ಜೈಲಿಂದ ಬಂದ ಬಳಿಕ ಹೊಸ ಸಿನಿಮಾಗೆ ಒಪ್ಪಿದ ‘ತುಪ್ಪದ ಬೆಡಗಿ’ : ಯಾವುದು ಆ ಸಿನಿಮಾ..!
ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಲಿಂಕ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿ 145ಕ್ಕೂ ಹೆಚ್ಚು ದಿನಗಳ ಕಾಲ ಜೈಲೂಟ ಮಾಡಿದ್ದ ರಾಗಿಣಿ ಈಗ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಇದರ ಬೆನ್ನಲ್ಲೇ ಹೊಸ ಸಿನಿಮಾಗೆ ರಾಗಿಣಿ ಸಹಿ ಮಾಡಿದ್ದಾರೆ. ಜೈಲಿನಿಂದ ರಾಗಿಣಿ ಹೊರಬರುತ್ತಿದ್ದಂತೆಯೇ ನಿರ್ಮಾಪಕ ಕೆ ಮಂಜು ರಾಗಿಣಿಯನ್ನ ಭೇಟಿ ಮಾಡಿದ್ದರು. ಇದೀಗ ಕೃಷ್ಣ ಚೈತನ್ಯ ನಿರ್ಮಾಣ ಮಾಡುತ್ತಿರುವ ‘ಕರ್ವ-2’ ಚಿತ್ರಕ್ಕೆ ರಾಗಿಣಿ ಪ್ರಮುಖ ನಟಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಜೈಲಿನಿಂದ ಹೊರಬಂದ ಮೇಲೆ ರಾಗಿಣಿ ಸಹಿ ಮಾಡಿದ ಮೊದಲ ಸಿನಿಮಾ ಇದಾಗಿದೆ.
ಅಭಿಮಾನಿಗಳ ಪರ ಕ್ಷಮೆಯಾಚಿಸಿದ ದರ್ಶನ್ : ಧನ್ಯವಾದ ಎಂದ ಜಗ್ಗೇಶ್..!
ಸ್ವರ್ಣಲತಾ ಪ್ರೊಡಕ್ಷನ್ ಅಡಿ ಕೃಷ್ಣ ಚೈತನ್ಯ ಬಂಡವಾಳ ಹೂಡುತ್ತಿರುವ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ತಿಲಕ್ ಮತ್ತು ಮೇಘನಾ ಗಾಂವ್ಕರ್ ನಟಿಸುತ್ತಿದ್ದಾರೆ. ಈ ಇಬ್ಬರ ಜೊತೆ ಈಗ ರಾಗಿಣಿ ದ್ವಿವೇದಿ ಸಹ ಸಿಸಿಮಾ ಸೇರಿದ್ದಾರೆ. 2017ರಲ್ಲಿ ಬಿಡುಗಡೆಯಾಗಿದ್ದ ಕರ್ವ ಸಿನಿಮಾ ಯಶಸ್ಸು ಕಂಡಿತ್ತು. ಬಳಿಕ, ನಿರ್ಮಾಪಕರು ‘ಕರ್ವ-2’ ಘೋಷಿಸಿದರು. ಇದೀಗ ‘ಕರ್ವ-3’ ಮುಂದುವರಿಸುತ್ತಿದ್ದಾರೆ. ಅಷ್ಟೇ ಅಲ್ಲ ರಾಗಿಣಿ ಜೈಲಿನಿಂದ ಹೊರಬರುತ್ತಿದ್ದಂತೆ ಅವರಿಗೆ ಅವಕಾಶಗಳು ಕೈತಪ್ಪಿ ಹೋಗುತ್ತವೆ. ಮುಂದೆ ಯಾವ ನಿರ್ದೇಶಕರು ಅವರೊಂದಿಗೆ ಸಿನಿಮಾ ಮಾಡಲು ಮುಂದೆ ಬರುವುದಿಲ್ಲ ಎಂದೇ ಹೇಳಲಾಗ್ತಿತ್ತು. ಆದ್ರೆ ಮೂಲಗಳ ಪ್ರಕಾರ ರಾಗಿಣಿಗೆ ಹಲವು ಪ್ರಾಜೆಕ್ಟ್ ಗಳಲ್ಲಿ ನಟನೆಯ ಆಫರ್ ಗಳು ಸಿಕ್ಕಿದೆ ಎನ್ನಲಾಗ್ತಿದೆ. 8 ರಿಂದ 9 ಸ್ಕ್ರಿಪ್ಟ್ ಗಳ ಕುರಿತು ಚರ್ಚೆಯಲ್ಲಿದ್ದಾರೆ ಎನ್ನಲಾಗಿದೆ. ರಾಗಿಣಿ ಕಾನೂನು ಪ್ರಕ್ರಿಯೆ ಮುಗಿಸಿ ಸುಪ್ರೀಂಕೋರ್ಟ್ ನಿಂದ ಜಾಮೀನು ಪಡೆದು ಜನವರಿ 25 ರಂದು ಪರಪ್ಪನ ಅಗ್ರಹಾರದಿಂದ ಹೊರಬಂದಿದ್ದರು.