ಪ್ರೋ ಕಬಡ್ಡಿ ಲೀಗ್ ನ ಹೀರೋ ರಾಹುಲ್ ಚೌಧರಿ. ಸರಿ ಸುಮಾರು 950 ಪಾಯಿಂಟ್ ಬಾಚಿಕೊಂಡಿರುವ ರಾಹುಲ್ ಚೌಧರಿ ಅಪ್ರತಿಮ ರೈಡರ್. ತನ್ನ ಸಿಗ್ನೇಚರ್ ನಡೆಯಿಂದಲೇ ಪಾಯಿಂಟ್ ಗಳಿಸುವ ರಾಹುಲ್ ಚಾಧರಿ ಶ್ರೇಷ್ಠ ಕಬಡ್ಡಿ ಆಟಗಾರ ಎಂಬುದರಲ್ಲಿ ಎರಡು ಮಾತಿಲ್ಲ. ಆಕ್ರಮಣಕಾರಿ ಪ್ರವೃತ್ತಿ, ನಿರ್ಭೀತ ನಡೆ ಹಾಗೂ ಅತ್ಯುತ್ತಮ ಚಲನವಲನದಿಂದ ಎದುರಾಳಿ ತಂಡಕ್ಕೆ ಕಂಟಕವಾಗಿ ಪರಿಣಮಿಸುವಂತಹ ಚಾಕಚಕ್ಯತೆ ಅವರಲ್ಲಿದೆ.
ಇದೀಗ ರಾಹುಲ್ ಚೌಧರಿ ತನ್ನ ರೈಡಿಂಗ್ ಸ್ಟೈಲ್‍ನ ಗುಟ್ಟನ್ನು ರಟ್ಟು ಮಾಡಿಕೊಂಡಿದ್ದಾರೆ. ದಿ ರನ್ನಿಂಗ್ ಹ್ಯಾಂಡ್ ಟಚ್ ರಾಹುಲ್ ಚೌಧರಿ ಅವರ ಸಿಗ್ನೇಚರ್ ರೈಡಿಂಗ್. ನಾನು ಕಬಡ್ಡಿ ಆಟ ಶುರು ಮಾಡಿದಾಗ ರೈಟ್ ಕಾರ್ನರ್ ಆಡುತ್ತಿದೆ. ಆಗ ನಾನು ಗಾಂಧಿನಗರದ ಸಾಯ್ ತರಬೇತಿ ಶಿಬಿರಕ್ಕೆ ಆಯ್ಕೆ ಆಗಿದ್ದೆ. ಆಗ ಅಲ್ಲಿದ್ದ ಹಿರಿಯ ಆಟಗಾರರಾದ ಮಹಿಪಾಲ್ ನರ್ವಾಲ್, ಮನ್‍ಪ್ರೀತ್ ಸೇರಿದಂತೆ ಅನೇಕರಿದ್ದರು. ಹೀಗಾಗಿ ನಮಗೆ ಆಡಲು ಅವಕಾಶವೇ ಸಿಗುತ್ತಿರಲಿಲ್ಲ. ಆದ್ರಿಂದ ನಾವು ಅವರ ಆಟವನ್ನು ಗಮನವಿಟ್ಟು ನೋಡುತ್ತಿದ್ದೆ ಅಂತಾರೆ ರಾಹುಲ್.
ಮಹಿಪಾಲ್ ಅತ್ಯುತ್ತಮ ಆಟಗಾರ. ತನ್ನ ಲಯನ್ ಜಂಪ್ ಮೂಲಕ ಎದುರಾಳಿ ತಂಡವನ್ನು ದಂಗುಬಡಿಸುತ್ತಿದ್ದರು. ಅಷ್ಟೇ ಅಲ್ಲ ಎಲ್ಲರ ಮೆಚ್ಚುಗೆಗಳನ್ನು ಗಳಿಸುತ್ತಿದ್ದರು. ಆಗ ನನಗೆ ಅನ್ನಿಸಿದ್ದು ನಾನು ರೈಡರ್ ಆದ್ರೆ ನಾನು ಮೆಚ್ಚುಗೆಗಳನ್ನು ಪಡೆಯಬಲ್ಲೆ ಅಂತ ಹಾಗೇ ನಾನು ರೈಡಿಂಗ್ ಟೆಕ್ನಿಕ್‍ಗಳನ್ನು ಕಲಿತೆ ಎಂದು ಹೇಳ್ತಾರೆ.
ಆನಂತರ ನಾನು ವಾರ್ಮ್ ಅಪ್ ಟೈಮ್ ನಲ್ಲಿ ದಿ ರನ್ನಿಂಗ್ ಟಚ್ ಟೆಕ್ನಿಕ್‍ಗಳನ್ನು ಕರಗತ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿದೆ. ಇದನ್ನು ಗಮನಿಸಿದ್ದ ಕೋಚ್ ಕೆಲವೊಂದು ಕೌಶಲ್ಯಗಳನ್ನು ಹೇಳಿಕೊಟ್ಟರು. ಆ ನಂತರ ನಾನು ಹಿಂತಿರುಗಿ ನೋಡಲಿಲ್ಲ. ರೈಟ್ ಕಾರ್ನರ್ ಆಗಿದ್ದ ನಾನು ಪರಿಪೂರ್ಣವಾಗಿ ರೈಡರ್ ಆಗಿಬಿಟ್ಟೆ ಎಂಬ ವಿಚಾರವನ್ನು ಹಂಚಿಕೊಂಡಿದ್ದಾರೆ.
ಇನ್ನು ನಾವು ಚಿಕ್ಕವರಿದ್ದಾಗ ನಮ್ಮ ಆಟದ ಸರಿತಪ್ಪುಗಳನ್ನು ತಿದ್ದಿಕೊಳ್ಳಲು ಹೀಗಿರುವ ಹಾಗೇ ವಿಡಿಯೋ ದೃಶ್ಯಗಳು ಇರಲಿಲ್ಲ. ಆದ್ರೆ ಈಗ ತಂತ್ರಜ್ಞಾನ ಸಾಕಷ್ಟು ಮುಂದುವರಿದಿದೆ. ನಾವು ಮಾಡುವ ತಪ್ಪುಗಳನ್ನು ವಿಡಿಯೋ ದೃಶ್ಯಗಳ ಮೂಲಕ ನೋಡಿಕೊಂಡು ಸರಿಪಡಿಬಹುದು. ಇದ್ರಿಂದ ಆಟಗಾರರ ಆಟದ ಸುಧಾರಣೆಗೆ ನೆರವಾಗುತ್ತಿದೆ ಎಂಬುದು ರಾಹುಲ್ ಅವರ ಅಭಿಮತವಾಗಿದೆ. ಹಾಗೇ ಒಬ್ಬ ರೈಡರ್ ಯಶಸ್ಸು ಸಾಧಿಸಬೇಕಾದ್ರೆ ಸಾಕಷ್ಟು ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಬೇಕು ಹಾಗೇ ನಾಲ್ಕೈದು ರೈಡಿಂಗ್ ನಡೆಗಳನ್ನು ಕಲಿತುಕೊಳ್ಳಬೇಕು. ಆಗ ಮಾತ್ರ ರೈಡಿಂಗ್ ನಲ್ಲಿ ಯಶ ಸಾಧಿಸಬಹುದು ಎಂದು ರಾಹುಲ್ ಚೌಧರಿ ಹೇಳ್ತಾರೆ.








