ಧೋನಿಯ ಆಟವನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ ಕಷ್ಟ – ರಾಹುಲ್ ದ್ರಾವಿಡ್
ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದು 2004ರಲ್ಲಿ. ಅದು ಕೂಡ ಸೌರವ್ ಗಂಗೂಲಿ ನಾಯಕತ್ವದಲ್ಲಿ. ಉದ್ದ ಕೂದಳಿನ, ಸದಾ ಹಸನ್ಮುಖಿಯಾಗಿರುತ್ತಿದ್ದ ಧೋನಿ ತನ್ನ ಅಬ್ಬರದ ಬ್ಯಾಟಿಂಗ್ ಮೂಲಕವೇ ಗಮನ ಸೆಳೆದಿದ್ದರು.
ಆದ್ರೆ ಧೋನಿಯ ನಿಜವಾದ ಸಾಮಥ್ರ್ಯ ಬೆಳಕಿಗೆ ಬಂದಿದ್ದು ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ. ರಾಹುಲ್ ನಾಯಕತ್ವದಲ್ಲಿ ಧೋನಿ ತನ್ನ ಅದ್ಭುತವಾದ ಬ್ಯಾಟಿಂಗ್ ಮೂಲಕ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಹೀಗಾಗಿ ಮಹೇಂದ್ರ ಸಿಂಗ್ ಧೋನಿಯವರ ಪಂದ್ಯ ಗೆಲ್ಲಿಸಿಕೊಡುವಂತಹ ಸಾಮಥ್ರ್ಯವನ್ನು ದ್ರಾವಿಡ್ ತುಂಬಾ ಹತ್ತಿರದಿಂದ ನೋಡಿದ್ದಾರೆ. ಅದಕ್ಕಾಗಿಯೇ ಜಾಮಿ, ರಾಂಚಿ ರಾಂಬೋನನ್ನು ಬೆಸ್ಟ್ ಮ್ಯಾಚ್ ಫೀನಿಶರ್ ಅಂತ ಅಂದಿದ್ದು.
ನೀವು ಮಹೇಂದ್ರ ಸಿಂಗ್ ಧೋನಿಯವರ ಬ್ಯಾಟಿಂಗ್ ಅನ್ನು ಸೂಕ್ಷ್ಮವಾಗಿ ಗಮನಿಸಿ, ಪಂದ್ಯದ ಬ್ಯಾಕೆಂಡ್ ಸಮಯದಲ್ಲಿ ಧೋನಿ ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಿರುವುದನ್ನು ಕಾಣಬಹುದು. ಆಗ ನಿಮಗೆ ಧೋನಿ ಅವರಿಗಾಗಿಯೇ ಆಡ್ತಾರೆ ಅಂತ ನಿಮಗೆ ಅನ್ನಿಸಬಹುದು. ಅಷ್ಟೇ ಅಲ್ಲ, ಪಂದ್ಯದ ಫಲಿತಾಂಶದ ಬಗ್ಗೆ ಯೋಚನೆ ಮಾಡದಂತೆ ಅವರು ಆಡುತ್ತಿದ್ದಂತೆ ಭಾಸವಾಗುತ್ತಿತ್ತು ಅಂತ ಟೀಮ್ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಹೇಳಿದ್ದಾರೆ. ಇಎಸ್‍ಪಿಎನ್ ಕ್ರಿಕ್ ಇನ್ಫೋ ವಿಡಿಯೋ ಚಾಟ್ ಕಾರ್ಯಕ್ರಮದಲ್ಲಿ ರಾಹುಲ್ ದ್ರಾವಿಡ್ ಸಂಜಯ್ ಮಾಂಜ್ರೇಕರ್ ಜೊತೆ ಮಾತನಾಡುತ್ತಿರುವಾಗ ಧೋನಿಯ ಸಾಮಥ್ರ್ಯದ ಬಗ್ಗೆ ಉಲ್ಲೇಖ ಮಾಡಿದ್ರು.
