ಬೆಂಗಳೂರು : ಶರಣ್ ಜೊತೆಗಿನ ಅಧ್ಯಕ್ಷ ಇನ್ ಅಮೆರಿಕಾ ಸಿನಿಮಾದ ಯಶಸ್ಸಿನ ಖುಷಿಯಲ್ಲಿರುವ ತುಪ್ಪದ ಬೆಡಗಿ ರಾಗಿಣಿ ಮೀಟೂ ಕಥೆ ಹೇಳಲು ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ರಂಗಕರ್ಮಿ, ನಟ ಪ್ರಕಾಶ್ ಬೆಳವಾಡಿ ನಿರ್ದೇಶನದಲ್ಲಿ ಮೀಟೂ ಕಥೆಯನ್ನು ಆಧರಿಸಿದ ಸಿನಿಮಾದಲ್ಲಿ ರಾಗಿಣಿ ನಟಿಸ್ತಿದ್ದಾರೆ. ಗರ್ವ, ಇಲ್ಲಿರುವುದು ಸುಮ್ಮನೆ ಎಂಬ ಅದ್ಭುತ ಧಾರಾವಾಹಿ ನಿರ್ದೇಶನ ಮತ್ತು ಅನಂತ್ ನಾಗ್, ಸುಹಾಸಿನಿ ನಟನೆಯ ಸ್ಟಂಬಲ್ ಅನ್ನೋ ಇಂಗ್ಲೀಷ್ ಸಿನಿಮಾವನ್ನು ನಿರ್ಮಿಸಿದ್ದ ಪ್ರಕಾಶ್ ಬೆಳವಾಡಿ, ಇದೀಗ ಕನ್ನಡದಲ್ಲಿ ಸಿನಿಮಾ ನಿರ್ದೇಶನ ಮಾಡಲು ಹೊರಟಿದ್ದಾರೆ. ಇಡೀ ಕಥೆ ಅಮೇರಿಕಾದಲ್ಲೇ ನಡೆಯಲಿದೆ. ಲಾಕ್ ಡೌನ್ ಮೊದಲೇ ಸಿನಿಮಾ ಆರಂಭವಾಗಬೇಕಿತ್ತು, ಇದೀಗ ಜುಲೈನಿಂದ ಸಿನಿಮಾ ಶುರುವಾಗುವ ಸಾಧ್ಯತೆಯಿದೆ.
ಅಂತ್ಯಸಂಸ್ಕಾರಕ್ಕೆ ಜಾಗ ಹುಡುಕಿ ಸುಸ್ತಾದ ಸರ್ಕಾರ: ಖಾಸಗಿ ಭೂಮಿ ಖರೀದಿಯೇ ಏಕೈಕ ದಾರಿ ; ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಸಹಾಯಕತೆ!
ಬೆಂಗಳೂರು: ರಾಜ್ಯದಲ್ಲಿ ಬದುಕಿರುವವರಿಗಷ್ಟೇ ಅಲ್ಲ, ಮೃತಪಟ್ಟವರಿಗೂ ಮಣ್ಣಾಗಲು ಜಾಗವಿಲ್ಲದಂತಹ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ. ಲಭ್ಯವಿದ್ದ ಸರ್ಕಾರಿ ಜಮೀನ್ನೆಲ್ಲಾ ಇತರೆ ಉದ್ದೇಶಗಳಿಗೆ ಹಂಚಿಕೆ ಮಾಡಿ, ಇದೀಗ ಸ್ಮಶಾನಕ್ಕೆ ಜಾಗವಿಲ್ಲದೆ...








