9 ವರ್ಷದ ದಲಿತ ಬಾಲಕಿ ಅತ್ಯಾಚಾರ ಪ್ರಕರಣ: ಸಂತ್ರಸ್ತೆ ಕುಂಟುಬಸ್ಥರ ಭೇಟಿಯಾದ ರಾಹುಲ್ ಗಾಂಧಿ
ನವದೆಹಲಿಯಲ್ಲಿ 9 ವರ್ಷದ ದಲಿತ ಬಾಲಕಿಯ ಮೇಲೆ ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿ , ಕೊಲೆ ಮಾಡಿ ಪೋಷಕರ ಅನುಮತಿ ಇಲ್ಲದೇ ಅಂತ್ಯಸಂಸ್ಕಾರವನ್ನೂ ನೆರವೇರಿಸಿದ್ದರು.. ಈ ಪ್ರಕರಣ ಸಂಬಂಧ ಸಂತ್ರಸ್ತೆಯ ಕುಟುಂಬಸ್ಥರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿಯಾಗಿ ಸಾಂತ್ವಾನ ಹೇಳಿದ್ದಾರೆ..
ಸಂತ್ರಸ್ತೆ ಕುಟುಂಬಸ್ಥರನ್ನು ದೆಹಲಿಯಲ್ಲಿ ಬುಧವಾರ ಭೇಟಿಯಾಗಿ ಧೈರ್ಯ ತುಂಬಿದ್ದಾರೆ. ಅಲ್ಲದೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಒಂಬತ್ತು ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಹಾಗಾಗಿ ಆಕೆಯ ಕುಟುಂಬಸ್ಥರಿಗೆ ಸಹಾಯ ಮಾಡುವುದು ನನ್ನ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.
ಆಕೆಯ ಹೆತ್ತವರ ಕಣ್ಣೀರು ಒಂದೇ ಒಂದು ವಿಷಯವನ್ನು ಹೇಳುತ್ತಿದೆ. ಆಕೆ ಈ ದೇಶದ ಮಗಳು. ನ್ಯಾಯಕ್ಕೆ ಅರ್ಹಳಾಗಿದ್ದಾಳೆ. ಆದ್ದರಿಂದ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಆಕೆ ಕುಟುಂಬದ ಪರ ನಿಲ್ಲುತ್ತೇನೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ. ದೆಹಲಿಯಲ್ಲಿ ನಡೆದ ಘಟನೆ ಕುರಿತು ದೆಹಲಿ ಮಹಿಳಾ ಆಯೋಗವು ತನಿಖೆ ಆರಂಭಿಸಿದೆ. ಜತೆಗೆ, ಬಾಲಕಿಯ ಪೋಷಕರು ಆಕೆಯ ಮೇಲೆ ಕಿಡಿಗೇಡಿಗಳು ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿದ್ದರು.
ಗುಡ್ ನ್ಯೂಸ್ – ಬಹುತೇಕ ಮಕ್ಕಳು 6 ದಿನದೊಳಗೆ ಕೋವಿಡ್ ನಿಂದ ಚೇತರಿಸಿಕೊಳ್ತಾರೆ..!