Rahul Gandhi
ನವದೆಹಲಿ: ಸದ್ಯ ದೇಶಾದ್ಯಂತ ಇತ್ತೀಚೆಗೆ ಉಪ ಚುನಾವಣೆಗಳು , ವಿಧಾನಸಭಾ ಚುನಾವಣೆಗಳಲ್ಲಿ ಬಹುತೇಕ ಸೋಲನ್ನೇ ಕಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು , ಇದೀಗ ರಿಲ್ಯಾಕ್ಸ್ ಮೂಡ್ ಗೆ ಜಾರಿದ್ದಾರೆ. ಅಂದ್ಹಾಗೆ ಮರುಳು ದಿಬ್ಬಗಳಲ್ಲಿ ಸಮಯ ಕಳೆಯಲು ರಾಜಸ್ಥಾನದ ಜೈಸಲ್ಮೇರ್ ಗೆ ತೆರಳಿದ್ದಾರೆ ರಾಗಾ.
ಸಂಜೆ 6.30ಕ್ಕೆ ರಾಹುಲ್ ಗಾಂಧಿ ಅವರು ಜೈಸಲ್ಮೇರ್ ನ ಸಿವಿಲ್ ವಿಮಾನ ನಿಲ್ದಾಣ ತಲುಪಲಿದ್ದಾರೆ. ನಂತರ ಜೈಸಲ್ಮೇರ್ ನಲ್ಲಿ ಎರಡು ದಿನಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ. ಇದಾದ ಬಳಿಕ ಮತ್ತೆ ದೆಹಲಿಗೆ ಹಿಂದಿರುಗಲಿದ್ದಾರೆ. ಪ್ರವಾಸದ ವೇಳೆ ಜೈಸಲ್ಮೇರ್ ಜಿಲ್ಲೆಯ ಹೊರವಲಯದಲ್ಲಿರುವ ಅಲ್ಟ್ರಾ- ಲಕ್ಸೂರಿಯಸ್ ಸೂರ್ಯಘರ್ 5ಸ್ಟಾರ್ ಹೋಟೆಲ್ನಲ್ಲಿ ರಾಹುಲ್ ಗಾಂಧಿ ಅವರು ವಾಸ್ತವ್ಯ ಹೂಡಲಿದ್ದಾರೆ. ಬಳಿಕ ಬಳಿಕ ಮರಳು ದಿಬ್ಬಗಳ ಮಧ್ಯೆ ಒಂದು ರಾತ್ರಿ ಟೆಂಟ್ನಲ್ಲಿಯೂ ಕಳೆಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಶಾಸಕ ಸಿದ್ದು ಸವದಿ ಅಸಭ್ಯ ವರ್ತನೆ: ಡಿಕೆಶಿ ಹೇಳಿದ್ದೇನು..?
ಅಂದ್ಹಾಗೆ ರಾಹುಲ್ ಗಾಂಧಿ ಅವರನ್ನ ಆಡಂಬರದಿಂದ ಸ್ವಾಗತಿಸುವ ಕಾರ್ಯಗಳಲ್ಲಿ ತೊಡಗಬಾರದೆಂದು ರಾಹುಲ್ ಗಾಂಧಿ ಅವರು ಈಗಾಗಲೇ ಸ್ಥಳೀಯ ನಾಯಕರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ರಾಹುಲ್ ಗಾಂಧಿ ಭೇಟಿ ಹಿನ್ನೆಲೆ ಈಗಾಗಲೇ ಅವರು ತಂಗಲಿರುವ ಹೋಟೆಲ್ ನಲ್ಲಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಈಗಾಗಲೇ ರಾಹುಲ್ ಗಾಂಧಿ ಭದ್ರತಾ ಸಿಬ್ಬಂದಿ ಭದ್ರತಾ ವ್ಯವಸ್ಥೆಗಳನ್ನ ಪರಿಶೀಲನೆ ಸಹ ನಡೆಸಿದ್ದಾರೆ.
Rahul Gandhi
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel