ಬೂಸ್ಟರ್ ಡೋಸ್ ಲಸಿಕೆ ಬಗ್ಗೆ ನನ್ನ ಸಲಹೆ ಒಪ್ಪಿದ ಕೇಂದ್ರ : ರಾಹುಲ್ ಗಾಂಧಿ
ರಾಹುಲ್ ಗಾಂಧಿ ಸದಾ ಬಿಜೆಪಿ ಸರ್ಕಾರ , ಮೋದಿ ವಿರುದ್ಧ ಆರೋಪಗಳನ್ನ ಹೊರಿಸುತ್ತಾ ಆಕ್ರೋಶ ಹೊರಹಾಕುತ್ತಲೇ ಇರುತ್ತಾರೆ.. ಅದ್ರಲ್ಲೂ ಪ್ರಮುಖವಾಗಿ ಕೇಂದ್ರ ಸರ್ಕಾರ ನಮ್ಮ ಸಲಹೆ ಕೇಳಲ್ಲ ವಿಪಕ್ಷಗಳ ಸಲಹೆಗಳನ್ನ ಕಿವಿಗೆ ಹಾಕಿಕೊಳ್ಳೋದಿಲ್ಲ ಅನ್ನೋದು ರಾಹುಲ್ ಗಾಂಧಿ ಅವರು ಮಾಡುವ ಪ್ರಮುಖ ಆರೋಪಗಳಲ್ಲಿ ಒಂದು..
ಆದ್ರೆ ಬೂಸ್ಟರ್ ಡೋಸ್ ವಿಚಾರದಲ್ಲಿ ತನ್ನ ಸಲಹೆ ಒಪ್ಪಿದೆ ಎಂದು ಹೇಳಿಕೊಂಡಿದ್ದಾರೆ ರಾಹುಲ್ ಗಾಂಧೀ.. ದೇಶದಲ್ಲಿ ಕೋವಿಡ್ – 19 ಲಸಿಕೆಯ ಬೂಸ್ಟರ್ ಡೋಸ್ ಗಳನ್ನು ನೀಡಲು ಕೇಂದ್ರ ಸರ್ಕಾರ ನನ್ನ ಸಲಹೆಯನ್ನು ಅಂಗೀಕರಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ..
ಈ ಕುರಿತಂತೆ ರಾಹುಲ್ ಗಾಂಧಿ ಅವರು, ಬೂಸ್ಟರ್ ಡೋಸ್ ವಿಚಾರವಾಗಿ ಕೆಂದ್ರ ಸರ್ಕಾರ ನನ್ನ ಸಲಹೆಯನ್ನು ಒಪ್ಪಿಕೊಂಡಿದೆ. ಇದು ಸರಿಯಾದ ಹೆಜ್ಜೆಯಾಗಿದೆ. ಲಸಿಕೆಗಳು ಮತ್ತು ಬೂಸ್ಟರ್ ಡೋಸ್ಗಳು ಸುರಕ್ಷಿತವಾಗಿ ದೇಶದ ಜನರಿಗೆ ತಲುಪಬೇಕು ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು, ಕೊಮೊರ್ಬಿಡಿಟಿ ಹೊಂದಿರುವವರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರು ತಮ್ಮ ವೈದ್ಯರ ಶಿಫಾರಸಿನ ಮೇರೆಗೆ 2022ರ ಜನವರಿ 10 ರಿಂದ ಬೂಸ್ಟರ್ ಡೋಸ್‍ಗಳನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಘೋಷಿಸಿದ್ದರು.
ಈ ಮುನ್ನ ಡಿಸೆಂಬರ್ 22ರಂದು ರಾಹುಲ್ ಗಾಂಧಿ ಅವರು ದೇಶದಲ್ಲಿ ಬೂಸ್ಟರ್ ಡೋಸ್ ನೀಡುವಂತೆ ಟ್ವೀಟ್ ಮಾಡುವ ಮೂಲಕ ಒತ್ತಾಯಿಸಿದ್ದರು. ನಮ್ಮ ದೇಶದಲ್ಲಿರುವ ಬಹಳಷ್ಟು ಮಂದಿ ಇನ್ನೂ ಲಸಿಕೆಯನ್ನು ಪಡೆದಿಲ್ಲ. GOI ಯಾವಾಗ ಬೂಸ್ಟರ್ ಡೋಸ್‍ಗಳನ್ನು ನೀಡಲು ಪ್ರಾರಂಭಿಸುತ್ತದೆ ಎಂದು ಪ್ರಶ್ನಿಸಿದ್ದರು. ಇದೀಗ ಕೇಂದ್ರದ ನಿರ್ಧಾರವನ್ನ ರಾಹುಲ್ ಗಾಂಧಿ ಅವರು ಒಂದ್ ರೀತಿ ಸ್ವಾಗತಿಸಿದ್ದಾರೆ..