ಟ್ರೇಲರ್ ನಿಂದಲೇ ಸಾಕಷ್ಟು ಕ್ಯೂರಿಯಾಸಿಟಿ ಹುಟ್ಟಿಸಿರುವ ಲಾ ಸಿನೆಮಾಗೆ ಡಿಜಿಟಲ್ ಫ್ಲಾಟ್ ಫಾರನಲ್ಲಿ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗ್ತಿದೆ. ಪಿ ಆರ್ ಕೆ ಬ್ಯಾನರ್ ನ ಅಡಿಯಲ್ಲಿ ಮೂಡಿಬರುತ್ತಿರುವ ಲಾ ಸಿನಿಮಾ ಸ್ಯಾಂಡಲ್ ವುಡ್ ಚಿತ್ರರಂಗದ ಮೊದಲ ಡಿಜಿಟಲ್ ಸಿನಿಮಾವಾಗಿದೆ. ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವ ರಘು ಸಮರ್ಥ್ ನಮ್ಮ ಸಾಕ್ಷಾ ಟಿವಿಯೊಂದಿಗೆ ಚಿತ್ರದ ಬಗೆಗಿನ ಕೆಲ ಇಂಟ್ರೆಸ್ಟಿಂಗ್ ವಿಚಾರಗಳನ್ನ ಹಂಚಿಕೊಂಡಿದ್ದಾರೆ. 
ಕಥೆಯ ಹಿನ್ನಲೆ ಏನು..?
ರಘು ಸಮರ್ಥ್ : ಸ್ಮೈಲ್ ಪ್ಲೀಸ್ ಚಿತ್ರದ ನಂತರ ಒಂದೊಳ್ಳೆ ಕಥೆಗಾಗಿ ಕಾಯುತ್ತಿದ್ದೆ. ಮಹಿಳಾ ಪ್ರಧಾನ ಕಥೆ ಅದ್ರಲ್ಲೂ ಸ್ಟ್ರಾಂಗ್ ವುಮೆನ್ ಕ್ಯಾರೆಕ್ಟರ್ ಇರುವ ಸಿನಿಮಾ ಮಾಡುವ ಆಸೆ ಇತ್ತು. ಹೆಣ್ಣು ಅಂದ್ರೆ ಅಸಹಾಯಕಳು ಅಂತ ಬಿಂಬಿಸೋ ಜನರ ನಡುವೆ ಆಕೆಯ ಶಕ್ತಿಯನ್ನ ಸಮಾಜಕ್ಕೆ ತೋರಿಸುವ ಕಥೆ. ಒಂದು ಹೆಣ್ಣು ದೌರ್ಜನ್ಯದ ವಿರುದ್ಧ ಕಾನೂನಿನ ರೀತಿಯಲ್ಲಿ ಯಾವ ರೀತಿ ಹೋರಾಡಬುದು ಎಂಬುದೇ ಈ ಕಥೆಯ ಸಾರಾಂಶ..
ಪಿಆರ್ ಕೆ ಪ್ರೊಡಕ್ಷನ್ ನ ಅಡಿ ಸಿನೆಮಾ ಮೂಡಿ ಬಂದಿದ್ದು ಹೇಗೆ..?
ರಘು ಸಮರ್ಥ್ : ನಾನು ಮೊದಲ ಗೋವಿಮದ್ ಅವರ ಬಳಿ ಕಥೆ ಹೇಳಿದ್ದು, ಆಗ ಅವರು ಮಾಯಾ ಬಜಾರ್ ಸಿನೆಮಾ ಮಾಡ್ತಿದ್ದರು. ಬಳಿಕ ಪುನಿತ್ ರಾಜ್ ಕುಮಾರ್ ಅವರನ್ನು ಭೇಟಿಯಾಗಿ ಕಥೆ ಹೇಳಿದೆ. ಕಥೆ ಅಪ್ಪು ಸರ್ ಗೆ ಸಿಕ್ಕಾಪಟ್ಟೆ ಇಷ್ಟ ಆಯ್ತು. ಇದಾದ ಬಳಿಕ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಬಳಿಯೂ ಕಥೆ ಹೇಳಿದೆ ಅವರೂ ಇಷ್ಟ ಪಟ್ಟರು. ಅವರೂ ಸಹ ಮಹಿಳಾ ಪ್ರದಾನ ಪಾತ್ರದ ಸಿನಿಮಾ ಮಾಡುವ ನಿರೇಕ್ಷೆಯಲ್ಲಿದ್ದರು. ಇದೊಂದು ವಿಸೇಷ ಪ್ರಯೋಗವಾಗಿದ್ದು ಸಿನೆಮಾ ಮಾಡಬೇಕು ಎಂದು ಅಭಿಪ್ರಾಯ ಪಟ್ರು.
