Dravid | ಪಂತ್ ವೈಫಲ್ಯ : ರಾಹುಲ್ ದ್ರಾವಿಡ್ ಹೇಳಿದ್ದೇನು..?
ತವರಿನಲ್ಲಿ ನಡೆದ ದಕ್ಷಿಣ ಆಫ್ರಿಕಾ ಜೊತೆ ನಡೆದ ಟಿ 20 ಸರಣಿಯಲ್ಲಿ ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್, ಹಂಗಾಮಿ ನಾಯಕ ರಿಷಬ್ ಪಂತ್ ಬ್ಯಾಟಿಂಗ್ ನಲ್ಲಿ ಘನಘೋರ ವೈಫಲ್ಯ ಅನುಭವಿಸಿದ್ದಾರೆ.
ಪಂತ್ ಐದು ಪಂದ್ಯಗಳಲ್ಲಿ 29, 5,6,17,1 ರನ್ ಗಳಿಸಿದ್ದಾರೆ. ಈ ಸೀರಿಸ್ ನಲ್ಲಿ ಕ್ಯಾಪ್ಟನ್ ಆಗಿ ಓಕೆ ಆದ್ರೂ ಒಬ್ಬ ಬ್ಯಾಟರ್ ಆಗಿ ಪಂತ್ ವಿಫಲರಾಗಿದ್ದು, ಸಾಕಷ್ಟು ಟೀಕೆಗಳಿಗೆ ಒಳಗಾಗಿದ್ದಾರೆ.
ಅದರಲ್ಲೂ ಬೇಡವಾದ ಹೊಡೆತಗಳಿಗೆ ಕೈ ಹಾಕಿ ಪಂತ್ ವಿಕೆಟ್ ಒಪ್ಪಿಸಿದ್ದು, ಸಾಕಷ್ಟು ಟೀಕೆಗಳಿಗೆ ಕಾರಣವಾಗಿದೆ.
ಇದು ಒಂದು ಕಡೆಯಾದ್ರೆ ಹಿರಿಯ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಬ್ಯಾಟಿಂಗ್ ನಲ್ಲಿ ದಿನದಿಂದ ದಿನಕ್ಕೆ ಮತ್ತಷ್ಟು ಪಕ್ವತೆ ಸಾಧಿಸುತ್ತಿದ್ದಾರೆ. ಜೊತೆಗೆ ರಿಷಬ್ ಪಂತ್ ಗೆ ವಿಕೆಟ್ ಕೀಪರ್ ಸ್ಥಾನಕ್ಕಾಗಿ ಪೈಪೋಟಿ ನೀಡುತ್ತಿದ್ದಾರೆ.
ಹೀಗಾಗಿ ಟಿ 20 ವಿಶ್ವಕಪ್ ಗಾಗಿ ಟೀಂ ಇಂಡಿಯಾದಲ್ಲಿ ಪಂತ್ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಟೀಂ ಇಂಡಿಯಾದ ಹೆಚ್ ಕೋಚ್ ರಾಹುಲ್ ದ್ರಾವಿಡ್ ಪ್ರತಿಕ್ರಿಯೆ ನೀಡಿದ್ದಾರೆ.

ಪಂತ್ ವೈಫಲ್ಯದ ಬಗ್ಗೆ ಮಾತನಾಡುತ್ತಾ ದ್ರಾವಿಡ್, ಈ ವಿಷಯವನ್ನು ಮತ್ತಷ್ಟು ಕ್ಲಿಷ್ಟವಾಗಿಸಲು ನನಗೆ ಇಷ್ಟವಿಲ್ಲ. ಪಂತ್ ವ್ಯಕ್ತಿಗತವಾಗಿ ರನ್ ಗಳನ್ನು ಗಳಿಸಲು ಇಷ್ಟಪಡುತ್ತಾರೆ.
ಆದ್ರೆ ಇಂತಹ ಸಂದರ್ಭದಲ್ಲಿ ಕಳವಳ ಪಡುವ ಅವಶ್ಯಕತೆ ಇಲ್ಲ. ಏನೇ ಆದ್ರೂ ಕೆಲವು ತಿಂಗಳುಗಳಲ್ಲಿ ಪಂತ್ ಪ್ರಮುಖ ಪಾತ್ರ ಪೋಷಿಸಲಿದ್ದಾರೆ ಎಂದು ಹೇಳಿದ್ದಾರೆ.
ನಮ್ಮ ಪ್ರಣಾಳಿಕೆಯಲ್ಲಿ ಪಂತ್ ಹೆಸರು ಇದ್ದೇ ಇರುತ್ತದೆ. ವಾಸ್ತವಕ್ಕೆ ಮಿಡಿಲ್ ಆರ್ಡರ್ ನಲ್ಲಿ ಕೊಂಚ ಅಟ್ಯಾಕಿಂಗ್ ಆಗಿ ಬ್ಯಾಟ್ ಬೀಸಬೇಕಾಗುತ್ತದೆ.
ಅದ್ದರಿಂದ ಒಂದೆರಡು ಪಂದ್ಯಗಳಲ್ಲಿನ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ಒಬ್ಬ ಬ್ಯಾಟರ್ ಸಾಮರ್ಥ್ಯವನ್ನು ಅಂದಾಜಿಸಲಾಗುವುದಿಲ್ಲ ಎಂದಿದ್ದಾರೆ ರಾಹುಲ್ ದ್ರಾವಿಡ್.







