Raichur | ಕುಡಿಯುವ ನೀರಿಗೆ ಹಾಹಾಕಾರ
ಲಿಂಗಸುಗೂರಿನಲ್ಲಿ ಕುಡಿಯುವ ನೀರಿಗೆ ಹಾರಾಕಾರ
ಉಪ್ಪು ನೀರು ಕುಡಿಯಬೇಕಾದ ಸ್ಥಿತಿಯಲ್ಲಿ ಜನರು
ಉಪ್ಪು ನೀರು ಸೇವನೆಯಿಂದ ಆರೋಗ್ಯ ಸಮಸ್ಯೆ
ಮಕ್ಕಳು, ವೃದ್ಧರಿಗೆ ವಾಂತಿ, ಭೇದಿ ಸಮಸ್ಯೆ
ರಾಯಚೂರು : ರಾಜ್ಯದಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಆದ್ರೆ ರಾಯಚೂರಿನಲ್ಲಿ ಮಾತ್ರ ನೀರಿಗಾಗಿ ಹಾಹಾಕಾರ ಎದುರಾಗಿದೆ.
ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ಜನರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕುಡಿಯುವ ನೀರಿನ ಮೀಸಲು ಕೆರೆ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಖಾಲಿಯಾಗಿದೆ. ಇದರಿಂದಾಗಿ 10 ದಿನಗಳಿಂದ ಪಟ್ಟಣದಲ್ಲಿ ಕುಡಿಯುವ ನೀರಿಲ್ಲದೇ ಜನರು ಕಂಗಾಲಾಗಿದ್ದಾರೆ.
ಕೆರೆಯಲ್ಲಿ ನೀರಿ ಖಾಲಿಯಾಗಿರುವುದರಿಂದ ಪುರಸಭೆಯಿಂದ ಬೋರ್ ವೆಲ್ನ ಉಪ್ಪು ನೀರು ಸಪ್ಲೈ ಮಾಡಲಾಗುತ್ತಿದೆ. ಈ ನೀರನ್ನು ಕುಡಿದ ಜನರಿಗೆ ಆರೋಗ್ಯ ಸಮಸ್ಯೆ ಉಲ್ಬಣವಾಗಿದೆ.
ಇದಲ್ಲದೇ ಕಲುಷಿತ ನೀರಿನ ಸಮಸ್ಯೆ ಸಿಂಧನೂರು ತಾಲೂಕಿನಲ್ಲಿ ವ್ಯಾಪಿಸಿದೆ. ಇದರಿಂದ ಜನರಲ್ಲಿ ಚರ್ಮದ ಸಮಸ್ಯೆ, ಅಲರ್ಜಿಗೆ ಗ್ರಾಮಸ್ಥರು ತುತ್ತಾಗಿದ್ದಾರೆ.
ತುರಿಕೆಗೆ ಜನರು ಹೈರಾಣಾಗಿದ್ದಾರೆ. ಇಷ್ಟೇಲ್ಲಾ ಅವಾಂತರ ಸೃಷ್ಠಿಯಾಗುತ್ತಿದ್ದರೂ ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿಕುಳಿತ್ತಿದ್ದಾರೆ ಎಂದು ಜನರು ಆರೋಪಿಸಿದ್ದಾರೆ. ಅಲ್ಲದೇ ಆದಷ್ಟು ಬೇಗ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸುತ್ತಿದ್ದಾರೆ.