ಖ್ಯಾತ ಉದ್ಯಮಿ ರಾಹುಲ್ ಬಜಾಜ್ ಅವರು ಬಜಾಜ್ ಫೈನಾನ್ಸ್‍ನ ಕಾರ್ಯನಿರ್ವಾಹಕ ಅಧ್ಯಕ್ಷ ಸ್ತಾನಕ್ಕೆ ರಾಜೀನಾಮೆ ನೀಡಿದ್ದಾರೆ. ಜುಲೈ31ರಿಂದಲೇ ಇದು ಅನ್ವಯವಾಗಲಿದೆ. ಇದೀಗ ಬಜಾಜ್ ಫೈನಾನ್ಸ್ ಉಪಾಧ್ಯಕ್ಷರಾದ ಸಂಜೀವ್ ಬಜಾಜ್ ಅವರನ್ನು ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಸತತ 30 ವರ್ಷಗಳ ಕಾಲ ಬಜಾಜ್ ಫೈನಾನ್ಸ್ ನ ಸಾರಥ್ಯ ವಹಿಸಿದ್ದ ರಾಹುಲ್ ಬಜಾಜ್ ರಾಜೀನಾಮೆ ನೀಡಿದ್ದು, ಇನ್ಮುಂದೆ ಕಾರ್ಯನಿರ್ವಾಕೇತರ ಸ್ವತಂತ್ರ ನಿರ್ದೇಶಕರಾಗಿ ಮುಂದುವರೆಯಲಿದ್ದಾರೆ ಎಂದು ಕಂಪನಿ ಮೂಲಗಳಿಂದ ತಿಳಿದುಬಂದಿದೆ. ಇನ್ನೂ ಕಂಪನಿಯ ನಿರ್ದೇಶಕ ಮಂಡಳಿ ಸಂಜಯ್ ಬಜಾಜ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲು ತೀರ್ಮಾನಿಸಿ ಅನುಮೋದನೆ ನೀಡಿದೆ. 2020ರ ಆಗಸ್ಟ್ 1 ರಿಂದಲೇ ಇದು ಜಾರಿಗೆ ಬರಲಿದ್ದು, ಕಂಪನಿಯ ಸಾರಥ್ಯವನ್ನು ಸಂಜಯ್ ಬಜಾಜ್ ವಹಿಸಲಿದ್ದಾರೆ.
ವಿಷಕಾರಿ ಹಾವಿಗಿಂತ ಹೆಚ್ಚು ವಿಷ ಅಪ್ಪ-ಮಗನ ತಲೆಯಲ್ಲಿದೆ: ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಚೋದನಾಕಾರಿ ಹೇಳಿಕೆಗಳ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಬಿಜೆಪಿ ಮತ್ತು ಆರ್‍ಎಸ್‍ಎಸ್ ವಿರುದ್ಧ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಿ, ನಾಲಿಗೆಯನ್ನು...








