ಪರಪ್ಪನ ಅಗ್ರಹಾರದಿಂದ ಆಸ್ಪತ್ರೆಗೆ ಶಿಫ್ಟ್ ಆದ ‘ತುಪ್ಪದ ಹುಡುಗಿ’
ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ ನಲ್ಲಿ ಸಿಲುಕಿ ತಿಂಗಳುಗಳಿಂದ ಪರಪ್ಪನ ಅಗ್ರಹಾರದಲ್ಲಿ ಕಂಬಿ ಎಣಿಸುತ್ತಿರುವ ನಟಿ ರಾಗಿಣಿಗೆ ಇದೀಗ ತೀವ್ರ ಅನಾರೋಗ್ಯ ಸಮಸ್ಯೆ ಉಂಟಾಗಿದೆ. ಬುಧವಾರ ರಾತ್ರಿ 10 ಗಂಟಗೆ ಆರೋಗ್ಯ ಸ್ಥಿತಿ ಬಿಗಡಾಯಿಸಿದ ಹಿನ್ನೆಲೆ ಜೈಲಾಧಿಕಾರಿಗಳು ಆಕೆಯನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.
ಸೆಲ್ಫಿ ಶೋಕಿಗೆ 12ರ ಬಾಲಕಿ ಬಲಿ
ಇನ್ನೂ ಇತ್ತೀಚೆಗೆ ರಾಗಿಣಿ ಹಲವು ಅನಾರೋಗ್ಯ ಸಮಸ್ಯೆಗಳನ್ನ ಎದುರಿಸುತ್ತಿದ್ದರು. ಹೊಟ್ಟೆ ನೋವಿನಿಂದಲೂ ಬಳಲುತ್ತಿದ್ದರು. ಆಗ ಅವರಿಗೆ ಜೈಲಿನ ಆಸ್ಪತ್ರೆಯಲ್ಲೇ ತಕ್ಷಣ ಚಿಕಿತ್ಸೆ ನೀಡಲಾಗಿತ್ತು. ಆದ್ರೆ ಮತ್ತಷ್ಟು ಆರೋಗ್ಯ ಹಾಳಾದ ಕಾರಣ ಜೈಲಾಧಿಕಾರಿಗಳು ರಾಗಿಣಿಯನ್ನ ಜೈಲಿನಿಂದ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ..
ಇನ್ನೂ ಡ್ರಗ್ಸ್ ಜಾಲದಲ್ಲಿ ಪ್ರಮುಖ ಆರೋಪಿಯ ಸ್ಥಾನದಲ್ಲಿರುವ ರಾಗಿಣಿ ಜಾಮೀನಿಗೇ ಪ್ರಯತ್ನಿಸುತ್ತಲೇ ಇದ್ರು ಈವರೆಗೂ ಬೇಲ್ ಮಂಜೂರಾಗಿಲ್ಲ. ಇನ್ನೂ ಇತ್ತೀಚೆಗಷ್ಟೇ ಮತ್ತೊಬ್ಬ ಪ್ರಮುಖ ಆರೀಪಿ ಸ್ಥಾನದಲ್ಲಿದ್ದ ನಟಿ ಸಂಜನಾಗೆ ಬೇಲ್ ಸಿಕ್ಕಿತ್ತು. ಇಲ್ಲಿ ಗಮನಿಸಬೇಕಾದ ವಿಚಾರ ಅಂದ್ರೆ ಸಂಜನಾಗೆ ಬೇಲ್ ಸಿಕ್ಕಿದ್ದು, ಅವರ ಅನಾರೋಗ್ಯದ ಕಾರಣದಿಂದಲೇ. ಹೀಗಾಗಿ ರಾಗಿಣಿಗೆ ನಿಜವಾಗಲೂ ಆರೋಗ್ಯ ಸಮಸ್ಯೆ ಇದೆಯಾ ಅಥವಾ ಜಾಮೀನಿಗಾಗಿ ಹೊಸ ಪ್ಲಾನ್ ಆ ಅನ್ನೋ ಅನುಮಾನ ಸಹಜವಾಗಿ ಮೂಡುತ್ತದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








