ನೀರ ಮೇಲಿದೆ ಬೀಸೋ ಗಾಳಿಯ ಹೆಜ್ಜೆ… ಗಾಳಿಯಲ್ಲಿದೆ ಹಾರೋ ಹಕ್ಕಿಯ ಹೆಜ್ಜೆ… ಅದ್ಬುತ ಸಾಲುಗಳ ಮೂಲಕ ಆರಂಭವಾಗುವ ʻಲಾʼ ಚಿತ್ರದ ಮೊದಲ ಹಾಡು ಇಂದು ಪಿಆರ್ ಕೆ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಜುಲೈ 17 ರಂದು ʻಲಾʼ ಸಿನಿಮಾ ಅಮೆಜಾನ್ ಪ್ರೈಮ್ ಮೂಲಕ 200 ಕ್ಕೂ ಹೆಚ್ಚು ದೇಶಗಳಲ್ಲಿ ಏಕಕಾಲದಲ್ಲಿ ರಿಲೀಸ್ ಆಗ್ತಿದೆ.
ರಾಗಿಣಿ ಚಂದ್ರನ್ ಅಭಿನಯದ ರಘು ಸಮರ್ಥ್ ನಿರ್ದೇಶನದ ʻಲಾʼ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನಿರ್ದೇಶನವಿದ್ದು, ನೀರ ಮೇಲಿದೆ ಬೀಸೋ ಗಾಳಿಯ ಹೆಜ್ಜೆ ಹಾಡಿಗೆ ಸ್ವತಃ ವಾಸುಕಿ ಹಾಡಿದ್ದಾರೆ.
ಪುನೀತ್ ರಾಜ್ ಕುಮಾರ್ ರವರ ಪಿಆರ್ ಕೆ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ನ್ಯಾಯಕ್ಕಾಗಿ ಹೋರಾಡುವ ನಂದಿನಿ ಪಾತ್ರದ ಮೂಲಕ ರಾಗಿಣಿ ಚಂದ್ರನ್ ಸ್ಯಾಂಡಲ್ವುಡ್ ಪ್ರವೇಶಿಸಿದ್ದಾರೆ.
ಈ ಚಿತ್ರದಲ್ಲಿ ಮುಖ್ಯಮಂತ್ರಿ ಚಂದ್ರು, ಅಚ್ಯುತ್ ಕುಮಾರ್, ಸುಧಾರಾಣಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ರಘು ಸಮರ್ಥ್ ನಿರ್ದೇಶನದ ಈ ಸಿನಿಮಾಗೆ ಅಶ್ವಿನಿ ಪುನೀತ್ ರಾಜ್ಕುಮಾರ್ ಮತ್ತು ಎಂ.ಗೋವಿಂದ ನಿರ್ಮಾಪಕರು.
Song Link : https://www.youtube.com/watch?v=e1PxhxjX18w&feature=youtu.be