ಧೋನಿಯ ಈ ರೀತಿಯ ಆಟ ಎಲ್ಲರಿಗೂ ಅಗತ್ಯವಿದೆ. ಹಾಗೇ ಅದಕ್ಕಾಗಿ ತರಬೇತಿ ಪಡೆಯುವ ಅಗತ್ಯವೂ ಇದೆ ಎಂಬುದು ನನ್ನ ಭಾವನೆ. ಆದ್ರೆ ಈ ರೀತಿಯ ಕೌಶಲ್ಯವನ್ನು ನಾನು ಯಾವತ್ತೂ ನೋಡಿಲ್ಲ. ಹಾಗಾದ್ರೆ ಧೋನಿಗೆ ಈ ಕೌಶಲ್ಯ ಸಹಜವಾಗಿ ಬಂದಿದೆಯೋ ಅಥವಾ ಅವರು ತನ್ನ ಕ್ರಿಕೆಟ್ ಬದುಕಿನಲ್ಲಿ ಕಠಿಣ ಅಭ್ಯಾಸ ನಡೆಸಿ ಪಡೆದಿದ್ದಾರೋ ಎಂಬುದನ್ನು ಅವರಲ್ಲೇ ಕೇಳಬೇಕು ಎಂದು ರಾಹುಲ್ ದ್ರಾವಿಡ್ ಹೇಳಿದ್ರು.
ಇನ್ನು 2006ರ ಐತಿಹಾಸಿಕ ಪಾಕ್ ಸರಣಿಯಲ್ಲಿ ಭಾರತಕ್ಕೆ 4-1 ಅಂತರದ ಸರಣಿ ಗೆಲ್ಲುವಲ್ಲಿ ಧೋನಿ ಪಾತ್ರ ಬಹಳಷ್ಟಿದೆ. ಆ ಸರಣಿಯಲ್ಲಿ ರಾಹುಲ್ ದ್ರಾವಿಡ್ ನಾಯಕತ್ವಕ್ಕೆ ಧೋನಿ ಮತ್ತು ಯುವರಾಜ್ ಸಿಂಗ್ ಬೆನ್ನುಲುಬಾಗಿ ನಿಂತಿದ್ದರು.
ಆಗಲೇ ಧೋನಿ ವಿಶ್ವದ ಶ್ರೇಷ್ಠ ಮ್ಯಾಚ್ ಫಿನೀಶರ್ ಎಂಬ ಹಿರಿಮೆಯನ್ನು ತಂದುಕೊಟ್ಟಿತ್ತು.
ಆದ್ರೆ ಈಗ ಧೋನಿ ಆಡುತ್ತಿಲ್ಲ. 2019ರ ವಿಶ್ವಕಪ್ ನಂತರ ಟೀಮ್ ಇಂಡಿಯಾದಿಂದ ದೂರವೇ ಉಳಿದುಕೊಂಡಿದ್ದಾರೆ. ಐಪಿಎಲ್ ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿ ಟಿ-ಟ್ವೆಂಟಿ ವಿಶ್ವಕಪ್ ಆಡುವ ಇರಾದೆಯನ್ನು ಹೊಂದಿದ್ದರು. ಆದ್ರೆ ಕೋವಿಡ್ -19ರಿಂದ ಟಿ-ಟ್ವೆಂಟಿ ವಿಶ್ವಕಪ್ ಮತ್ತು ಐಪಿಎಲ್ ನಡೆಯುವುದು ಕಷ್ಟ.. ಕಷ್ಟವಾಗಿದೆ.
ಒಟ್ಟಿನಲ್ಲಿ ಗಂಗೂಲಿ, ದ್ರಾವಿಡ್ ನಂತರ ಧೋನಿ ಟೀಮ್ ಇಂಡಿಯಾದ ಸಾರಥಿಯಾದ್ರು. 2007ರ ಟಿ-ಟ್ವೆಂಟಿ ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್, ಐಸಿಸಿ ನಂಬರ್ ವನ್ ತಂಡ ಹೀಗೆ ಟೀಮ್ ಇಂಡಿಯಾದ ಹಲವು ಸಾಧನೆ, ದಾಖಲೆಗಳ ಸಾಲಿನಲ್ಲಿ ಧೋನಿ ಎಂಬ ಹೆಸರು ರಾರಾಜಿಸುತ್ತಿದೆ.