ಕೋವಿಡ್ ಬಿಕ್ಕಟ್ಟಿಗೂ ಗೂ ಮುಂಚೆಯೇ ಚಿತ್ರೀಕರಣ ಮುಗಿದಿತ್ತಾ..?
ರಘು ಸಮರ್ಥ್ : 2019ರ ಡಿಸೆಂಬರ್ ವೇಳೆಗೆ ಚಿತ್ರದ ಸೆನ್ಸಾರ್ ಪ್ರಕ್ರಿಯೆ ಸಹ ಮುಗಿದಿತ್ತು. ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದ ಹೊತ್ತಿಗೆ ಕೊರೊನಾ ಸಮಸ್ಯೆ ಹೆಚ್ಚಾಗಿ ಲಾಕ್ ಡೌನ್ ನಿಂದ ಥಿಯೇಟರ್ ಗಳೂ ಬಂದ್ ಆದ್ವು. ಹೀಗಾಗಿ ಒಟಿಟಿಯಲ್ಲಿ ಸಿನಿಮಾ ರಿಲೀಸ್ ಮಾಡುವುದು ಸೂಕ್ತ ಎನ್ನುವ ನಿರ್ದಾರಕ್ಕೆ ಬಂದೆವು.
ರಾಗಿಣಿ ಅವರ ಅಭಿನಯದ ಕುರಿತಾದ ಅಭಿಪ್ರಾಯ..?
ರಘು ಸಮರ್ಥ್: ಸಿನಿಮಾ ಮಾಡಬೇಕು ಅಂದುಕೊಮಡಾಗಲೇ ಚಿತ್ರಕ್ಕೆ ಪ್ರೆಶ್ ಫೇಸ್ ಬೇಕು ಎನಿಸಿತ್ತು. ಹೀಗಾಗಿಯೇ ಹೀರೋಯಿನ್ ಹುಡುಕಾಟದಲ್ಲಿದ್ದಾಗಲೇ ರಾಗಿಣಿ ಅವರ ಕೆಲ ಆಡ್ ಗಳನ್ನ ನೋಡಿದೆ. ಅವರು ತುಂಬಾ ಎಕ್ಸ್ ಪ್ರೆಸ್ಸೀವ್ ಎನ್ನಿಸಿತು. ಹೀಗಾಗಿ ಅವರ ಬಳಿ ಕಥೆ ಹೇಳಿದೆ. ಅವರೂ ಸಹ ಕಥೆ ಕೇಳಿ ತುಂಬಾ ಇಷ್ಟ ಪಟ್ರು.
ಸಾಕುಷ್ಟು ಕುತೂಹಲ ಸೃಷ್ಟಿ ಮಾಡಿರುವ ಲಾ ಚಿತ್ರ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಅವರ ಚೊಚ್ಚಲ ಸಿನೆಮಾವಾಗಿದ್ದು, ಪಿಆರ್ ಕೆ ಬ್ಯಾನರ್ ನ ಡಿಯಲ್ಲಿ ಮೂಡಿ ಬರ್ತಿದೆ. ಅಶ್ವಿನಿ ಪುನೀತ್ ರಾಜ್ ಕುಮಾರ್ ಮತ್ತು ಎಂ ಗೋವಿಂದ ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ದು, ಸಿನೆಮಾ ಬಿಡುಗಡೆಗೆ ಅಭಿಮಾನಿಗಳು ಕಾಯುತ್ತಿದ್ದಾರೆ.








