ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು.. ದ್ರಾವಿಡ್ ಹೀಗೆ ಹೇಳಿದ್ಯಾಕೆ..
ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಟೀಂ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದು, ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ.
ಯಾಕಂದರೇ ಭಾರತ ತಂಡದ ಟಿ 20 ತಂಡದ ನಾಯಕ ರೋಹಿತ್ ಶರ್ಮಾ ಅವರಿಗೆ ನ್ಯೂಜಿಲೆಂಡ್ ವಿರುದ್ಧದ ಸರಣಿಯಿಂದ ವಿಶ್ರಾಂತಿ ನೀಡಿಲಾಗಿತ್ತು.
ನಾಯಕ ವಿರಾಟ್ ಕೊಹ್ಲಿ ಎರಡನೇ ಟೆಸ್ಟ್‌ನೊಂದಿಗೆ ತಂಡಕ್ಕೆ ಮರಳಿದ್ದಾರೆ. ಮತ್ತೊಂದೆಡೆ, ಚೊಚ್ಚಲ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಅದ್ಭುತ ಪ್ರದರ್ಶನ ನೀಡಿ ತಮ್ಮ ಸ್ಥಾನವನ್ನು ಬಲಪಡಿಸಿಕೊಂಡಿದ್ದಾರೆ.
ಆದ್ರೆ ಕಾನ್ಪುರದ ಟೆಸ್ಟ್ ನಲ್ಲಿ ವಿಫಲರಾದ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯಾ ರಹಾನೆ ವಿಫಲರಾಗಿದ್ದರು.
ಹೀಗಾಗಿ ಮುಂಬೈ ಟೆಸ್ಟ್ ನಲ್ಲಿ ರಹಾನೆಗೆ ಕೋಕ್ ನೀಡಲಾಗಿತ್ತು. ಇತ್ತ ಎರಡನೇ ಟೆಸ್ಟ್ ನಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ ಮಿಂಚುಹರಿಸಿದ್ದರು.
ಎರಡನೇ ಟೆಸ್ಟ್ ನಲ್ಲಿ ಜಯ ಸಾಧಿಸಿರುವ ಟೀಂ ಇಂಡಿಯಾ ಅದೇ ಜೋಷ್ ನಲ್ಲಿ ಆಫ್ರಿಕಾ ಪ್ರವಾಸಕ್ಕೆ ಸಜ್ಜಾಗುತ್ತಿದೆ.
ಹೀಗಾಗಿ ಟೆಸ್ಟ್ ತಂಡದ ಆಯ್ಕೆ ಬಗ್ಗೆ ಕ್ರೀಡಾಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿದೆ.
ಈ ನಿಟ್ಟಿನಲ್ಲಿ ಟೀಂ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮಹತ್ವದ ಹೇಳಿಕೆ ನೀಡಿದ್ದಾರೆ. “ತಲೆನೋವು (ಆಯ್ಕೆ)ನಿಂದ ನೋವನುಭವಿಸುತ್ತಿರುವುದು ಚೆನ್ನಾಗಿದೆ.
ಯುವ ಆಟಗಾರರು ಉತ್ತಮವಾಗಿ ಆಡುತ್ತಿದ್ದಾರೆ. ಸ್ಪರ್ಧೆ ಹೆಚ್ಚಿದೆ. ಚೆನ್ನಾಗಿ ಆಡಬೇಕೆಂಬ ಹಠದೊಂದಿಗೆ ಒಬ್ಬೊಬ್ಬಗಿಂತ ಒಬ್ಬರು.. ಸ್ಪರ್ಧಾತ್ಮಕವಾಗಿ ಮುನ್ನಡೆಯುತ್ತಿದ್ದಾರೆ.
ಹಾಗಾಗಿ ತಲೆನೋವು ಇನ್ನಷ್ಟು ಹೆಚ್ಚುತ್ತದೆ. ಹೀಗಾಗಿ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.
ಆ ನಿರ್ಧಾರಗಳನ್ನು ಏಕೆ ತೆಗೆದುಕೊಳ್ಳಲಾಯಿತು ಎಂಬುದನ್ನು ಆಟಗಾರರಿಗೆ ವಿವರಿಸಿದ್ರೆ ದೊಡ್ಡ ಸಮಸ್ಯೆಯಾಗುವುದಿಲ್ಲ, ”ಎಂದು ದ್ರಾವಿಡ್ ಹೇಳಿದ್ದಾರೆ.
ದ್ರಾವಿಡ್ ಅವರು ಈ ಹೇಳಿಕೆಯನ್ನು ರಹಾನೆ ಮತ್ತು ಪೂಜಾರಾ ಅವರನ್ನ ಗಮನದಲ್ಲಿಟ್ಟುಕೊಂಡು ನೀಡಿದ್ದಾರೆ ಎಂದು ಅಂದಾಜಿಸಲಾಗುತ್ತಿದೆ.








