಸೋಲಿಸಿದರು.
ಚಾಂಪಿಯನ್ ನಡಾಲ್ $ 3,14,455 ಬಹುಮಾನದ ಹಣ (ರೂ. 2 ಕೋಟಿ 36 ಲಕ್ಷ) ಮತ್ತು 500 ರ್ಯಾಂಕಿಂಗ್ ಅಂಕಗಳನ್ನು ಪಡೆದರು.
ಇದು ನಡಾಲ್ ಅವರ ವೃತ್ತಿಜೀವನದಲ್ಲಿ ಇದು 91 ನೇ ಸಿಂಗಲ್ಸ್ ಪ್ರಶಸ್ತಿಯಾಗಿದೆ. ಈ ವರ್ಷ ಅವರ ಮೂರನೇ ಪ್ರಶಸ್ತಿಯಾಗಿದೆ.
rafael-nadal-wins mexican-open