ರಾಹುಲ್ ಗಾಂಧಿ ನಿಜವಾದ ಹಿಂದೂ ಅಲ್ಲ : ನಾರಾಯಣಸ್ವಾಮಿ Rahul Gandhi saaksha tv
ಲಕ್ನೋ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿಜವಾದ ಹಿಂದೂ ಅಲ್ಲ ಎಂದು ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.
ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಫೆಫ್ನಾ ಪ್ರದೇಶದಲ್ಲಿ ನಡೆದ ಸಾಮಾಜಿಕ ಸಬಲೀಕರಣ ಶಿಬಿರದಲ್ಲಿ ಸಚಿವರು ಭಾಗಿಯಾಗಿದ್ದರು.
ಈ ವೇಳೆ ರಾಹುಲ್ ಗಾಂಧಿ ಅವರ, ಸದ್ಯ ದೇಶದಲ್ಲಿ ಹಿಂದೂ ಮತ್ತು ಹಿಂದುತ್ವದ ಬಗ್ಗೆ ಘರ್ಷಣೆ ನಡೆಯುತ್ತಿದೆ.
ಇದು ಒಂದು ಪದವಲ್ಲ. ಈ ಎರಡೂ ಪದಗಳಿಗೂ ಬೇರೆ ಬೇರೆ ಅರ್ಥವಿದೆ ಎಂದ ರಾಹುಲ್ ಗಾಂಧಿ, ಹಿಂದೂ ಸತ್ಯವನ್ನು ಹುಡುಕುವ ಕೆಲಸ ಮಾಡುತ್ತದೆ.
ಹಿಂದುತ್ವವಾದಿ ಅಧಿಕಾರವನ್ನು ಹುಡುಕುವ ಕಾರ್ಯವನ್ನು ಮಾಡುತ್ತದೆ. ಅಲ್ಲದೇ ನಾನೂ ಹಿಂದೂ, ಆದ್ರೆ ಹಿಂದುತ್ವವಾದಿ ಅಲ್ಲ ದು ಎಂದಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎ ನಾರಾಯಣಸ್ವಾಮಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚುನಾವಣೆಗೆ ಬಂದಾಗ ಮಾತ್ರ ಅವರು ಹಿಂದೂ ಹಾಗೂ ಹಿಂದುತ್ವದ ಕುರಿತು ಹೇಳಿಕೆ ನೀಡುತ್ತಾರೆ. ಅವರು ನಿಜವಾದ ಹಿಂದೂ ಅಲ್ಲ ಎಂದು ಕಿಡಿಕಾರಿದ್ದಾರೆ.