ಬೆಂಗಳೂರು: ಡ್ರಗ್ಸ್ ಪ್ರಕರಣದ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಡ್ರಗ್ಗಿಣಿಯರಾದ ರಾಗಿಣಿ ಹಾಗೂ ಸಂಜನಾ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಲಾಗಿದೆ. ಹೀಗಾಗಿ ನಾಳೆವರೆಗೆ ಇಬ್ಬರಿಗೂ ಜೈಲೂಟವೇ ಗ್ಯಾರಂಟಿಯಾಗಿದೆ.
ಸಂಜನಾ ಹಾಗೂ ರಾಗಿಣಿ ಸೇರಿದಂತೆ ಐವರು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ಬೆಂಗಳೂರಿನ ಎನ್ಡಿಪಿಎಸ್ ಕೋರ್ಟ್ನಲ್ಲಿ ಇಂದು ನಡೆಯಿತು. ರಾಗಿಣಿ, ಸಂಜನಾ ಪರ ವಾದ ಮಂಡಿಸಿದ ವಕೀಲರು ಎಫ್ಐಆರ್ನಲ್ಲಿ ಯಾವುದೇ ಮಾಹಿತಿ ಕೊಟ್ಟಿಲ್ಲ. ಪೊಲೀಸರ ಬಳಿ ಯಾವುದೇ ಸಾಕ್ಷ್ಯಗಳಿಲ್ಲ. ಅನಗತ್ಯವಾಗಿ ನಮ್ಮ ಕಕ್ಷಿದಾರರನ್ನು ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಹೀಗಾಗಿ ಜಾಮೀನು ಮಂಜೂರು ಮಾಡುವಂತೆ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು.
ಆದರೆ, ಸಿಸಿಬಿ ಪರ ವಾದ ಮಂಡಿಸಿದ ವಕೀಲ ವೀರಣ್ಣ ತಿಗಡಿ, ಎಲ್ಲ ವಿಚಾರಗಳನ್ನು ಎಫ್ಐಆರ್ನಲ್ಲಿ ದಾಖಲು ಮಾಡಲು ಸಾಧ್ಯವಿಲ್ಲ. ಪ್ರಕರಣ ಕುರಿತಂತೆ ತನಿಖಾಧಿಕಾರಿಗಳು ಸಾಕಷ್ಟು ಸಾಕ್ಷ್ಯ ಸಂಗ್ರಹಿಸಿದ್ದಾರೆ. ಕೆಲ ವಿಚಾರಗಳನ್ನು ತೆರೆದ ನ್ಯಾಯಾಲಯದಲ್ಲಿ ಹೇಳಲು ಆಗಲ್ಲ ಎಂದ ಸಿಸಿಬಿ ಪರ ವಕೀಲ ವೀರಣ್ಣ ತಿಗಡಿ, ಕೆಲ ಸಿಡಿ ಹಾಗೂ ದಾಖಲೆಗಳ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಧೀಶರಿಗೆ ಸಲ್ಲಿಸಿದರು.
ದಾಖಲೆ ಸಲ್ಲಿಕೆ ಹಿನ್ನೆಲೆ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಧೀಶರು ನಾಳೆಗೆ ಮುಂದೂಡಿದ್ದಾರೆ. ನಾಳೆ ಸಿಸಿಬಿ ದಾಖಲೆ ವಿಚಾರವಾಗಿ ಆರೋಪಿಗಳ ಪರ ವಕೀಲರು ಹಾಗೂ ಸಿಸಿಬಿ ಪರ ವಕೀಲರ ವಾದ-ಪ್ರತಿವಾದ ನಡೆಯಲಿದ್ದು, ಜಾಮೀನು ನೀಡಬೇಕೇ ಬೇಡವೇ ಎಂಬುದು ನಾಳೆ ನಿರ್ಧಾರವಾಗುವ ಸಾಧ್ಯತೆ ಇದೆ.
GOOD NEWS: ರಾಜ್ಯ ಸರ್ಕಾರದ ‘ಗುತ್ತಿಗೆ ಸಿಬ್ಬಂದಿ’ಗಳಿಗೆ ಸಿಹಿಸುದ್ದಿ: 7ನೇ ವೇತನ ಆಯೋಗದ ಶಿಫಾರಸು ‘ಸಂಚಿತ ವೇತನ ಪರಿಷ್ಕರಣೆ’ ಯಾರಿಗೆ ಪ್ರಯೋಜನ..?
ಪ್ರಸ್ತುತ ರಾಜ್ಯ ಸರ್ಕಾರವು ಏಳನೇ ವೇತನ ಆಯೋಗದ ಶಿಫಾರಸಿನ ಮೇರೆಗೆ ಕರ್ನಾಟಕ ನಾಗರಿಕ ಸೇವೆಗಳು (ಪರಿಷ್ಕೃತ ವೇತನ) ನಿಯಮಗಳು, 2024ನ್ನು ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ,ಈ ಸಂಬಂಧ ನಡವಳಿಯನ್ನು...