Raichur : 5 ರುಪಾಯಿ ತಿಂಡಿ ಪಾಕೆಟ್ ನಲ್ಲಿ 500 ಅಸಲಿ ನೋಟುಗಳು ಪತ್ತೆ…
ಐದೋ ಹತ್ತೋ ರುಪಾಯಿ ಕೊಟ್ಟು ತರೋ ಕುರ್ಕುರಿ ಥರಹದ ತಿಂಡಿ ಪಾಕೆಟ್ ನಲ್ಲಿ ಐನೂರು ರುಪಾಯಿ ಸಿಕ್ಕರೆ ಹೇಗಿರುತ್ತೇ ಹೇಳಿ,
ಹೌದು ಇಂಥಹದ್ದೆ ಘಟನೆ ರಾಯಚೂರಿನ ಲಿಂಗಸೂರು ತಾಲೂಕಿನ ಹುನೂರು ಗ್ರಾಮದಲ್ಲಿ ನಡೆದಿದೆ. 5 ರುಪಾಯಿ ಕೊಟ್ಟು ತಂದ ಮಕ್ಕಳ ತಿಂಡಿ ಪಾಕೆಟ್ ನಲ್ಲಿ 500 ರುಪಾಯಿ ಗರಿಗರಿ ಅಸಲಿ ನೋಟು ಪತ್ತೆಯಾಗಿದೆ.
ಲಿಂಗಸಗೂರು ತಾಲೂಕಿನ ಹುನೂರು ಗ್ರಾಮದಲ್ಲಿ ಅಚ್ಚರಿ ಘಟನೆ ನಡೆದಿದ್ದು, ಮಾಕ್ಸ್ ವಿಟ್, ಪಂಜಾಬ್ ಸೇರಿದಂತೆ ವಿವಿಧ ಕಂಪನಿಯ ಪ್ಯಾಕೆಟ್ ಗಳಲ್ಲಿ ಕುರ್ಕುರಿ ತಿಂಡಿ ಜೊತೆಗೆ ಒಳಗಡೆ 500 ಮುಖಬೆಲೆಯ ನೋಟ್ ಗಳು ಪತ್ತೆಯಾಗಿವೆ. ಕೆಲವೊಂದು ಪ್ಯಾಕೆಟ್ ಒಳಗಡೆ 5-6 ನೋಟ್ ಗಳು ಸಹ ಪತ್ತೆಯಾಗಿವೆ. ಹೂನೂರು ಗ್ರಾಮದಲ್ಲಿರೋ ಬಹುತೇಕ ಅಂಗಡಿಯಲ್ಲಿ ಈ ಘಟನೆ ನಡೆದಿದೆ.
500 ರುಪಾಯಿ ಸಿಗುತ್ತೆ ಎಂದ ತಕ್ಷಣ ಕುರ್ಕುರಿ ತಿಂಡಿ ಖರೀದಿಗೆ ಗ್ರಾಮಸ್ಥರು ಮುಗಿಬಿದ್ದಿದ್ದು, ಮೂರು ದಿನಗಳಲ್ಲಿ ಗ್ರಾಮದಲ್ಲಿ ಕುರ್ಕುರಿ ತಿಂಡಿ ಸ್ಟಾಕ್ ಖಾಲಿ ಮಾಡಲಾಗಿದೆ. ಇನ್ನಷ್ಟು ಕುರ್ಕುರಿ ತರುವಂತೆ ಅಂಗಡಿಗಳಿಗೆ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ. ಒಂದು ಮನೆಯಲ್ಲಿ ಈ 12.500 ರೂಪಾಯಿ ಕೂಡ ಇದರಲ್ಲಿ ಸಿಕ್ಕಿದೆ. ಹೂನೂರು ಗ್ರಾಮದಲ್ಲಿ ಲಕ್ಷಾಂತರ ರೂಪಾಯಿಯ ನೋಟ್ ಗಳು ಪತ್ತೆಯಾಗಿವೆ.
Raichur : 500 notes found in Rs 5 snack pocket…








