ಬೆಂಗಳೂರು: ನಾನು ಡ್ರಗ್ಸ್ ತೆಗೆದುಕೊಳ್ಳುತ್ತೇನೆ ಎಂದು ಪ್ರಶಾಂತ್ ಸಂಬರಗಿ ಮಾಡಿರುವ ಆರೋಪಕ್ಕೆ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಕಿಡಿಕಾರಿದ್ದಾರೆ.
ನನಗೂ ಡ್ರಗ್ಸ್‍ಗೂ ಸಂಬಂಧವೇ ಇಲ್ಲ, ಅದನ್ನು ಊಹಿಸಿಕೊಂಡರೆ ಭಯ ಆಗುತ್ತೆ. ಡ್ರಗ್ಸ್ ಜಾಲದಲ್ಲಿ ನನ್ನ ಹೆಸರು ಬಂದಿದ್ದು ಬೇಜಾರಾಗಿದೆ. ಅಷ್ಟೇ ಅಲ್ಲ ನೋವಾಗಿದ್ದು, ಸಿಟ್ಟು ಬರ್ತಿದೆ ಎಂದು ರಘು ದೀಕ್ಷಿತ್ ಅಸಮಾಧಾನ ಹೊರಹಾಕಿದ್ದಾರೆ.
ಇಂತಹ ಆರೋಪ ಬರುತ್ತೆ ಎಂದು ನಾನು ಊಹೆ ಕೂಡ ಮಾಡಿರಲಿಲ್ಲ. ಈ ಬಗ್ಗೆ ಯಾವುದೇ ತನಿಖೆ ಮಾಡಿದ್ರೂ ಎದುರಿಸಲು ನಾನು ರೆಡಿ ಇದ್ದೇನೆ. ಪ್ರಶಾಂತ್ ಸಂಬರಗಿ ಹಾಗೂ ನಾನು ಸಂಪರ್ಕಕ್ಕೆ ಬಂದು ಏಳೆಂಟು ವರ್ಷಗಳಾಗಿವೆ. ಈ ವಿಷಯದಲ್ಲಿ ಪ್ರಶಾಂತ್ ನನ್ನನ್ನು ನೇರವಾಗಿ ಕೇಳಬಹುದಿತ್ತು. ನನ್ನ ನೋಡಿದ್ರೆ ಡ್ರಗ್ಸ್ ತೆಗೆದುಕೊಂಡ ಹಾಗೆ ಕಾಣ್ತೀನಾ. ಯಾಕೆ ಈ ಆರೋಪ ಮಾಡುತ್ತಿದ್ದಾರೆ ಅಂತ ನನಗೆ ಗೊತ್ತಿಲ್ಲ.
ನನ್ನ ರಕ್ತದಲ್ಲಿ ಸಂಗೀತ ಇದೆ, ಅದನ್ನು ಬಿಟ್ಟು ಬೇರೇನೂ ಸಿಗುವುದಿಲ್ಲ. ನನ್ನ ವಿರುದ್ಧ ಇಂತಹ ಆರೋಪಗಳು ಬಂದಿರುವುದರಿಂದ ನನ್ನ ಕರಿಯರ್‍ಗೆ ಸಮಸ್ಯೆ ಆಗಿ ಕೆಲಸಗಳಿಗೆ ತೊಂದರೆ ಆಗುತ್ತೆ. ನಾನು ಏನೇ ಆರೋಪ ಮಾಡಲಿ, ನಾನು ಕ್ಷಮಿಸಿ ಬಿಡ್ತೀನಿ. ಬೇರೆಯವರ ಡ್ರಗ್ ವ್ಯಾಮೋಹದ ಬಗ್ಗೆ ನನಗೆ ಗೊತ್ತಿಲ್ಲ, ನಾನು ಅಂತಹವನಲ್ಲ. ಸಂಗೀತದ ಕೆಲಸಕ್ಕೆ ಬಂದಿದ್ದೇನೆ, ಅದನ್ನೇ ಮಾಡುತ್ತೇನೆ ಎಂದು ರಘು ದೀಕ್ಷಿತ್ ಸ್ಪಷ್ಟಪಡಿಸಿದ್ದಾರೆ.









