Raichur Municipal Corporation Recruitment 2025 : ರಾಯಚೂರು ಮಹಾನಗರ ಪಾಲಿಕೆಯ ಕಛೇರಿಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆ : ಪರಿಸರ ಅಭಿಯಂತರರು, ಕಿರಿಯ ಅಭಿಯಂತರರು – ನೀರು ಸರಬರಾಜು, ಸಹಾಯಕ ಅಭಿಯಂತರರು – ವಿದ್ಯುತ್.
ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ರಾಯಚೂರು, ಕರ್ನಾಟಕದಲ್ಲಿ ಕರ್ತವ್ಯ ನಿರ್ವಹಿಸಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 04 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಹುದ್ದೆ ಹುದ್ದೆಗಳ ಸಂಖ್ಯೆ
ಪರಿಸರ ಅಭಿಯಂತರರು 2
ಕಿರಿಯ ಅಭಿಯಂತರರು – ನೀರು ಸರಬರಾಜು 1
ಸಹಾಯಕ ಅಭಿಯಂತರರು – ವಿದ್ಯುತ್ 1
ಶೈಕ್ಷಣಿಕ ಅರ್ಹತೆ :
• ಪರಿಸರ ಅಭಿಯಂತರರು – ಬಿಇ ಎನ್ವಿರಾನ್ಮೆಂಟಲ್/ಕೆಮಿಕಲ್.
• ಕಿರಿಯ ಅಭಿಯಂತರರು (ನೀರು ಸರಬರಾಜು) – ಬಿ.ಟೆಕ್ ಇನ್ ಸಿವಿಲ್ ಇಂಜಿನಿಯರಿಂಗ್ ಜನರಲ್/ ಬಿ.ಟೆಕ್ ಇನ್ ಹೈಡ್ರೋಲಾಜಿ.
• ಸಹಾಯಕ ಅಭಿಯಂತರರು (ವಿದ್ಯುತ್) – ಬಿಇ ಇಲೆಕ್ಟ್ರಿಕಲ್.
ವಯೋಮಾನ : ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಪೂರ್ಣಗೊಂಡಿರಬೇಕು ಹಾಗೂ ಗರಿಷ್ಠ 45 ವರ್ಷ ಮೀರಿರಬಾರದು.
ವೇತನ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 31,000 ರಿಂದ ರೂ. 50,000 ವೇತನ ನೀಡಲಾಗುತ್ತದೆ.
ಆಯ್ಕೆ ವಿಧಾನ : ವಿದ್ಯಾರ್ಹತೆ ಹಾಗೂ ಅನುಭವದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.
ಅನುಭವ : ಹುದ್ದೆಗೆ ನಿಗದಿಪಡಿಸಿದ ಕಾರ್ಯಕ್ಷೇತ್ರದಲ್ಲಿ ಅನುಭವ ಹೊಂದಿರಬೇಕು.
ಅರ್ಜಿ ಸಲ್ಲಿಸುವ ವಿಳಾಸ : ಸಾತ್ ಕಛೇರಿ ಲಿಂಗಸೂಗುರು ರೋಡ್ (ಹಳೆ ಜಿಲ್ಲಾಧಿಕಾರಿಗಳ ಕಾರ್ಯಾಲಯ) ರಾಯಚೂರು – 584101
ಅರ್ಜಿ ಶುಲ್ಕ : ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಮಾರ್ಚ್ 17, 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಏಪ್ರಿಲ್ 07, 2025