ಆರೋಗ್ಯ ಸಚಿವರ ಬದಲಾವಣೆ – ಇನ್ಮುಂದೆ ಲಸಿಕೆ ಕೊರತೆ ಇರುವುದಿಲ್ಲವೇ – ರಾಹುಲ್ ಗಾಂಧಿ ಪ್ರಶ್ನೆ..?
ಕೇಂದ್ರ ಸರ್ಕಾರದ ವಿರುದ್ಧ ಕೋವಿಡ್ ನಿರ್ವಹಣೆ ಲಸಿಕೆ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ವಾಗ್ದಾಳಿ ನಡೆಸುತ್ತಲೇ ಬಂದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಪುಟ ಪುನರ್ ರಚನೆ ವಿಚಾರದಲ್ಲಿ ಮತ್ತೆ ಟ್ವೀಟ್ ಮೂಲಕ ಸರ್ಕಾರವನ್ನ ಪ್ರಶ್ನಿಸಿದ್ದಾರೆ. ಆರೋಗ್ಯ ಸಚಿವರು ಬದಲಾಗಿದ್ದಾರೆ. ಇನ್ನು ಮುಂದೆ ಲಸಿಕೆ ಕೊರತೆ ಇರುವುದಿಲ್ಲವೇ ಎಂದು ಪ್ರಶ್ನಿಸಿ ಕೇಂದ್ರೆ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.
ರಾಹುಲ್ ಗಾಂಧಿ ಟೀಕೆ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಗೌರವ ಭಾಟಿಯಾ, ರಾಹುಲ್ ಗಾಂಧಿ ಒಬ್ಬ ಬೇಜವಾಬ್ದಾರಿ ವ್ಯಕ್ತಿ, ಟೀಕೆ ಮಾಡಬೇಕು ಎಂದು ಮಾಡುತ್ತಾರೆ. ರಚನಾತ್ಮಕ ಟೀಕೆಗಳಿದ್ದರೆ ಖಂಡಿತಾ ಸ್ವೀಕರಿಸುತ್ತೇವೆ ಎಂದಿದ್ದಾರೆ. ಇನ್ನೂ ಆರೋಗ್ಯ ಸಚಿವರಾಗಿದ್ದ ಹರ್ಷವರ್ಧನ್ ಅವರನ್ನು ಕೈಬಿಡುವ ಮೂಲಕ ಕೇಂದ್ರ ಸರ್ಕಾರವು ಕೊರೊನಾ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ವಿಫಲವಾಗಿದೆ ಎಂಬುದನ್ನು ಒಪ್ಪಿಕೊಂಡಂತಾಗಿದೆ ಎಂದು ಕಾಂಗ್ರೆಸ್ ಟೀಕಿಸುತ್ತಲೇ ಇದೆ.
ಎರೆಡು ಪ್ರತ್ಯೇಕ ಎನ್ ಕೌಂಟರ್ ನಲ್ಲಿ ಐವರು ಉಗ್ರರ ಬಲಿ ಪಡೆದ ಸೈನಿಕರು