Test Cricket | ಜೂನ್ 20.. ಭಾರತೀಯ ಕ್ರಿಕೆಟ್ ಗೆ ಮರೆಯಲಾಗದ ದಿನ
ಭಾರತ ಕ್ರಿಕೆಟ್ ಚರಿತ್ರೆಯಲ್ಲಿ ಜೂನ್ 20 ದಿನಾಂಕ ಸಾಕಷ್ಟು ವಿಶೇಷವಾಗಿದೆ. ಈ ದಿನಾಂಕದಂದು ಭಾರತ ಕ್ರಿಕೆಟ್ ಗೆ ಮೂವರು ದಿಗ್ಗಜ ಕ್ರಿಕೆಟಿಗರು ಪಾದಾರ್ಪಣೆ ಮಾಡಿದ್ದರು.
ಭಾರತ ಕ್ರಿಕೆಟ್ ಪತಾಕೆಯನ್ನು ವಿಶ್ವದಾದ್ಯಂತ ಹಾರಿಸಿದ ಮೂವರು ಕ್ರಿಕೆಟಿಗರು ಇಂದು ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ದಿನವಾಗಿದೆ.
ಇಬ್ಬರು ತಮ್ಮ ನಾಯಕತ್ವದಿಂದ ಭಾರತೀಯ ಕ್ರಿಕೆಟ್ ಗೆ ಹೊಸ ಭಾಷ್ಯ ಬರೆದರೇ, ಮತ್ತೊಬ್ಬರು ತಮ್ಮ ಶಿಸ್ತುಬದ್ಧ ಆಟದ ಮೂಲಕ ಕ್ರಿಕೆಟ್ ಲೋಕದ ಬುದ್ಧ ಎನಿಸಿಕೊಂಡಿದ್ದಾರೆ. ಮೂರನೇ ಕ್ರಿಕೆಟಿಗ ಈ ಇಬ್ಬರ ಸಮ್ಮಿಲನವಾಗಿದ್ದಾರೆ.
ಅವರು ಬೇರೆ ಯಾರೂ ಅಲ್ಲ. ಸದ್ಯ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಟೀಂ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್, ಮೂರನೇ ವ್ಯಕ್ತಿ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ.
ಇವರಲ್ಲಿ ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ 1996 ಜೂನ್ 20 ರಂದು ಟೆಸ್ಟ್ ಕ್ರಿಕೆಟ್ ಗೆ ಪಾದರ್ಪಣೆ ಮಾಡಿದ್ರು.
ಇವರಿಬ್ಬರು ಎಂಟ್ರಿ ಕೊಟ್ಟ ಸರಿಯಾಗಿ 15 ವರ್ಷಗಳ ನಂತರ 2011 ಜೂನ್ 20 ರಂದು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಗೆ ಎಂಟ್ರಿ ಕೊಟ್ಟರು.
ಈ ದಿಗ್ಗಜ ಬ್ಯಾಟಿಂಗ್ ತ್ರಯರಲ್ಲಿ ಗಂಗೂಲಿ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 131 ರನ್ ಗಳಿಸಿದ್ರೆ, ರಾಹುಲ್ ದ್ರಾವಿಡ್ 95 ರನ್ ಗಳಿಸಿದ್ದರು.
ವಿರಾಟ್ ಕೊಹ್ಲಿ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ನಾಲ್ಕು ರನ್, ದ್ವಿತೀಯ ಇನ್ನಿಂಗ್ಸ್ ನಲ್ಲಿ 15 ರನ್ ಗಳಿಸಿದ್ದರು.
ಹಾಗೇ ಈ ಮೂವರು ವ್ಯಕ್ತಗತವಾಗಿ ಅಲ್ಲದೇ ಮುಂದೆ ಟೀ ಇಂಡಿಯಾದ ನಾಯಕರಾಗಿ ತಂಡವನ್ನು ಉತ್ತಮವಾಗಿ ಮುನ್ನಡೆಸಿದ್ದರು.
ಗಂಗೂಲಿ 116 ಟೆಸ್ಟ್ ಪಂದ್ಯಗಳಲ್ಲಿ 16 ಸೆಂಚೂರಿ, 35 ಅರ್ಧಶತಕಗಳೊಂದಿಗೆ 7212 ರನ್ ಗಳಿಸಿದ್ದರು.
ದ್ರಾವಿಡ್ 164 ಟೆಸ್ಟ್ ಪಂದ್ಯಗಳಲ್ಲಿ 36 ಸೆಂಚೂರಿ, 63 ಅರ್ಧಶತಕದೊಂದಿಗೆ 11363 ರನ್ ಗಳಿಸಿದ್ದಾರೆ.
ವಿರಾಟ್ ಕೊಹ್ಲಿ 101 ಟೆಸ್ಟ್ ಪಂದ್ಯಗಳಲ್ಲಿ ಏಳು ಡಬಲ್ ಸೆಂಚೂರಿ, 27 ಸೆಂಚೂರಿ, 28 ಅರ್ಧಶಕತಗಳೊಂದಿಗೆ 12211 ರನ್ ಗಳಿಸಿದ್ದಾರೆ.