ನವದೆಹಲಿ: ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಕೈಯಲ್ಲಿ ಸಂವಿಧಾನದ ಪ್ರತಿ ಹಿಡಿದು ಭಾರತ್ ಜೋಡೋ ಘೋಷಣೆ ಕೂಗಿ ಲೋಕಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ರಾಹುಲ್ ಗಾಂಧಿ ವಯನಾಡ್ ಹಾಗೂ ರಾಯ್ ಬರೇಲಿ ಎರಡು ಕ್ಷೇತ್ರಗಳಿಂದಲೂ ಆಯ್ಕೆಯಾಗಿದ್ದರು. ಈಗ ವಯನಾಡ್ ನ್ನು ಅವರ ಸಹೋದರಿ ಪ್ರಿಯಾಂಕಾ ಗಾಂಧಿಗೆ ಬಿಟ್ಟು ಕೊಟ್ಟಿದ್ದಾರೆ.
ಇಂಡಿಯಾ ಒಕ್ಕೂಟದ ಸಂಸದರು ಸಂಸತ್ತಿನ ಅಧಿವೇಶದಲ್ಲಿ ಸಂವಿಧಾನದ ಕಿರು ಪುಸ್ತಕ ಪ್ರದರ್ಶಿಸಿದರು. ಪಕ್ಷದ ಹಲವಾರು ಸಂಸದರು ಈ ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಸಂವಿಧಾನ ಕೈಪಿಡಿ ಹಿಡಿದು ರಾಹುಲ್ ಗಾಂಧಿ, ಸಂವಿಧಾನದ ಮೇಲೆ ದಾಳಿ ಮಾಡಲು ಪ್ರತಿಪಕ್ಷಗಳು ಸರ್ಕಾರಕ್ಕೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.